ನವದೆಹಲಿ : ನೋಕಿಯಾ ಫೋನ್ ತಯಾರಕ ಕಂಪನಿ ಎಚ್ಎಂಡಿ ಗ್ಲೋಬಲ್ ಹೊಸ ನೋಕಿಯಾ ಸಿ22 (Nokia C22) ಬಜೆಟ್ ಸ್ಮಾರ್ಟ್ಫೋನ್ ಅನ್ನು ಭಾರತದಲ್ಲಿ ಲಾಂಚ್ ಮಾಡಿದೆ. ಕೈಯಿಂದ ಜಾರದಂತೆ ಇದನ್ನು ವಿನ್ಯಾಸಗೊಳಿಸಿರುವುದು ಇದರ ವೈಶಿಷ್ಟ್ಯವಾಗಿದೆ. 7,999 ಆರಂಭಿಕ ಬೆಲೆಯನ್ನು ಹೊಂದಿರುವ ಸ್ಮಾರ್ಟ್ಫೋನ್ ಚಾರ್ಕೋಲ್, ಸ್ಯಾಂಡ್ ಮತ್ತು ಪರ್ಪಲ್ ಬಣ್ಣಗಳಲ್ಲಿ, 4GB (2GB + 2GB ವರ್ಚುವಲ್ RAM) ಆವೃತ್ತಿಯಲ್ಲಿ ಮತ್ತು 6GB (4GB + 2GB ವರ್ಚುವಲ್ RAM) 64GB ಸ್ಟೋರೇಜ್ ಕಾನ್ಫಿಗರೇಶನ್ನೊಂದಿಗೆ ಲಭ್ಯವಿವೆ. ಈ ಫೋನ್ ಮೇ 11 ರಿಂದ ಮಾರಾಟಕ್ಕೆ ಲಭ್ಯವಿದೆ.
"ನೋಕಿಯಾ ಸಿ ಸಿರೀಸ್ ಯಾವಾಗಲೂ ಉತ್ತಮ ಬಳಕೆದಾರ ಅನುಭವವನ್ನು ನೀಡುವ ವಿಶ್ವಾಸಾರ್ಹ, ಕೈಗೆಟುಕುವ ಸ್ಮಾರ್ಟ್ಫೋನ್ಗಳನ್ನು ಒದಗಿಸುತ್ತಿದೆ ಮತ್ತು ಕೈಯಲ್ಲಿ ಆದಷ್ಟೂ ಉತ್ತಮ ಹಿಡಿತ ಇರುವಂತೆ ನೋಕಿಯಾ ಸಿ 22 ಅನ್ನು ತಯಾರಿಸಲಾಗಿದೆ ಎಂದು ಎಚ್ಎಂಡಿ ಗ್ಲೋಬಲ್ನ ಉತ್ಪನ್ನ ಮಾರ್ಕೆಟಿಂಗ್ ಮುಖ್ಯಸ್ಥ ಆಡಮ್ ಫರ್ಗುಸನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ನೋಕಿಯಾ C22 ಮೂರು ದಿನದ ಬ್ಯಾಟರಿ ಬಾಳಿಕೆ, ಡ್ಯುಯಲ್ 13MP ಹಿಂಬದಿ ಮತ್ತು 8MP ಸೆಲ್ಫಿ ಕ್ಯಾಮೆರಾಗಳೊಂದಿಗೆ ಸುಧಾರಿತ ಇಮೇಜಿಂಗ್ ಅಲ್ಗಾರಿದಮ್ಗಳು, ಆಕ್ಟಾ ಕೋರ್ ಪ್ರೊಸೆಸರ್ ಮತ್ತು ಆಂಡ್ರಾಯ್ಡ್ 13 (ಗೋ ಎಡಿಷನ್) ಆಪರೇಟಿಂಗ್ ಸಿಸ್ಟಮ್ ಈ ಎಲ್ಲ ವೈಶಿಷ್ಟ್ಯಗಳನ್ನು ಹೊಂದಿದೆ. ನೋಕಿಯಾ ಸ್ಮಾರ್ಟ್ಫೋನ್ ದೊಡ್ಡ 6.5 ಇಂಚಿನ HD+ ಡಿಸ್ ಪ್ಲೇ ಯನ್ನು ಹೊಂದಿದೆ ಮತ್ತು ಬ್ಯಾಟರಿ ಸೇವರ್ ವೈಶಿಷ್ಟ್ಯದಿಂದ ಬೆಂಬಲಿತವಾದ 5000 mAh ಬ್ಯಾಟರಿ ಇದರಲ್ಲಿದೆ. ನೀರು ಮತ್ತು ಧೂಳಿನ ರಕ್ಷಣೆಗಾಗಿ ಫೋನ್ IP52 ರೇಟಿಂಗ್ ಹೊಂದಿದೆ.