ನವದೆಹಲಿ:ನೋಕಿಯಾ ಆಪಲ್ ಕಂಪನಿಯೊಂದಿಗೆ ಹೊಸ ಪೇಟೆಂಟ್ ಪರವಾನಗಿ ಒಪ್ಪಂದಕ್ಕೆ ಸಹಿ ಹಾಕಿದೆ. ಏಕೆಂದರೆ ಕಂಪನಿಗಳ ನಡುವಿನ ಪ್ರಸ್ತುತ ಪರವಾನಗಿ 2023ರ ಅಂತ್ಯಕ್ಕೆ ಮುಕ್ತಾಯಗೊಳ್ಳುತ್ತದೆ. ಹೀಗಾಗಿ ಹೊಸ ಪೇಟೆಂಟ್ ಪರವಾನಗಿಗೆ ಎರಡು ಕಂಪನಿಗಳ ನಡುವೆ ಒಪ್ಪಂದ ನಡೆದಿದೆ. ಕಾಪಿರೈಟ್ ಉಲ್ಲಂಘನೆಗಾಗಿ ನೋಕಿಯಾ, ಆಪಲ್ ವಿರುದ್ಧ ಮೊಕದ್ದಮೆ ಹೂಡಿದ್ದ ನಂತರ ಐಫೋನ್ ಅನ್ನು ನಕಲು ಮಾಡಲು ಪ್ರಯತ್ನಿಸಿದ್ದಕ್ಕಾಗಿ ಆಪಲ್ 2009ರಲ್ಲಿ ನೋಲಿಯಾ ವಿರುದ್ಧ ಮೊಕದ್ದಮೆ ಹೂಡಿತ್ತು.
2011ರಲ್ಲಿ ಪ್ರಕರಣ ಇತ್ಯರ್ಥವಾಗಿತ್ತು. ಮತ್ತೆ 2016ರಲ್ಲಿ ಕಂಪನಿಗಳ ನಡುವೆ ವಿವಾದ ಉಂಟಾಗಿ ಆಪಲ್ ನೋಕಿಯಾಗೆ 2 ಬಿಲಿಯನ್ ಡಾಲರ್ ಪಾವತಿಸುವ ಮೂಲಕ ವಿವಾದ ಬಗೆಹರಿದಿತ್ತು. ಹೊಸ ಪರವಾನಗಿ ಒಪ್ಪಂದವು 5ಜಿ ಮತ್ತು ಇತರ ತಂತ್ರಜ್ಞಾನಗಳಲ್ಲಿ ನೋಕಿಯಾದ ಬಂಡವಾಳ ಹೂಡಿಕೆಗಳನ್ನು ಒಳಗೊಂಡಿದೆ. ಈ ಮೂಲಕ ನೋಕಿಯಾ ಹಲವು ವರ್ಷಗಳ ಕಾಲ ಆಪಲ್ನಿಂದ ಆದಾಯವನ್ನು ಗಳಿಸಲಿದೆ.
ನೋಕಿಯಾ ಟೆಕ್ನಾಲಜೀಸ್ ಅಧ್ಯಕ್ಷ ಜೆನ್ನಿ ಲುಕಾಂಡರ್ ಮಾತನಾಡಿ, "ಆಪಲ್ನೊಂದಿಗೆ ದೀರ್ಘಕಾಲೀನ ಪೇಟೆಂಟ್ ಪರವಾನಗಿ ಒಪ್ಪಂದ ಮಾಡಿಕೊಳ್ಳಲು ನಾವು ಸಂತೋಷಪಡುತ್ತೇವೆ. ಈ ಒಪ್ಪಂದವು ನೋಕಿಯಾದ ಪೇಟೆಂಟ್ ಪೋರ್ಟ್ಫೋಲಿಯೊದ ಬಲವನ್ನು ಪ್ರತಿಬಿಂಬಿಸುತ್ತದೆ. ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ದಶಕಗಳ ಕಾಲ ಹೂಡಿಕೆ ಮತ್ತು ಸೆಲ್ಯುಲಾರ್ ಮಾನದಂಡಗಳು ಇತರ ತಂತ್ರಜ್ಞಾನಗಳಿಗೆ ಕೊಡುಗೆಯಾಗಿದೆ.
ನೋಕಿಯಾದ ಉದ್ಯಮ ಪ್ರಮುಖ ಪೇಟೆಂಟ್ ಪೋರ್ಟ್ಫೋಲಿಯೊವನ್ನು 2000 ದಿಂದ ಆರ್ & ಡಿಯಲ್ಲಿ ಹೂಡಿಕೆ ಮಾಡಿದ 140 ಬಿಲಿಯನ್ ಯುರೋಗಳಿಗಿಂತ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾಗಿದೆ ಮತ್ತು 5Gಗೆ ಅತ್ಯಗತ್ಯ ಎಂದು ಘೋಷಿಸಲಾದ 5,500ಕ್ಕೂ ಹೆಚ್ಚು ಪೇಟೆಂಟ್ ಸೇರಿದಂತೆ ಸುಮಾರು 20,000 ಪೇಟೆಂಟ್‌ಗಳನ್ನು ಕಂಪನಿ ಒಳಗೊಂಡಿದೆ ಎಂದು ತಿಳಿಸಿದ್ದಾರೆ.