ಕರ್ನಾಟಕ

karnataka

ETV Bharat / science-and-technology

ರಸಾಯನಶಾಸ್ತ್ರದ 2022 ನೊಬೆಲ್ ಪ್ರಶಸ್ತಿ: ಜಂಟಿಯಾಗಿ ಮೂವರು ವಿಜ್ಞಾನಿಗಳಿಗೆ ಘೋಷಣೆ

ಕ್ಲಿಕ್ ರಸಾಯನಶಾಸ್ತ್ರದಲ್ಲಿನ ಕೆಲಸಕ್ಕಾಗಿ ಜಂಟಿಯಾಗಿ ಕ್ಯಾರೊಲಿನ್ ಬರ್ಟೊಜಿ, ಮೊರ್ಟೆನ್ ಮೆಲ್ಡೆಲ್ ಮತ್ತು ಕೆ. ಬ್ಯಾರಿ ಶಾರ್ಪ್‌ಲೆಸ್​ಗೆ ಈ ಬಾರಿಯ ರಸಾಯನಶಾಸ್ತ್ರದ ನೊಬೆಲ್​ ಪ್ರಶಸ್ತಿ ನೀಡಲಾಗುವುದು.

Chemistry
ರಸಾಯನಶಾಸ್ತ್ರದ 2022 ನೊಬೆಲ್ ಪ್ರಶಸ್ತಿ

By

Published : Oct 5, 2022, 3:55 PM IST

ಸ್ಟಾಕ್‌ಹೋಮ್: ಈ ವರ್ಷದ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಕ್ಯಾರೊಲಿನ್ ಬರ್ಟೊಜಿ, ಮೊರ್ಟೆನ್ ಮೆಲ್ಡೆಲ್ ಮತ್ತು ಕೆ. ಬ್ಯಾರಿ ಶಾರ್ಪ್‌ಲೆಸ್‌ಗೆ ಕ್ಲಿಕ್ ರಸಾಯನಶಾಸ್ತ್ರದಲ್ಲಿನ ಅವರ ಕೆಲಸಕ್ಕಾಗಿ ಜಂಟಿಯಾಗಿ ನೀಡಲಾಗಿದೆ.

ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್‌ನ ಪ್ರಧಾನ ಕಾರ್ಯದರ್ಶಿ ಹ್ಯಾನ್ಸ್ ಎಲೆಗ್ರೆನ್ ಅವರು ವಿಜೇತರ ಹೆಸರನ್ನು ಬುಧವಾರ ಸ್ಟಾಕ್‌ಹೋಮ್‌ನ ಕರೋಲಿನ್ಸ್ಕಾ ಇನ್‌ಸ್ಟಿಟ್ಯೂಟ್‌ನಲ್ಲಿ ಘೋಷಿಸಿದರು.

ಇದನ್ನೂ ಓದಿ:ಮೂವರು ವಿಜ್ಞಾನಿಗಳಿಗೆ ಜಂಟಿಯಾಗಿ 2022ರ ನೊಬೆಲ್ ಭೌತಶಾಸ್ತ್ರ ಪ್ರಶಸ್ತಿ

ನೊಬೆಲ್ ಶಾಂತಿ ಪ್ರಶಸ್ತಿಯನ್ನು ಶುಕ್ರವಾರ ಮತ್ತು ಅರ್ಥಶಾಸ್ತ್ರ ಪ್ರಶಸ್ತಿಯನ್ನು ಅಕ್ಟೋಬರ್ 10 ರಂದು ಘೋಷಿಸಲಾಗುವುದು. ಬಹುಮಾನವು 10 ಮಿಲಿಯನ್ ಸ್ವೀಡಿಷ್ ಕ್ರೋನರ್ (ಸುಮಾರು USD 900,000) ನಗದು ಪ್ರಶಸ್ತಿಯನ್ನು ಹೊಂದಿರುತ್ತವೆ ಮತ್ತು ಡಿಸೆಂಬರ್ 10 ರಂದು ನೀಡಲಾಗುವುದು. ಹಣವು ಉಯಿಲಿನಿಂದ ಬರುತ್ತದೆ. ನೊಬೆಲ್ ಸಂಸ್ಥಾಪಕ ಹಾಗೂ ಸ್ವೀಡಿಷ್ ಸಂಶೋಧಕ ಆಲ್ಫ್ರೆಡ್ ನೊಬೆಲ್ ಅವರು 1895 ರಲ್ಲಿ ಬರೆದ ಉಯಿಲಿನ (ವಿಲ್) ಪ್ರಕಾರ ಈ ಬಹುಮಾನ ನೀಡಲಾಗುತ್ತದೆ.


ABOUT THE AUTHOR

...view details