ನವದೆಹಲಿ:ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಜುಲೈ 15 ರಂದು ಬೆಳಗ್ಗೆ 11 ಗಂಟೆಗೆ NIRF ರ‍್ಯಾಂಕಿಂಗ್ 2022ರ ಪಟ್ಟಿಯನ್ನು ಬಿಡುಗಡೆಗೊಳಿಸಿದರು. ಈ ವರ್ಷದ ಭಾರತದ ಉನ್ನತ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳು ಯಾವುವು ಎಂಬುದನ್ನು ಈ ಪಟ್ಟಿ ಹೇಳುತ್ತದೆ. ಐಐಟಿ ಅಂದರೆ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯನ್ನೂ ಈ ಬಾರಿ ದೇಶದ ಹೆಸರಾಂತ ಸಂಸ್ಥೆ ಎಂದು ಪರಿಗಣಿಸಲಾಗಿದೆ.
ಈ ಬಾರಿಯೂ ಐಐಟಿ ರೂರ್ಕಿಯು ಭಾರತದ ಉನ್ನತ ಶಿಕ್ಷಣ ಸಂಸ್ಥೆಗಳ 2022 ರ ರ್ಯಾಂಕಿಂಗ್ನಲ್ಲಿ ಸ್ಥಾನವನ್ನು ಪಡೆದುಕೊಂಡಿದೆ. ಐಐಟಿ ಮದ್ರಾಸ್ (ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮದ್ರಾಸ್) ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಐಐಟಿ ಬೆಂಗಳೂರು ಎರಡನೇ ಮತ್ತು ಐಐಟಿ ಬಾಂಬೆ ಮೂರನೇ ಸ್ಥಾನದಲ್ಲಿದೆ. ಐಐಟಿ ರೂರ್ಕಿ ಕೂಡ ಈ ಪಟ್ಟಿಯನ್ನು ಸೇರಿದ್ದು, ಏಳನೇ ಸ್ಥಾನದಲ್ಲಿದೆ. ಇದು ಉತ್ತರಾಖಂಡ ರಾಜ್ಯಕ್ಕೆ ಹೆಮ್ಮೆಯ ವಿಷಯವಾಗಿದೆ.
ಐಐಎಂ ಅಹಮದಾಬಾದ್ ‘ಮ್ಯಾನೇಜ್‌ಮೆಂಟ್’ ವಿಭಾಗದಲ್ಲಿ ಅಗ್ರಸ್ಥಾನದಲ್ಲಿದ್ದರೆ, ‘ವಿಶ್ವವಿದ್ಯಾಲಯಗಳ’ ವಿಭಾಗದಲ್ಲಿ ಐಐಎಸ್‌ಸಿ ಬೆಂಗಳೂರು ಅಗ್ರಸ್ಥಾನದಲ್ಲಿದೆ. ದೆಹಲಿಯ ಏಮ್ಸ್ ಭಾರತದ ಅತ್ಯುತ್ತಮ ವೈದ್ಯಕೀಯ ಕಾಲೇಜಾಗಿದ್ದು, ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿ ದೇಶದ ಉನ್ನತ ಕಾನೂನು ಶಾಲೆಯಾಗಿದೆ. ‘ಕಾಲೇಜುಗಳು’ ವಿಭಾಗದಲ್ಲಿ ಮಿರಾಂಡಾ ಹೌಸ್ ಅಗ್ರಸ್ಥಾನ ಪಡೆದಿದೆ.
ಇದನ್ನೂ ಓದಿ:ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ: ಇಂದು ಪರೀಕ್ಷೆ ವಂಚಿತ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಅವಕಾಶ
ಭಾರತವು 45,000 ಪದವಿ ಕಾಲೇಜುಗಳನ್ನು ಹೊಂದಿದ್ದು, 1000 ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳು ಮತ್ತು ಸುಮಾರು 1,500 ಉನ್ನತ ಸಂಸ್ಥೆಗಳನ್ನು ಹೊಂದಿದೆ. NIRF ಶ್ರೇಯಾಂಕಕ್ಕಾಗಿ ನೋಂದಾಯಿಸಲಾದ ಭಾರತೀಯ ಸಂಸ್ಥೆಗಳ ಸಂಖ್ಯೆಯು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಕಾಲೇಜುಗಳಿಗೆ ರ‍್ಯಾಂಕಿಂಗ್ ನೀಡಲು NIRF ಆಯ್ಕೆ ಮಾಡಿದ ವಿಭಾಗಗಳೆಂದರೇ, ವಿಶ್ವವಿದ್ಯಾನಿಲಯಗಳು, ಇಂಜಿನಿಯರಿಂಗ್, ನಿರ್ವಹಣೆ, ಔಷಧಾಲಯ, ಕಾಲೇಜುಗಳು, ವೈದ್ಯಕೀಯ, ಕಾನೂನು, ವಾಸ್ತುಶಿಲ್ಪ ಮತ್ತು ಡೆಂಟಲ್.