ಕರ್ನಾಟಕ

karnataka

ETV Bharat / science-and-technology

ಭಾರತೀಯ ಸೈಬರ್‌ಸ್ಪೇಸ್​ಗೆ ಹೊಸ ಮೊಬೈಲ್ ಬ್ಯಾಂಕಿಂಗ್ ವೈರಸ್ ಎಂಟ್ರಿ.. ಗ್ರಾಹಕರೇ ಎಚ್ಚರ - New mobile banking virus

ಹೊಸದೊಂದು ಮೊಬೈಲ್​ ಬ್ಯಾಂಕಿಂಗ್​ ವೈರಸ್​ ಭಾರತಕ್ಕೆ ಕಾಲಿಟ್ಟಿದ್ದು, ಇದು ಭಾರತೀಯ ಗ್ರಾಹಕರನ್ನು ಗುರಿಯಾಗಿಸುತ್ತದೆ. ಇದು ಗ್ರಾಹಕರಿಗೆ ತಿಳಿಯದಂತೆ ಮೊಬೈಲ್​ಗೆ ಎಂಟ್ರಿಕೊಡುತ್ತದೆ. ಅಲ್ಲದೇ ಅನ್‌ಇನ್‌ಸ್ಟಾಲ್ ಮಾಡುವುದು ತುಂಬಾ ಕಷ್ಟಕರವಾಗಿದೆ.

ಮೊಬೈಲ್​ ಬ್ಯಾಂಕಿಂಗ್​ ವೈರಸ್​
ಮೊಬೈಲ್​ ಬ್ಯಾಂಕಿಂಗ್​ ವೈರಸ್​

By

Published : Sep 15, 2022, 5:40 PM IST

ನವದೆಹಲಿ:ಹೊಸ ಮೊಬೈಲ್ ಬ್ಯಾಂಕಿಂಗ್ 'ಟ್ರೋಜನ್' ವೈರಸ್ ಸೋವಾ ಆಂಡ್ರಾಯ್ಡ್ ಫೋನ್​ನಲ್ಲಿ ಗೊತ್ತಿಲ್ಲದಂತೆ ಸೇರಿಕೊಂಡು, ನಿಮ್ಮನ್ನು ಸುಲಿಗೆ ಮಾಡಬಹುದು. ಒಂದು ಬಾರಿ ಇದು ಫೋನ್​ ಒಳಗೆ ಸೇರಿಕೊಂಡರೇ, ಅನ್‌ಇನ್‌ಸ್ಟಾಲ್ ಮಾಡುವುದು ಕಷ್ಟ.. ಕಷ್ಟ. ಇದು ಭಾರತೀಯ ಗ್ರಾಹಕರನ್ನು ಗುರಿಯಾಗಿಸುತ್ತದೆ ಎಂದು ದೇಶದ ಫೆಡರಲ್ ಸೈಬರ್ ಸೆಕ್ಯುರಿಟಿ ಏಜೆನ್ಸಿ ತನ್ನ ಇತ್ತೀಚಿನ ಸಲಹೆಯಲ್ಲಿ ತಿಳಿಸಿದೆ.

ಜುಲೈನಲ್ಲಿ ಭಾರತೀಯ ಸೈಬರ್‌ಸ್ಪೇಸ್‌ನಲ್ಲಿ ಮೊದಲು ಪತ್ತೆಯಾದ ನಂತರ ವೈರಸ್ ತನ್ನ ಐದನೇ ಆವೃತ್ತಿಗೆ ಅಪ್‌ಗ್ರೇಡ್ ಆಗಿದೆ ಎಂದು ಏಜೆನ್ಸಿ ಹೇಳಿದೆ. SOVA ಆಂಡ್ರಾಯ್ಡ್ ಟ್ರೋಜನ್ ಅನ್ನು ಬಳಸಿಕೊಂಡು ಹೊಸ ರೀತಿಯ ಮೊಬೈಲ್ ಬ್ಯಾಂಕಿಂಗ್ ಮಾಲ್ವೇರ್ ಅಭಿಯಾನದಿಂದ ಭಾರತೀಯ ಬ್ಯಾಂಕಿಂಗ್ ಗ್ರಾಹಕರನ್ನು ಗುರಿಯಾಗಿಸಬಹುದಾಗಿದೆ.

ಈ ಮಾಲ್‌ವೇರ್‌ನ ಮೊದಲ ಆವೃತ್ತಿಯು ಸೆಪ್ಟೆಂಬರ್ 2021 ರಲ್ಲಿ ಕಾಣಿಸಿಕೊಂಡಿತ್ತು. ಈ ವೈರಸ್​ ಮೊದಲು ಯುಎಸ್​, ರಷ್ಯಾ ಮತ್ತು ಸ್ಪೇನ್‌ ನಂತಹ ದೇಶಗಳ ಮೇಲೆ ಕೇಂದ್ರೀಕರಿಸಿತ್ತು. ಆದರೆ ಜುಲೈ 2022 ರಲ್ಲಿ ಅದು ಭಾರತ ಸೇರಿದಂತೆ ಹಲವಾರು ಇತರ ದೇಶಗಳನ್ನು ತನ್ನ ಗುರಿಗಳ ಪಟ್ಟಿಗೆ ಸೇರಿಸಿಕೊಂಡಿದೆ. ಬಳಕೆದಾರರು ತಮ್ಮ ನೆಟ್ ಬ್ಯಾಂಕಿಂಗ್ ಅಪ್ಲಿಕೇಶನ್‌ಗಳಿಗೆ ಲಾಗ್ ಇನ್ ಮಾಡಿದಾಗ ಮತ್ತು ಬ್ಯಾಂಕ್ ಖಾತೆಗಳಿಗೆ ಪ್ರವೇಶಿಸಿದಾಗ ಈ ಮಾಲ್‌ವೇರ್ ಅವರ ಸಹಿಯನ್ನು ನಕಲು ಮಾಡುತ್ತದೆ.

ಇದನ್ನೂ ಓದಿ:ಕೇರಳ ಪೊಲೀಸರಿಂದ ಪೋಲ್ ಆ್ಯಪ್​; ಬೀಗ ಹಾಕಿದ ಮನೆಯ ಭದ್ರತೆಗಾಗಿ ಮೊಬೈಲ್ ಅಪ್ಲಿಕೇಶನ್

ಹೇಗೆ ಜಾಗರೂಕತೆ ವಹಿಸಬೇಕು.. SOVA ಯ ಹೊಸ ಆವೃತ್ತಿಯು ಬ್ಯಾಂಕಿಂಗ್ ಅಪ್ಲಿಕೇಶನ್‌ಗಳು ಮತ್ತು ಕ್ರಿಪ್ಟೋ ಎಕ್ಸ್‌ಚೇಂಜ್‌ಗಳು/ವ್ಯಾಲೆಟ್‌ಗಳು ಸೇರಿದಂತೆ 200ಕ್ಕೂ ಹೆಚ್ಚು ಮೊಬೈಲ್ ಅಪ್ಲಿಕೇಶನ್‌ಗಳನ್ನು ಗುರಿಯಾಗಿಸಿಕೊಂಡಿದೆ. ಈ ವೈರಸ್​ನಿಂದ ತಪ್ಪಿಸಿಕೊಳ್ಳಲು ಬ್ಯಾಂಕ್​ ಗ್ರಾಹಕರು ಅಪ್ಲಿಕೇಶನ್​ಗಳಿಗೆ ಅನುಮತಿ ನೀಡುವಾಗ ಪರಿಶೀಲಿಸಬೇಕು. ವಿಶ್ವಾಸಾರ್ಹವಲ್ಲದ ವೆಬ್‌ಸೈಟ್‌ಗಳನ್ನು ಬ್ರೌಸ್ ಮಾಡಬಾರದು. ವಿಶ್ವಾಸಾರ್ಹವಲ್ಲದ ಲಿಂಕ್‌ಗಳನ್ನು ಒತ್ತಬಾರದು ಮತ್ತು ಎಚ್ಚರಿಕೆ ವಹಿಸಬೇಕು.

ABOUT THE AUTHOR

...view details