ಕರ್ನಾಟಕ

karnataka

ETV Bharat / science-and-technology

ಕೊಲೆಸ್ಟ್ರಾಲ್​ ನಿಯಂತ್ರಿಸಲು ಹೊಸ ಔಷಧ.. ಏನ್​ ಹೇಳುತ್ತೆ ಅಧ್ಯಯನ ವರದಿ? - ಹೊಸ ಔಷಧ ಪತ್ತೆ

ಪಿಸಿಎಸ್​ಕೆ9 ಪ್ರತಿರೋಧಕಗಳನ್ನು ಅಭಿದಮನಿ ಮೂಲಕ ಮಾತ್ರ ನೀಡಬಹುದಾಗಿದೆ.

ಕೊಲೆಸ್ಟ್ರಾಲ್​ ಕಡಿಮೆ ಮಾಡಲು ಹೊಸ ಔಷಧ ಪತ್ತೆ
New drug discovered to reduce cholesterol

By

Published : Nov 19, 2022, 1:38 PM IST

ಹೈದರಾಬಾದ್​: ಸ್ಟ್ಯಾಟಿನ್‌ಗಳ ನಂತರ ಪಿಸಿಎಸ್​ಕೆ9 ಪ್ರತಿರೋಧಕ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಅತಿ ಹೆಚ್ಚು ಬಳಸಲಾಗುವ ಎರಡನೇ ಔಷಧ ಆಗಿದೆ. ಇದು ಅತ್ಯಂತ ಪರಿಣಾಮಕಾರಿ ಔಷಧವಾಗಿದ್ದು, ರಕ್ತದಲ್ಲಿನ ಹೆಚ್ಚುವರಿ ಕೊಲೆಸ್ಟ್ರಾಲ್ ಅನ್ನು ತೆಗೆದುಹಾಕಲು ಸಹಾಯ ಮಾಡುತ್ತವೆ. ಪಿಸಿಎಸ್​ಕೆ9 ಪ್ರತಿರೋಧಕಗಳನ್ನು ಅಭಿದಮನಿ ಮೂಲಕ ಮಾತ್ರ ನೀಡಬಹುದಾಗಿದೆ.

ಯೂನಿವರ್ಸಿಟಿ ಹಾಸ್ಪಿಟಲ್ಸ್ ಮತ್ತು ಕೇಸ್ ವೆಸ್ಟರ್ನ್ ರಿಸರ್ವ್ ಯೂನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್‌ನ ಸಂಶೋಧಕರು ನಡೆಸಿದ ಹೊಸ ಅಧ್ಯಯನದ ಅನುಸಾರ, ಪಿಸಿಎಸ್‌ಕೆ9 ಮಟ್ಟಗಳು ಮತ್ತು ಪ್ರಾಣಿಗಳ ಮಾದರಿಗಳಲ್ಲಿನ ಕೊಲೆಸ್ಟ್ರಾಲ್ ಅನ್ನು ಶೇಕಡಾ 70 ರಷ್ಟು ಕಡಿಮೆ ಮಾಡುವ ಔಷಧಿಯಾಗಿ ವಿವರಿಸಲಾಗಿದೆ. ಈ ಅಧ್ಯಯನದ ಅನುಸಾರ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುವ ಜೊತೆ ಇದು ಕ್ಯಾನ್ಸರ್ ಚಿಕಿತ್ಸೆಗಳ ಮೇಲೆ ಪರಿಣಾಮ ಬೀರಬಹುದು.

ಹೃದಯ ಕಾಯಿಲೆಗೆ ಒಳಗಾದ ಜನರನ್ನು ರಕ್ಷಿಸುವ ಪ್ರಮಖ ಚಿಕಿತ್ಸೆಯಲ್ಲಿ ಕೊಲೆಸ್ಟ್ರಾಲ್ ಅನ್ನು ಕಡಿಮೆಗೊಳಿಸುವುದು ಪ್ರಮುಖವಾಗಿದೆ. ಈ ಕೊಲೆಸ್ಟ್ರಾಲ್​ ಪಾಶ್ಚಿಮಾತ್ಯ ದೇಶಗಳಲ್ಲಿ ಅನಾರೋಗ್ಯ ಮತ್ತು ಸಾವಿಗೆ ಕಾರಣವಾಗಿದೆ. ಸ್ಟ್ಯಾಟಿನ್‌ಗಳು ಇಲ್ಲಿಯವರೆಗೆ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಬಳಕೆ ಮಾಡಲಾಗುತ್ತಿತ್ತು. ಈ ಪಿಸಿಎಸ್​ಕೆ ಔಷಧ ಹೊಸ ಮಾರ್ಗವಾಗಿದೆ ಎಂದು ಸಂಶೋಧನೆ ಬಹಿರಂಗಪಡಿಸಿದೆ.

ಯಕೃತ್ತಿನ ಜೀವಕೋಶಗಳ ಮೇಲ್ಮೈಯಲ್ಲಿ ಕಂಡುಬರುವ ಮತ್ತು ರಕ್ತದಿಂದ ಕೊಲೆಸ್ಟ್ರಾಲ್ ಅನ್ನು ನಿವಾರಣೆ ಮಾಡುವಲ್ಲಿ ಎಲ್​ಡಿಎಲ್​​ ಗ್ರಾಹಕಗಳು ಸೀರಮ್ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಅವಶ್ಯಕವಾಗಿದೆ. ರಕ್ತಪ್ರವಾಹದಲ್ಲಿ ಪಿಸಿಎಸ್​ಕೆ9​ ಗ್ರಾಹಕಗಳ ಸಂಖ್ಯೆಯನ್ನು ನಿಯಂತ್ರಿಸುತ್ತದೆ. ಕೊಲೆಸ್ಟ್ರಾಲ್ ನಿವಾರಣೆಯಲ್ಲಿ ಎಲ್​ಡಿಎಲ್​ ಗ್ರಾಹಕಗಳ ಪ್ರಮಾಣವು ಪಿಸಿಎಸ್​ಕೆ9 ಪ್ರತಿರೋಧಕಗಳಿಂದ ಹೆಚ್ಚಾಗುತ್ತದೆ.

ಈ ಸಂಶೋಧನೆಗಳು ಕ್ಯಾನ್ಸರ್ ರೋಗಿಗಳ ಮೇಲೆ ಮತ್ತು ಕೊಲೆಸ್ಟ್ರಾಲ್ ಮೆಟಾಬಾಲಿಸಮ್ ಮೇಲೆ ಪರಿಣಾಮ ಬೀರಬಹುದು. ಕ್ಯಾನ್ಸರ್ ಇಮ್ಯುನೊಥೆರಪಿಗಳ ಪರಿಣಾಮಕಾರಿತ್ವವನ್ನು ಹೆಚ್ಚಿಸುತ್ತದೆ ಎಂದು ಸೂಚಿಸುತ್ತದೆ.

ABOUT THE AUTHOR

...view details