ನವದೆಹಲಿ: ಕ್ರಿಯಾತ್ಮಕತೆ ಮತ್ತು ವೃತ್ತಿಪರ ಕೆಲಸ ಯಾವುದೇ ಇರಲಿ ಅಲ್ಲಿ ಒಂದು ಬರಹ, ಸ್ಕೇಚ್, ಕಲ್ಪನೆ ಅಥವಾ ಗುರುತಿನ ದಾಖಲಾತಿ ಬೇಕಾಗುತ್ತದೆ. ಈ ಕೆಲಸವನ್ನು ಇದೀಗ ಆ್ಯಪಲ್ ಪೆನ್ಸಿಲ್ ಮತ್ತಷ್ಟು ಸುಲಭಗೊಳಿಸಲಿದೆ. ಹಲವು ವರ್ಷಗಳಿಂದ ನಂಬಿಕೆ ಅರ್ಹವಾಗಿರುವ ಈ ಆ್ಯಪಲ್ ಪೆನ್ಸಿಲ್ ಐಪಾಡ್ ಜೊತೆ ಹೊಸ ಅನುಭವ ನೀಡುವುದು ಸುಳ್ಳಲ್ಲ. ಇದೀಗ ಹೊಸ ಆ್ಯಪಲ್ ಪೆನ್ಸಿಲ್ ಡಿಜಿಟಲ್ ಬರವಣಿಗೆ ಸೇರಿದಂತೆ ಹೊಸ ಅನುಭವದ ಅವಕಾಶ ನೀಡಲಿದೆ.
ಹೊಸ ಆ್ಯಪಲ್ ಪೆನ್ಸಿಲ್ ಪಿಕ್ಸೆಲ್ ಪರಿಪೂರ್ಣತೆಯ ನಿಖರತೆ, ಕಡಿಮೆ ಲೆಟೆನ್ಸಿ ಮತ್ತು ಟಿಲ್ಟ್ ಸೆನ್ಸಿಟಿವಿಟಿ ಹೊಂದಿದ್ದು, ಮ್ಯಾಟ್ ಫಿನಿಶ್ ಜೊತೆಗೆ ಪ್ಲಾಟ್ ಸೈಡ್ ಜೊತೆಗೆ ಮ್ಯಾಗ್ನೆಟಿಕ್ ಆಗಿ ಜೋಡಣೆ ಹೊಂದಿದೆ. ಯುಎಸ್‌ಬಿ ಸಿ ಪೋರ್ಟ್ ಅನ್ನು ಕವರ್ ಮಾಡಲು ವಿಶೇಷವಾಗಿ ವಿನ್ಯಾಸ ಮಾಡಲಿದೆ. ಜೊತೆಗೆ ಸುಲಭದಾಯಕ ಸಂಪರ್ಕ ಮತ್ತು ಚಾರ್ಜಿಂಗ್ ಅವಕಾಶ ಹೊಂದಿದೆ. ಇದು ಐಪ್ಯಾಡ್ನ ತುದಿಯಲ್ಲಿ ಮ್ಯಾಗ್ನೆಟಿಕ್ ಅಟ್ಯಾಚ್ ಕೂಡಾ ಹೊಂದಿದೆ. ಇದು ಐಪಾಡ್ಒಎಸ್ ಲಕ್ಷಣಗಳಾದ ಸ್ಕ್ರಿಬಲ್, ಕ್ವಿಕ್ ನೋಟ್ ಇತರಗಳೊಂದಿಗೆ ಅದ್ಬುತವಾಗಿ ಕಾರ್ಯ ನಿರ್ವಹಿಸಲಿದೆ
ಎಂ2 ಮಾದರಿಯ ಐಪಾಡ್ ಪ್ರೊ ಬಳಕೆ ಮಾಡಿದಾಗ ಹೊಸ ಆಪಲ್ ಪೆನ್ಸಿಲ್ ಹೋವರ್ ಅನ್ನು ಬೆಂಬಲಿಸುತ್ತದೆ. ಬಳಕೆದಾರರಿಗೆ ಸ್ಕೆಚ್ ಮಾಡಲು ಮತ್ತು ಇನ್ನೂ ಹೆಚ್ಚಿನ ನಿಖರತೆಯೊಂದಿಗೆ ವಿವರಿಸಲು ಅನುವು ಮಾಡಿಕೊಡುತ್ತದೆ.