ಪ್ರಸ್ತುತ, ಕೋವಿಡ್-19 ರೋಗನಿರ್ಣಯದ ಪ್ರತಿಯೊಂದು ಕಾರ್ಯವಿಧಾನಗಳು ಪ್ರತ್ಯೇಕ ಮೌಲ್ಯಮಾಪನಗಳು ಮತ್ತು ಸಂಕೀರ್ಣ ಕೆಲಸಗಳನ್ನು ಒಳಗೊಂಡಿರುತ್ತವೆ. ವಿಶ್ಲೇಷಣೆಗಳನ್ನು ಸಾಮಾನ್ಯವಾಗಿ ಹೆಚ್ಚು ವಿಶೇಷ ಸೌಲಭ್ಯಗಳಲ್ಲಿ ನಡೆಸಲಾಗುತ್ತದೆ.
ETV Bharat / science-and-technology
ಕೋವಿಡ್-19ಗಾಗಿ ಹೊಸ ಆಲ್-ಇನ್-ಒನ್ ಟೆಸ್ಟ್! - ಕೋವಿಡ್-19ಗಾಗಿ ಹೊಸ ಆಲ್-ಇನ್-ಒನ್ ಟೆಸ್ಟ್
ಸಂಶೋಧಕರು ಕೋವಿಡ್-19 ಪರೀಕ್ಷಾ ಕಾರ್ಯತಂತ್ರವನ್ನು ಅಭಿವೃದ್ಧಿಪಡಿಸಿದ್ದಾರೆ. ಅದು ಪ್ರಕರಣಗಳನ್ನು ಗುರುತಿಸುವುದು, ರೂಪಾಂತರಗಳನ್ನು ಪತ್ತೆಹಚ್ಚುವ ಪ್ರಕ್ರಿಯೆಯನ್ನು ಸುಗಮಗೊಳಿಸುತ್ತದೆ.
![ಕೋವಿಡ್-19ಗಾಗಿ ಹೊಸ ಆಲ್-ಇನ್-ಒನ್ ಟೆಸ್ಟ್! Slug sb-all-in-one-test-for-COVID-19](https://etvbharatimages.akamaized.net/etvbharat/prod-images/768-512-11497093-thumbnail-3x2-medjpg.jpg)
Slug sb-all-in-one-test-for-COVID-19
ಸೌದಿ ಅರೇಬಿಯಾದ ಕಿಂಗ್ ಅಬ್ದುಲ್ಲಾ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ (KAUST) ತಂಡವು ಈಗ ಎಲ್ಲ ಮೂರು ರೀತಿಯ ಪರೀಕ್ಷೆಗಳನ್ನು ಒಂದೇ ಕಾರ್ಯವಿಧಾನವಾಗಿ ಸಂಯೋಜಿಸಿದೆ. ಇದು ಕೋವಿಡ್-19 ಮತ್ತು SARS-CoV-2ನ ಅನೇಕ ರೂಪಾಂತರಗಳ ಪಾಯಿಂಟ್- ಆಫ್ - ಕೇರ್ ಟ್ರ್ಯಾಕಿಂಗ್‌ಗೆ ಅನುವು ಮಾಡಿಕೊಡುತ್ತದೆ.
"ನಮ್ಮ ಆಲ್ ಇನ್ ಒನ್ ಪರೀಕ್ಷೆಯು ಸಾಂಕ್ರಾಮಿಕ ವೈರಸ್‌ಗಳ ಕ್ಷಿಪ್ರ ಪತ್ತೆ ಮತ್ತು ಪರಸ್ಪರ ಕಣ್ಗಾವಲಿಗಾಗಿ ಭರವಸೆಯ ಸಮಗ್ರ ಪರಿಹಾರವನ್ನು ಒದಗಿಸುತ್ತದೆ" ಎಂದು ಅಧ್ಯಯನದ ಪ್ರಮುಖ ಲೇಖಕ ಹಾಗೂ ಸ್ಟೆಮ್ ಸೆಲ್ ಜೀವಶಾಸ್ತ್ರಜ್ಞ ಮೊ ಲಿ ಹೇಳಿದ್ದಾರೆ.