ನವದೆಹಲಿ:ಇತ್ತೀಚಿನ ಐಒಎಸ್ 17.2.1 ಅಪ್ಡೇಟ್ ನಂತರ ಜಾಗತಿಕವಾಗಿ ಐಫೋನ್ಗಳಲ್ಲಿ ನೆಟ್ವರ್ಕ್ ಕನೆಕ್ಷನ್ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ ಎಂದು ವರದಿಯಾಗಿದೆ. ಆ್ಯಪಲ್ ಇತ್ತೀಚೆಗೆ ಐಒಎಸ್ 17.2.1 ಅಪ್ಡೇಟ್ ಬಿಡುಗಡೆ ಮಾಡಿತ್ತು. ಇದರಲ್ಲಿ ಹೊಸ ವೈಶಿಷ್ಟ್ಯವೇನೂ ಇರಲಿಲ್ಲ, ಆದರೆ ಕೆಲ ಸಮಯದಿಂದ ಕಾಡುತ್ತಿದ್ದ ಬ್ಯಾಟರಿ ಡ್ರೈನ್ ಸಮಸ್ಯೆಯನ್ನು ಇದು ಪರಿಹರಿಸಿತ್ತು.
ಆ್ಯಪಲ್ನ ಸಪೋರ್ಟ್ ಕಮ್ಯುನಿಟಿ ಚರ್ಚೆಯ ವೆಬ್ಸೈಟ್ನಲ್ಲಿ ಐಫೋನ್ ಬಳಕೆದಾರರು ಐಒಎಸ್ 17.1.2 ಅನ್ನು ಇನ್ಸ್ಟಾಲ್ ಮಾಡಿದ ನಂತರ ತಮ್ಮ ಐಫೊನ್ನಲ್ಲಿ ಕಾಣಿಸಿಕೊಂಡಿರುವ ಸಮಸ್ಯೆಗಳ ಬರೆದಿದ್ದಾರೆ ಎಂದು ಫೋನ್ಅರೆನಾ ವರದಿ ಮಾಡಿದೆ.
"ಕಳೆದ ರಾತ್ರಿ ನನ್ನ ಐಫೋನ್ ನಲ್ಲಿ 17.2.1 ಅಪ್ಡೇಟ್ ಇನ್ಸ್ಟಾಲ್ ಮಾಡಿದ ನಂತರ ನನ್ನ ಫೋನ್ ನೆಟ್ವರ್ಕ್ಗೆ ಕನೆಕ್ಟ್ ಆಗುತ್ತಿಲ್ಲ. ರಿಸೆಟ್ ಮಾಡಿ ಪ್ರಯತ್ನಿಸಿದರೂ ನನ್ನ ಪೋನ್ ಕೆಲಸ ಮಾಡುತ್ತಿಲ್ಲ. ಇದು ತುಂಬಾ ನಿರಾಶಾದಾಯಕ. ಹಲವು ವರ್ಷಗಳಿಂದ ಆ್ಯಪಲ್ ಮೇಲೆ ಭರವಸೆ ಇತ್ತು, ಆದರೆ ಈಗ ಅದು ಕಡಿಮೆಯಾಗುತ್ತಿದೆ" ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ.
"ಈ ನೆಟ್ವರ್ಕ್ ಸಮಸ್ಯೆಯನ್ನು ಹೇಗೆ ಪರಿಹರಿಸುವುದು ಎಂಬುದರ ಬಗ್ಗೆ ಯಾವುದೇ ಮಾಹಿತಿ ಇದ್ದರೆ ತಿಳಿಸಿ. ಕಳೆದ ರಾತ್ರಿ ಹೊಸ ಅಪ್ಡೇಟ್ ಇನ್ಸ್ಟಾಲ್ ಮಾಡಿಕೊಂಡ ನಂತರ ಯಾವುದೇ ನೆಟ್ವರ್ಕ್ ಕನೆಕ್ಟ್ ಆಗುತ್ತಿಲ್ಲ" ಎಂದು ಮತ್ತೊಬ್ಬ ಬಳಕೆದಾರರು ಹೇಳಿದ್ದಾರೆ.