ಕೇಪ್ ಕೆನವೆರಲ್ : ಮಂಗಳ ಗ್ರಹದಲ್ಲಿ ನಾಸಾದ ಹೊಸ ಪರ್ಸೆವೆರೆನ್ಸ್ ರೋವರ್ ತನ್ನ ಮೊದಲ ಟೆಸ್ಟ್ ಡ್ರೈವ್ ಅನ್ನು ಯಶಸ್ವಿಯಾಗಿ ನಡೆಸಿದೆ ಎಂದು 'ನಾಸಾ' ತಿಳಿಸಿದೆ.
ETV Bharat / science-and-technology
ಮಂಗಳನ ಅಂಗಳದಲ್ಲಿ ತಿರುಗಾಟ ಪ್ರಾರಂಭಿಸಿದ ಪರ್ಸೆವೆರೆನ್ಸ್ ರೋವರ್ - ಮೊದಲ ಟೆಸ್ಟ್ ಡ್ರೈವ್
ಕೆಂಪು ಗ್ರಹದಲ್ಲಿ ನಾಸಾ ಐತಿಹಾಸಿಕ ಮೈಲಿಗಲ್ಲು ಸಾಧಿಸಿದ್ದು, ಪರ್ಸೆವೆರೆನ್ಸ್ ರೋವರ್ ತನ್ನ ಮೊದಲ ಟೆಸ್ಟ್ ಡ್ರೈವ್ ಅನ್ನು ಯಶಸ್ವಿಯಾಗಿ ನಡೆಸಿದೆ ಎಂದು 'ನಾಸಾ' ತಿಳಿಸಿದೆ.
ಮಂಗಳ ಗ್ರಹದಲ್ಲಿನ ಸೂಕ್ಷ್ಮಾಣು ಜೀವಿಗಳ ಕುರುಹು, ಅಲ್ಲಿನ ಮಣ್ಣು ಹಾಗೂ ವಾತಾವರಣದ ಬಗ್ಗೆ ಅಧ್ಯಯನ ನಡೆಸಲು ನಾಸಾ ಐತಿಹಾಸಿಕ ಪರ್ಸೆವೆರೆನ್ಸ್ ರೋವರ್ ನೌಕೆಯನ್ನು ರವಾನಿಸಿತ್ತು. ಕಳೆದ ಫೆ.18 ರಂದು ಫ್ಲೋರಿಡಾದ 'ಕೇಪ್ ಕ್ಯಾನವರೆಲ್ ಸ್ಟೇಷನ್'ನಿಂದ ಪರ್ಸೆವೆರೆನ್ಸ್ ರೋವರ್ ಹೊತ್ತ ರಾಕೆಟ್ ಉಡಾವಣೆ ಮಾಡಲಾಗಿತ್ತು. ಇದೀಗ ರೋವರ್ ಮಂಗಳ ಅಂಗಳ ತಲುಪಿ, ಯಶಸ್ವಿಯಾಗಿ ತಿರುಗಾಟ ಪ್ರಾರಂಭಿಸಿದೆ.
ಆರು ಚಕ್ರಗಳನ್ನು ಹೊಂದಿರುವ ಪರ್ಸೆವೆರೆನ್ಸ್ ರೋವರ್, 33 ನಿಮಿಷಗಳ ಕಾಲ (21 ಅಡಿ) ಸಂಚರಿಸಿದೆ ಎಂದು ನಾಸಾ ತಿಳಿಸಿದೆ. ಇದಕ್ಕೆ ನಾಸಾ ಇಂಜಿನಿಯರ್ಗಳು ಹರ್ಷ ವ್ಯಕ್ತಪಡಿಸಿದ್ದು, ಕೆಂಪು ಗ್ರಹದಲ್ಲಿ ನಾಸಾ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ.