ವಾಷಿಂಗ್ಟನ್ :ಮಂಗಳ ಗ್ರಹದ ಮೇಲೆ ರೋವರ್ ಇಳಿಸಿದ್ದ ಬಾಹ್ಯಾಕಾಶ ಸಂಸ್ಥೆ ನಾಸಾ ಇದೀಗ ಯಶಸ್ವಿಯಾಗಿ ಇಂಜೆನ್ಯುಯಿಟಿ ಹೆಲಿಕಾಪ್ಟರ್‌ನ ಇಳಿಸಿದೆ.
ನಾಸಾದ ಮೊದಲ ಮಾರ್ಸ್ ಹೆಲಿಕಾಪ್ಟರ್‌ಗೆ ಭಾರತೀಯ ಮೂಲದ ಬಾಲಕಿ, ಅಲಬಾಮಾದ ನಾರ್ತ್‌ಪೋರ್ಟ್‌ನ ಪ್ರೌಢ ಶಾಲಾ ಕಿರಿಯ ವಿದ್ಯಾರ್ಥಿನಿಯಾದ ವನೀಜಾ ರೂಪಾನಿ 'ಇಂಜೆನ್ಯುಯಿಟಿ' (ಜಾಣ್ಮೆ) ಎಂದು ಹೆಸರಿಟ್ಟಿದ್ದಳು. ರೋವರ್‌ನೊಂದಿಗೆ ಮಂಗಳ ಗ್ರಹಕ್ಕೆ ಹೋಗುವ ಹೆಲಿಕಾಪ್ಟರ್‌ಗೆ ಹೆಸರನ್ನು ಆಯ್ಕೆ ಮಾಡಲು ನಾಸಾ ಏರ್ಪಡಿಸಿದ್ದ 'ನೇಮ್ ದಿ ರೋವರ್' ಸ್ಪರ್ಧೆಯಲ್ಲಿ ರೂಪಾನಿ ಈ ಹೆಸರು ನೀಡಿದ್ದಳು.
ಇದನ್ನೂ ಓದಿ: ಉತ್ತರಾಖಂಡ್ನಲ್ಲಿ ಭಾರಿ ಕಾಡ್ಗಿಚ್ಚು: ನಾಲ್ಕು ತಿಂಗಳಲ್ಲಿ 917 ಹೆಕ್ಟೇರ್ ಅರಣ್ಯ ನಾಶ
ನಾಸಾ ಇಂಜಿನಿಯರ್‌ಗಳು ಮತ್ತು ವಿಜ್ಞಾನಿಗಳ ಪರಿಶ್ರಮದ ಫಲವಾದ ಪರ್ಸೆವೆರೆನ್ಸ್ ಹೆಸರಿನ ರೊಬಾಟಿಕ್ ರೋವರ್‌ನ ಫೆಬ್ರವರಿ 18ರಂದು ಮಂಗಳನ ಅಂಗಳದಲ್ಲಿ ಯಶಸ್ವಿಯಾಗಿ ನಾಸಾ ಇಳಿಸಿತ್ತು. ಏಪ್ರಿಲ್ 11ರಂದು ಮಂಗಳ ಗ್ರಹದಲ್ಲಿ ನಾಸಾ ಮೊದಲ ಐತಿಹಾಸಿಕ ಹಾರಾಟ ನಡೆಸಲಿದ್ದು, ಇದೀಗ ಹೆಲಿಕಾಪ್ಟರ್ ಇಳಿಸಿದೆ.
ಭೂಮಿಯ ಮೇಲೆ ಹಾರಾಡುವುದಕ್ಕಿಂತಲೂ ಭೂಮಿಯ ಮೂರನೇ ಒಂದು ಭಾಗದಷ್ಟು ಗುರುತ್ವಾಕರ್ಷಣ ಬಲ ಹೊಂದಿರುವ ಮಂಗಳ ಗ್ರಹದಲ್ಲಿ ನಿಯಂತ್ರಿತ ರೀತಿ ಹೆಲಿಕಾಪ್ಟರ್ ಹಾರಾಟ ನಡೆಸುವುದು ಬಹಳ ಕಷ್ಟದ ಕೆಲಸವಾಗಿದೆ.