ವಾಷಿಂಗ್ಟನ್:ಮಂಗಳ ಗ್ರಹದ ಅಧ್ಯಯನ ನಡೆಸುತ್ತಿರುವ ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ನಾಸಾ) ನಿರ್ಮಿತ ಕ್ಯೂರಿಯಾಸಿಟಿ ರೋವರ್ ಮಂಗಳ ಮೇಲ್ಮೈ ಭಾಗದಲ್ಲಿ ಕಾರ್ಬನ್ ಅಂಶವನ್ನು ಪತ್ತೆ ಹಚ್ಚಿದೆ. ಅಲ್ಲದೇ ಮಂಗಳನ ಅಂಗಳದ ಬಂಡೆಗಳ ಮೇಲಿನ ಪುಡಿಯನ್ನು ಸಂಗ್ರಹಿಸಿದೆ. ಇದು ಭೂಮಿ ಮೇಲಿನ ಇಂಗಾಲದ ಮಾದರಿಯಂತೆ ಇದೆ ಎಂದು ನಾಸಾ ವಿಜ್ಞಾನಿಗಳು ಅಂದಾಜಿಸಿದ್ದಾರೆ.
ಮಂಗಳ ಗ್ರಹದಲ್ಲಿ ಜೀವಿಗಳು ಇದ್ದ ಬಗ್ಗೆ ವಿಜ್ಞಾನಿಗಳು ಇನ್ನೂ ನಿಖರವಾಗಿ ಮಾಹಿತಿ ಕಲೆಹಾಕಿಲ್ಲ. ಬ್ಯಾಕ್ಟಿರೀಯಾದಿಂದ ಉತ್ಪತ್ತಿಯಾಗುವ ಸಣ್ಣಗಾತ್ರದ ಬಂಡೆಯಾಕಾರದ ರಚನೆಗಳು ಮಂಗಳನ ಗ್ರಹದಲ್ಲಿ ಗೋಚರವಾಗಿವೆ. ಇವು ಅಲ್ಲಿ ಜೀವಿಗಳ ವಾಸಸ್ಥಾನದ ಬಗ್ಗೆ ಕುರುಹುಗಳಾಗಿವೆ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಇನ್ನಷ್ಟು ಅಧ್ಯಯನಗಳು ನಡೆಯಬೇಕಿದೆ ಎಂದು ತಿಳಿಸಿದ್ದಾರೆ.