ವಾಷಿಂಗ್ಟನ್:ಅಮೆರಿಕದ ನಾಸಾ ಸಂಸ್ಥೆಯ ಬಹುನಿರೀಕ್ಷಿತ ಮಾನವ ಸಹಿತ ಚಂದ್ರಯಾನ ಯೋಜನೆಯು 2026 ರ ತನಕವೂ ಸಾಧ್ಯವಿಲ್ಲ ಎಂದು ಸಂಸ್ಥೆ ಹೇಳಿದೆ. ಮಾನವ ಸಹಿತ ಆರ್ಟೆಮಿಸ್-1 ಯಾನವನ್ನು 2022 ರ ಮಾರ್ಚ್ನಲ್ಲಿ ಉಡಾಯಿಸುವ ಯೋಜನೆಯನ್ನು ನಾಸಾ ಹೊಂದಿತ್ತು. ಆದರೆ, ನೌಕೆಯನ್ನು ಹಲವು ಹಂತಗಳಲ್ಲಿ ಪರೀಕ್ಷೆ ನಡೆಸಬೇಕಾದ ಕಾರಣ ಅದನ್ನು ಇನ್ನಷ್ಟು ಮುಂದಕ್ಕೆ ಹಾಕಲಾಗಿದೆ.
ಮಾನವರನ್ನು ಚಂದ್ರನಲ್ಲಿಗೆ ಕರೆದೊಯ್ಯುವ ಮಹತ್ವಾಕಾಂಕ್ಷಿ ಯೋಜನೆಯಾದ ಆರ್ಟೆಮಿಸ್ ಅನ್ನು ನಿಗದಿತ ವೇಳೆಗೆ ಹಾರಿಸಲು ಸಾಧ್ಯವಾಗುತ್ತಿಲ್ಲ. ನೌಕೆಯನ್ನು ಇನ್ನಷ್ಟು ಹಂತಗಳಲ್ಲಿ ಪರೀಕ್ಷಿಸುವ ಅಗತ್ಯವಿದೆ. ಹೀಗಾಗಿ ಯೋಜನೆಯನ್ನು 2026 ಕ್ಕೆ ಮುಂದೂಡಲಾಗುವುದು ಎಂದು ನಾಸಾದ ವಿಜ್ಞಾನಿಯೊಬ್ಬರು ತಿಳಿಸಿದ್ದಾರೆ.