ವಾಷಿಂಗ್ಟನ್: ಹಬಲ್ ಬಾಹ್ಯಾಕಾಶ ದೂರದರ್ಶಕವನ್ನು ಸ್ಪೇಸ್‌ಎಕ್ಸ್ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯೊಂದಿಗೆ ಕಕ್ಷೆಗೆ ಕಳಿಸುವ ಜಂಟಿ ಕಾರ್ಯಕ್ರಮದ ಕಾರ್ಯಸಾಧ್ಯತೆ ಅಧ್ಯಯನ ಮಾಡಲು ನಾಸಾ ಮತ್ತು ಎಲೋನ್ ಮಸ್ಕ್ ನಡೆಸುತ್ತಿರುವ ಸ್ಪೇಸ್‌ಎಕ್ಸ್ ಶುಕ್ರವಾರ ಒಪ್ಪಂದಕ್ಕೆ ಸಹಿ ಹಾಕಿವೆ. ಇದಕ್ಕೆ ಸರ್ಕಾರದಿಂದ ಯಾವುದೇ ಹಣ ನೀಡಲಾಗುತ್ತಿಲ್ಲ. ಹಬಲ್ 1990 ರಿಂದ ಕಾರ್ಯನಿರ್ವಹಿಸುತ್ತಿದೆ. ಇದು ಭೂಮಿಯಿಂದ ಸುಮಾರು 540 ಕಿ.ಮೀ ದೂರದಲ್ಲಿದ್ದು, ಹಾಳಾಗುವ ಸ್ಥಿತಿಯಲ್ಲಿದೆ.
NASA ಅನ್ವೇಷಣೆ:ಯುಎಸ್ ಬಾಹ್ಯಾಕಾಶ ಸಂಸ್ಥೆಯ ಪ್ರಕಾರ, ಹಬಲ್ ಅನ್ನು ಉನ್ನತ, ಹೆಚ್ಚು ಸ್ಥಿರವಾದ ಕಕ್ಷೆಗೆ ಮರು ಬೂಸ್ಟ್ ಮಾಡುವುದರಿಂದ ಅದರ ಕಾರ್ಯಚಟುವಟಿಕೆ ಇನ್ನೂ ಸ್ವಲ್ಪ ದಿನ ಹೆಚ್ಚಾಗಲಿದೆ. ಪೋಲಾರಿಸ್ ಕಾರ್ಯಕ್ರಮದ ಸಹಭಾಗಿತ್ವದಲ್ಲಿ ಸ್ಪೇಸ್‌ಎಕ್ಸ್, ಸರ್ವಿಸಿಂಗ್ ಮಿಷನ್‌ಗಳಿಗೆ ಸಂಬಂಧಿಸಿದ ತಾಂತ್ರಿಕ ಸವಾಲುಗಳನ್ನು ಅರ್ಥಮಾಡಿಕೊಳ್ಳಲು ಅಧ್ಯಯನ ಮಾಡಲಾಗುತ್ತಿದೆ. ಈ ಅಧ್ಯಯನವನ್ನು ಖಾಸಗಿ-ಸಾರ್ವಜನಿಕ ಪಾಲುದಾರಿಕೆ ಮೂಲಕ NASA ಅನ್ವೇಷಿಸುತ್ತಿದೆ. ಈ ಬಗ್ಗೆ ವಾಷಿಂಗ್ಟನ್‌ನಲ್ಲಿರುವ NASA ಪ್ರಧಾನ ಕಚೇರಿಯಲ್ಲಿರುವ ವಿಜ್ಞಾನ ಮಿಷನ್ ನಿರ್ದೇಶನಾಲಯದ ಸಹಾಯಕ ನಿರ್ವಾಹಕ ಥಾಮಸ್ ಜುರ್ಬುಚೆನ್ ಹೇಳಿದ್ದಾರೆ.
ಕಕ್ಷೆಯಿಂದ ಹೊರಹಾಕಲು ನಾಸಾ ಯೋಜನೆ:ಹಬಲ್ ಮತ್ತು ಡ್ರ್ಯಾಗನ್ ಈ ಅಧ್ಯಯನಕ್ಕೆ ಪರೀಕ್ಷಾ ಮಾದರಿಗಳಾಗಿ ಕಾರ್ಯನಿರ್ವಹಿಸುತ್ತವೆ. ಹಬಲ್ ಕಾರ್ಯನಿರ್ವಹಿಸುತ್ತಿರುವಾಗಲೇ ಅದನ್ನು, ಸುರಕ್ಷಿತವಾಗಿ ಕಕ್ಷೆಯಿಂದ ಹೊರಹಾಕಲು ಅಥವಾ ವಿಲೇವಾರಿ ಮಾಡಲು NASA ಯೋಚಿಸುತ್ತಿದೆ. ಸ್ಪೇಸ್‌ಎಕ್ಸ್ ಮತ್ತು ಪೋಲಾರಿಸ್ ಪ್ರೋಗ್ರಾಂ ಪ್ರಸ್ತುತ ತಂತ್ರಜ್ಞಾನದ ಗಡಿಯನ್ನು ವಿಸ್ತರಿಸಲು ಬಯಸುತ್ತಿವೆ.