ಕರ್ನಾಟಕ

karnataka

ETV Bharat / science-and-technology

ನಾಸಾದಿಂದ ಎರಡನೇ ಮೂನ್ ಲ್ಯಾಂಡರ್ ಅಭಿವೃದ್ಧಿ.. ಖಾಸಗಿ ಕಂಪನಿಗಳಿಗೆ ಅವಕಾಶ ನೀಡಲು ನಿರ್ಧಾರ - ಸ್ಪೇಸ್​​ಎಕ್ಸ್​ನಿಂದ ಮೂನ್ ಲ್ಯಾಂಡರ್ ಅಭಿವೃದ್ಧಿ

ಚಂದ್ರನ ಕಕ್ಷೆಗೆ ಮತ್ತು ಚಂದ್ರನ ಮೇಲ್ಮೈಗೆ ಗಗನಯಾತ್ರಿಗಳನ್ನು ಸಾಗಿಸುವ ಸಾಮರ್ಥ್ಯವಿರುವ ಲ್ಯಾಂಡರ್​ಗಳ ಪರಿಕಲ್ಪನೆಗಳನ್ನು ಪ್ರಸ್ತಾಪಿಸಲು ನಾಸಾ ಅಮೆರಿಕ ಕಂಪನಿಗಳಿಗೆ ಕೇಳುತ್ತಿದೆ. ಹೊಸ ಲ್ಯಾಂಡರ್ ಅನ್ನು ಚಂದ್ರನಲ್ಲಿ ದೀರ್ಘಾವಧಿಯ ಕಾಲ ಕಳೆಯುವಂತೆ ನಿರ್ಮಿಸಲಾಗುತ್ತದೆ ಎಂದು ತಿಳಿದುಬಂದಿದೆ.

NASA to develop second Moon lander, alongside SpaceX's Starship
ನಾಸಾದಿಂದ ಎರಡನೇ ಮೂನ್ ಲ್ಯಾಂಡರ್ ಅಭಿವೃದ್ಧಿ: ಮತ್ತೊಂದೆಡೆ ಸ್ಪೇಸ್ ಎಕ್ಸ್ ಸ್ಪರ್ಧೆ

By

Published : Mar 24, 2022, 7:40 PM IST

ವಾಷಿಂಗ್ಟನ್(ಅಮೆರಿಕ):1969ರಲ್ಲಿ ಮೊದಲ ಬಾರಿಗೆ ಅಮೆರಿಕ ಮೊದಲ ಬಾರಿಗೆ ಮಾನವವನ್ನು ಚಂದ್ರನ ಮೇಲೆ ಇಳಿಸಿದ ನಂತರ ಈವರೆಗೂ ಮತ್ತೊಮ್ಮೆ ಚಂದ್ರನ ಮೇಲೆ ಮಾನವನನ್ನು ಕಳುಹಿಸುವುದು ಸಾಧ್ಯವಾಗಿಲ್ಲ. ಈಗ ಅರ್ಟೆಮಿಸ್ ಎಂಬ ಯೋಜನೆಯನ್ನು ನಾಸಾ ಕೈಗೊಳ್ಳುತ್ತಿದ್ದು, ಚಂದ್ರನ ಮೇಲೆ ಗಗನಯಾತ್ರಿಗಳನ್ನು ಇಳಿಸಲು ಸಿದ್ಧತೆ ನಡೆಸಲಾಗುತ್ತಿದೆ. ಈ ಬೆನ್ನಲ್ಲೇ ಎರಡನೇ ಮೂನ್ ಲ್ಯಾಂಡರ್ ಅನ್ನು ಅಭಿವೃದ್ಧಿಪಡಿಸಲು ನಾಸಾ ನಿರ್ಧರಿಸಿದ್ದು, ವಾಣಿಜ್ಯ ಕಂಪನಿಗಳಿಗೆ ಹೆಚ್ಚುವರಿ ಅವಕಾಶಗಳು ದೊರೆಯಲಿವೆ.

ಚಂದ್ರನ ಕಕ್ಷೆಗೆ ಮತ್ತು ಚಂದ್ರನ ಮೇಲ್ಮೈಗೆ ಗಗನಯಾತ್ರಿಗಳನ್ನು ಸಾಗಿಸುವ ಸಾಮರ್ಥ್ಯವಿರುವ ಲ್ಯಾಂಡರ್​ಗಳ ಪರಿಕಲ್ಪನೆಗಳನ್ನು ಪ್ರಸ್ತಾಪಿಸಲು ನಾಸಾ ಅಮೆರಿಕ ಕಂಪನಿಗಳಿಗೆ ಕೇಳುತ್ತಿದೆ. ಹೊಸ ಲ್ಯಾಂಡರ್ ಅನ್ನು ಚಂದ್ರನಲ್ಲಿ ದೀರ್ಘಾವಧಿಯ ಕಾಲ ಕಳೆಯುವಂತೆ ನಿರ್ಮಿಸಲಾಗುತ್ತದೆ. ಅವಶ್ಯಕತೆಗಳ ಪ್ರಕಾರ ಲ್ಯಾಂಡರ್ ಅನ್ನು ನಿರ್ಮಿಸಲಿದ್ದು, ಚಂದ್ರನ ಕಕ್ಷೆಯ ಬಾಹ್ಯಾಕಾಶ ನಿಲ್ದಾಣದಲ್ಲಿ ಇರುವ ಸಾಮರ್ಥ್ಯ ಹೊಂದಿರುತ್ತದೆ. ಸಿಬ್ಬಂದಿಯ ಸಂಖ್ಯೆಯೂ ಹೆಚ್ಚಾಗಲಿದೆ.

ಆರ್ಟೆಮಿಸ್ ಅಡಿಯಲ್ಲಿ, ನಾಸಾ ಚಂದ್ರನ ಮೇಲೆ ಹಲವಾರು ಕಾರ್ಯಾಚರಣೆಗಳನ್ನು ಕೈಗೊಳ್ಳಲಿದೆ. ಈ ಕಾರ್ಯಾಚರಣೆಗಳು ಮಾನವನ ಅತ್ಯುನ್ನತ ಸಾಧನೆಗಳಾಗಲಿವೆ. ಚಂದ್ರನ ಮೇಲೆ ಮತ್ತು ಚಂದ್ರನ ಸುತ್ತಲೂ ಅದ್ಭುತ ಕಾರ್ಯಾಚರಣೆಗಳನ್ನು ನಡೆಸಲಾಗುತ್ತದೆ ಎಂದು ಮಾರ್ಸ್​ ಮಿಷನ್​​ನ ಸಿಬ್ಬಂದಿ ಹೇಳಿದ್ದಾರೆ ಎಂದು ನಾಸಾದ ಆಡಳಿತಾಧಿಕಾರಿ ಬಿಲ್ ನೆಲ್ಸನ್ ಹೇಳಿದ್ದಾರೆ. ಚಂದ್ರನ ಮೇಲ್ಮೈಯಲ್ಲಿ ಮತ್ತು ಅದರಾಚೆಗಿನ ಸಂಶೋಧನೆಗೆ ಮುಂದಿನ ದಶಕದಲ್ಲಿ ಕಾರ್ಯಾಚರಣೆಗಳನ್ನು ಕೈಗೊಳ್ಳುವ ಸಾಮರ್ಥ್ಯವನ್ನು ನಾವು ಹೊಂದಿದ್ದೇವೆ ಎಂದು ಬಿಲ್ ನೆಲ್ಸನ್ ಭರವಸೆ ವ್ಯಕ್ತಪಡಿಸಿದ್ದಾರೆ.

ಮತ್ತೊಂದೆಡೆ ಎಲಾನ್ ಮಸ್ಕ್ ಒಡೆತನದ ಸ್ಪೇಸ್‌ಎಕ್ಸ್‌ ಕೂಡಾ ಚಂದ್ರನ ಮೇಲ್ಮೈಗೆ ತಲುಪಲು ಲ್ಯಾಂಡರ್ ಅನ್ನು ಅಭಿವೃದ್ಧಿಪಡಿಸುತ್ತಿದೆ. ನಾಸಾ ಮುಂಬರುವ ವಾರಗಳಲ್ಲಿ ಗುತ್ತಿಗೆಗಾಗಿ ಕರಡು ಮನವಿಯನ್ನು ನೀಡುತ್ತದೆ. ಸಸ್ಟೈನಿಂಗ್ ಲೂನಾರ್ ಡೆವಲಪ್‌ಮೆಂಟ್ (Sustaining Lunar Development) ಎಂದು ಈ ಗುತ್ತಿಗೆಯನ್ನು ಕರೆಯಲಾಗುತ್ತಿದೆ. ನಾಸಾದ ಮಾರ್ಗದರ್ಶನದಲ್ಲಿ ಕಂಪನಿಗಳು ತಮ್ಮ ಲ್ಯಾಂಡರ್‌ಗಳಲ್ಲಿ ಗಗನಯಾತ್ರಿಗಳನ್ನು ಸುರಕ್ಷಿತವಾಗಿ ಚಂದ್ರನ ಮೇಲ್ಮೈಗೆ ಸಾಗಿಸಬಹುದು ಎಂದು ನಿರೀಕ್ಷಿಸಿದ್ದೇವೆ ಎಂದು ಹ್ಯೂಮನ್ ಲ್ಯಾಂಡಿಂಗ್ ಸಿಸ್ಟಮ್ ಪ್ರೋಗ್ರಾಂನ ಪ್ರೋಗ್ರಾಂ ಮ್ಯಾನೇಜರ್ ಲಿಸಾ ವ್ಯಾಟ್ಸನ್-ಮೋರ್ಗಾನ್ ಹೇಳಿದ್ದಾರೆ.

ಇದನ್ನೂ ಓದಿ:ಸ್ಯಾಮ್​ಸಂಗ್​ Galaxy M33 5G ಮೊಬೈಲ್: ಶೀಘ್ರದಲ್ಲೇ ದೇಶದ ಮಾರುಕಟ್ಟೆ ಪ್ರವೇಶ

ABOUT THE AUTHOR

...view details