ಕರ್ನಾಟಕ

karnataka

ETV Bharat / science-and-technology

Ingenuity Mars Helicopter: 63 ದಿನಗಳ ಬಳಿಕ ಸಂಪರ್ಕಕ್ಕೆ ಬಂದ ನಾಸಾದ ಇಂಜೆನ್ಯೂಟಿ ಹೆಲಿಕಾಪ್ಟರ್‌

ಮಂಗಳ ಗ್ರಹದ ಮೇಲೆ ಇಳಿಸಿರುವ ಇಂಜೆನ್ಯೂಟಿ ಹೆಲಿಕಾಪ್ಟರ್‌ ಎರಡು ತಿಂಗಳ ಬಳಿಕ ಸಂಪರ್ಕಕ್ಕೆ ಬಂದಿದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಹೇಳಿದೆ.

nasa-re-establishes-contact-with-mars-ingenuity-helicopter
63 ದಿನಗಳ ಬಳಿಕ ಸಂಪರ್ಕಕ್ಕೆ ಬಂದ ನಾಸಾದ ಇಂಜೆನ್ಯೂಟಿ ಹೆಲಿಕಾಪ್ಟರ್‌

By

Published : Jul 1, 2023, 8:13 PM IST

ವಾಷಿಂಗ್ಟನ್ (ಅಮೆರಿಕ): ಮಂಗಳ ಗ್ರಹದ ಮೇಲೆ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಇಳಿಸಿದ್ದ ಇಂಜೆನ್ಯೂಟಿ ಹೆಲಿಕಾಪ್ಟರ್‌ ಮತ್ತೆ ಸಂಪರ್ಕ ಸಾಧಿಸಿದೆ. ತನ್ನ ಸಂಪರ್ಕ ಕಳೆದುಕೊಂಡ 63 ದಿನಗಳ ಬಳಿಕ ಹೆಲಿಕಾಪ್ಟರ್‌ ಸಂಪರ್ಕಕ್ಕೆ ಬಂದಿದೆ. ಇದರಿಂದ ಅಧಿಕೃತ ಮಿಷನ್ ಲಾಗ್‌ಬುಕ್ ಇಂಜೆನ್ಯೂಟಿ ಮಾರ್ಸ್ ಹೆಲಿಕಾಪ್ಟರ್‌ನ 52ನೇ ಹಾರಾಟ ಯಶಸ್ವಿಯಾಗಿದೆ ಎಂದು ಪಟ್ಟಿ ಮಾಡಿದೆ.

ಇಂಜೆನ್ಯೂಟಿ ಒಂದು ಸಣ್ಣ ಸೌರಶಕ್ತಿ ಚಾಲಿತ ಹೆಲಿಕಾಪ್ಟರ್ ಆಗಿದೆ. ಇದು 2021ರ ಫೆಬ್ರವರಿ 18ರಂದು ಪರ್ಸೆವೆರೆನ್ಸ್ ರೋವರ್ ಜೊತೆಗೆ ಮಂಗಳದ ಮೇಲ್ಮೈಯಲ್ಲಿ ಇಳಿದಿದೆ. ಇದರ 52ನೇ ಹಾರಾಟ ಏಪ್ರಿಲ್ 26ರಂದು ನಡೆದಿತ್ತು. ಆದರೆ, ಮಂಗಳದ ಮೇಲ್ಮೈಗೆ ಇಳಿಯುತ್ತಿದ್ದಂತೆ ಹೆಲಿಕಾಷ್ಟರ್​ನೊಂದಿಗೆ ದಕ್ಷಿಣ ಕ್ಯಾಲಿಫೋರ್ನಿಯಾದ ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿ (ಜೆಪಿಎಲ್​)ಯಲ್ಲಿನ ಮಿಷನ್ ನಿಯಂತ್ರಕಗಳು ಸಂಪರ್ಕ ಕಳೆದುಕೊಂಡಿದ್ದವು.

ಇದು ಪರ್ಸೆವೆರೆನ್ಸ್ ರೋವರ್ ಹೆಲಿಕಾಪ್ಟರ್ ಇಳಿದ ಸ್ಥಳದಿಂದ ಬೇರೆ ಪ್ರದೇಶದಲ್ಲಿತ್ತು. ಹೀಗಾಗಿ ಸಂಪರ್ಕ ವೈಫಲ್ಯ ಉಂಟಾಗಿತ್ತು. ಜೆಪಿಎಲ್​ ಮಿಷನ್ ನಿಯಂತ್ರಕಗಳು ಮತ್ತು ಹೆಲಿಕಾಪ್ಟರ್​ ನಡುವೆ ರೋವರ್ ರೇಡಿಯೋ ರಿಲೇ ಆಗಿ ಕಾರ್ಯನಿರ್ವಹಿಸುತ್ತದೆ. ಈ ಸಂವಹನ ವೈಫಲ್ಯ ಸಂಭವಿಸುವ ಮೊದಲು ರೋವರ್ ಸಂವಹನ ವ್ಯಾಪ್ತಿಯೊಳಗೆ ಯಾವಾಗ ಹಿಂತಿರುಗುತ್ತದೆ ಎಂಬುದಕ್ಕೆ ಇಂಜೆನ್ಯೂಟಿ ತಂಡವು ಮರು ಸಂಪರ್ಕ ತಂತ್ರಗಳನ್ನು ಸಿದ್ಧಪಡಿಸಿತ್ತು. ಜೂನ್ 28ರಂದು ಪರ್ಸವೆರೆನ್ಸ್ ಬೆಟ್ಟದ ತುದಿಯನ್ನು ತಲುಪಿದಾಗ ಇಂಜೆನ್ಯೂಟಿ ಸಂಪರ್ಕವನ್ನು ಮರುಸ್ಥಾಪಿಸಲಾಗಿದೆ ಎಂದು ನಾಸಾದ ಜೆಪಿಎಲ್ ತಿಳಿಸಿದೆ.

ಇಂಜೆನ್ಯೂಟಿ ಹೆಲಿಕಾಪ್ಟರ್ ಸಂಪರ್ಕ ಮರುಸ್ಥಾಪಿಸಲು 52ನೇ ಹಾರಾಟ ನಡೆಸಲಾಗಿತ್ತು. ಜೊತೆಗೆ ಇದನ್ನು ರೋವರ್‌ನ ಸಂಶೋಧನಾ ತಂಡಕ್ಕಾಗಿ ಮಂಗಳದ ಭೂಪ್ರದೇಶದ ಚಿತ್ರಗಳನ್ನು ಸೆರೆಹಿಡಿಯಲು ವಿನ್ಯಾಸಗೊಳಿಸಲಾಗಿದೆ. ರೋವರ್ ಮತ್ತು ಹೆಲಿಕಾಪ್ಟರ್ ಪ್ರಸ್ತುತ ಅನ್ವೇಷಿಸುತ್ತಿರುವ ಜೆಜೆರೊ ಕ್ರೇಟರ್‌ನ ಭಾಗವು ಸಾಕಷ್ಟು ಒರಟಾದ ಭೂಪ್ರದೇಶಗಳನ್ನು ಹೊಂದಿದೆ. ಇಂಜೆನ್ಯೂಟಿ ಉಳಿಸಿಕೊಳ್ಳಲು ಪ್ರಯತ್ನಿಸುತ್ತದೆ. ಇಂಜೆನ್ಯೂಟಿ ಹೆಲಿಕಾಪ್ಟರ್​ನ ಸಂವಹನ ಶ್ರೇಣಿಗೆ ಹಿಂತಿರುಗಲು ಮತ್ತು ಅದರ 52ರ ದೃಢೀಕರಣ ಸ್ವೀಕರಿಸಲು ನಾವು ಉತ್ಸುಕರಾಗಿದ್ದೇವೆ ಎಂದು ಇಂಜೆನ್ಯೂಟಿ ತಂಡದ ಜೋಶ್ ಆಂಡರ್ಸನ್ ತಿಳಿಸಿದ್ದಾರೆ.

ಇದರ ಫಲಿತಾಂಶಗಳಿಗಾಗಿ 63 ದಿನಗಳ ದೀರ್ಘ ಸಮಯ ಕಾದರೂ, ಎಲ್ಲವೂ ಚೆನ್ನಾಗಿ ಕಾರ್ಯನಿರ್ವಹಿಸುತ್ತಿದೆ. ಇಂಜೆನ್ಯೂಟಿ ಪರೀಕ್ಷೆಗಳ ಫಲಿತಾಂಶಗಳು ಇದೇ ರೀತಿ ಸಕಾರಾತ್ಮಕವಾಗಿದ್ದರೆ, ಹೆಲಿಕಾಪ್ಟರ್ ಕೆಲವು ವಾರಗಳಲ್ಲಿ 53ನೇ ಹಾರಾಟ ನಡೆಯಬಹುದು. ಇದನ್ನು ಪಶ್ಚಿಮ ದಿಕ್ಕಿಗೆ ಹಾರಾಟ ನಡೆಸಲು ನಾಸಾ ಉದ್ದೇಶಿಸಿದೆ.

ಇದನ್ನೂ ಓದಿ:ಒಂದು ಕಾಲದಲ್ಲಿ ಖಂಡಿತವಾಗಿಯೂ ಮಂಗಳ ಗ್ರಹದಲ್ಲಿ ನೀರಿತ್ತು ಎಂದ ನಾಸಾ!

ABOUT THE AUTHOR

...view details