ಕರ್ನಾಟಕ

karnataka

ETV Bharat / science-and-technology

ಚಂದ್ರನಿಂದ ಭೂಮಿಗೆ ಮರಳಿದ ನಾಸಾ ಓರಿಯನ್ ನೌಕೆ.. ಏನಿದರ ವಿಶೇಷತೆ? - ಮ್ಯಾಕ್ 32 ಅಥವಾ ಶಬ್ದದ ವೇಗಕ್ಕಿಂತ 32 ಪಟ್ಟು ಹೆಚ್ಚು

ಚಂದ್ರನ ಸುತ್ತ ಮುಂದಿನ ಓರಿಯನ್ ಹಾರಾಟದ ಟ್ರ್ಯಾಕ್‌ನಲ್ಲಿ ಉಳಿಯಲು ನಾಸಾಗೆ ಯಶಸ್ವಿ ಸ್ಪ್ಲಾಶ್‌ಡೌನ್ ಅಗತ್ಯವಿದೆ. ಪ್ರಸ್ತುತ ಇದನ್ನು 2024 ಕ್ಕೆ ನಿಗದಿಪಡಿಸಲಾಗಿದೆ. ನಾಲ್ಕು ಗಗನಯಾತ್ರಿಗಳು ಈ ಪ್ರವಾಸದಲ್ಲಿ ಪಾಲ್ಗೊಳ್ಳಲಿದ್ದಾರೆ. ಅದರ ನಂತರ 2025 ರಲ್ಲಿ ಇಬ್ಬರು ವ್ಯಕ್ತಿಗಳು ಚಂದ್ರನ ಮೇಲೆ ಲ್ಯಾಂಡಿಂಗ್ ಆಗಲಿದ್ದಾರೆ.

ಚಂದ್ರನಿಂದ ಭೂಮಿಗೆ ಮರಳಿದ ನಾಸಾ ಓರಿಯನ್ ನೌಕೆ
nasa-orion-capsule-safely-blazes-back-from-moon-aces-test

By

Published : Dec 12, 2022, 4:11 PM IST

ಕೇಪ್ ಕ್ಯಾನವೆರಲ್( ಅಮೆರಿಕ): ನಾಸಾದ ಓರಿಯನ್ ನೌಕೆಯು ಚಂದ್ರನಿಂದ ಭಾನುವಾರದಂದು ಅತ್ಯಂತ ವೇಗವಾಗಿ ಭೂಮಿಗೆ ಮರಳಿದೆ. ಪ್ಯಾರಾಶೂಟ್ ಮೂಲಕ ಮೆಕ್ಸಿಕೋದ ಪೆಸಿಫಿಕ್‌ಗೆ ಧುಮುಕಿದೆ. ಈ ಮೂಲಕ ಮುಂದಿನ ಚಂದ್ರಯಾನಕ್ಕಾಗಿ ಗಗನಯಾತ್ರಿಗಳಿಗೆ ಮಾರ್ಗ ಮುಕ್ತಗೊಳಿಸುವ ಪರೀಕ್ಷಾ ಹಾರಾಟ ಮುಕ್ತಾಯಗೊಳಿಸಿದೆ.

ಭೂಮಿಯತ್ತ ಬಂದ ನೌಕೆ ಮ್ಯಾಕ್ 32 ಅಥವಾ ಶಬ್ದದ ವೇಗಕ್ಕಿಂತ 32 ಪಟ್ಟು ಹೆಚ್ಚು ವೇಗದಲ್ಲಿ ವಾತಾವರಣ ಪ್ರವೇಶಿಸಿದೆ. ಮತ್ತು ಗ್ವಾಡಾಲುಪೆ ದ್ವೀಪದ ಬಳಿ ಮೆಕ್ಸಿಕೋದ ಬಾಜಾ ಕ್ಯಾಲಿಫೋರ್ನಿಯಾದ ಪಶ್ಚಿಮಕ್ಕೆ ಅಪ್ಪಳಿಸುವ ಮುನ್ನ 5,000 ಡಿಗ್ರಿ ಫ್ಯಾರನ್‌ಹೀಟ್ (2,760 ಡಿಗ್ರಿ ಸೆಲ್ಸಿಯಸ್) ಮರು ಪ್ರವೇಶದ ತಾಪಮಾನವನ್ನು ಸಹಿಸಿಕೊಂಡಿದೆ.

ಚಂದ್ರನ ಸುತ್ತ ಮುಂದಿನ ಓರಿಯನ್ ಹಾರಾಟದ ಟ್ರ್ಯಾಕ್‌ನಲ್ಲಿ ಉಳಿಯಲು ನಾಸಾಗೆ ಯಶಸ್ವಿ ಸ್ಪ್ಲಾಶ್‌ಡೌನ್ ಅಗತ್ಯವಿದೆ. ಪ್ರಸ್ತುತ ಇದನ್ನು 2024 ಕ್ಕೆ ನಿಗದಿಪಡಿಸಲಾಗಿದೆ. ನಾಲ್ಕು ಗಗನಯಾತ್ರಿಗಳು ಈ ಪ್ರವಾಸದಲ್ಲಿ ಪಾಲ್ಗೊಳ್ಳಲಿದ್ದಾರೆ. ಅದರ ನಂತರ 2025 ರಲ್ಲಿ ಇಬ್ಬರು ವ್ಯಕ್ತಿಗಳು ಚಂದ್ರನ ಮೇಲೆ ಲ್ಯಾಂಡಿಂಗ್ ಆಗಲಿದ್ದಾರೆ.

50 ವರ್ಷಗಳ ಹಿಂದೆ ಭಾನುವಾರದ ದಿನದಂದು ಚಂದ್ರನ ಮೇಲೆ ಇಬ್ಬರು ವ್ಯಕ್ತಿಗಳು ಕೊನೆಯ ಬಾರಿಗೆ ಇಳಿದಿದ್ದರು. ಡಿಸೆಂಬರ್ 11, 1972 ರಂದು ಚಂದ್ರನ ಮೇಲೆ ಇಳಿದ ನಂತರ ಅಪೊಲೊ 17 ರಲ್ಲಿದ್ದ ಗಗನಯಾತ್ರಿಗಳಾದ ಯುಜೀನ್ ಸೆರ್ನಾನ್ ಮತ್ತು ಹ್ಯಾರಿಸನ್ ಸ್ಮಿತ್ ಚಂದ್ರನ ಮೇಲ್ಮೈಯನ್ನು ಅನ್ವೇಷಿಸಲು ಅಲ್ಲಿ ಮೂರು ದಿನಗಳನ್ನು ಕಳೆದರು. ಇದು ಅಪೊಲೊ ಯುಗದ ಸುದೀರ್ಘ ತಂಗುವಿಕೆಯಾಗಿದೆ. ಇವರು ಚಂದ್ರನ ಮೇಲೆ ನಡೆದಾಡಿದ 12 ಮೂನವಾಕರ್​ಗಳಲ್ಲಿ ಕೊನೆಯವರಾಗಿದ್ದಾರೆ.

ಆಗಿನಿಂದಲೂ ಒರಿಯನ್ ಚಂದ್ರನ ಮೇಲೆ ಇಳಿದ ಮೊದಲ ಕ್ಯಾಪ್ಸುಲ್ ಆಗಿದ್ದು, ಇದು ನವೆಂಬರ್ 16 ರಂದು ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ನಾಸಾದ ಹೊಸ ಮೆಗಾ ಮೂನ್ ರಾಕೆಟ್‌ನಿಂದ ಉಡಾವಣೆಯಾಗಿತ್ತು. ಇದು ನಾಸಾದ ಹೊಸ ಆರ್ಟೆಮಿಸ್ ಮೂನ್ ಕಾರ್ಯಕ್ರಮದ ಮೊದಲ ಹಾರಾಟವಾಗಿದೆ. ಇದಕ್ಕೆ ಅಪೊಲೊದ ಪೌರಾಣಿಕ ಅವಳಿ ಸಹೋದರಿಯ ಹೆಸರನ್ನು ಇಡಲಾಗಿದೆ.

ಮುಂದಿನ ಬಾರಿಯ ಉಡಾವಣೆಯಲ್ಲಿ ಜನರನ್ನು ಕಳುಹಿಸುವುದು ರೋಮಾಂಚಕವಾಗಿರಲಿದೆ ಎಂದು ಹೂಸ್ಟನ್‌ನಲ್ಲಿರುವ ನಾಸಾದ ಪರಿಶೋಧನಾ ಮಿಷನ್ ಕಚೇರಿಯ ಮುಖ್ಯಸ್ಥ ನುಜೌದ್ ಮೆರೆನ್ಸಿ ಹೇಳಿದ್ದಾರೆ. ನನ್ನ ಜೀವಿತಾವಧಿಯಲ್ಲಿ ಯಾರೂ ಚಂದ್ರನಿಗೆ ಹೋಗಿಲ್ಲ ಅಲ್ಲವೇ ಎಂದು ಅವರು ಕೇಳಿದ್ದಾರೆ.

ಆದ್ದರಿಂದ ಇದು ನಮ್ಮಲ್ಲಿ ಅನೇಕರು ಕನಸು ಕಾಣುತ್ತಿರುವ ಅನ್ವೇಷಣೆಯಾಗಿದೆ. ಅಪೊಲೊ ಉಡಾವಣೆಯ ಅಂಗವಾಗಿ ನಾಸಾ ಭಾನುವಾರ ಹೂಸ್ಟನ್‌ನ ಜಾನ್ಸನ್ ಬಾಹ್ಯಾಕಾಶ ಕೇಂದ್ರದಲ್ಲಿ ಸ್ಪ್ಲಾಶ್‌ಡೌನ್ ಪಾರ್ಟಿಯನ್ನು ಆಯೋಜಿಸಿತ್ತು. ಓರಿಯನ್‌ನ ಹೋಮ್‌ಕಮಿಂಗ್‌ನ ಪ್ರಸಾರವನ್ನು ವೀಕ್ಷಿಸಲು ಉದ್ಯೋಗಿಗಳು ಮತ್ತು ಅವರ ಕುಟುಂಬದವರು ಒಟ್ಟುಗೂಡಿದ್ದರು.

ಇದನ್ನೂ ಓದಿ: ಅಫೋಲೋ ನಂತರ 50 ವರ್ಷಗಳ ಬಳಿಕ ಚಂದ್ರನ ಅಂಗಳಕ್ಕೆ ನಾಸಾ ರಾಕೆಟ್​​

ABOUT THE AUTHOR

...view details