ಕರ್ನಾಟಕ

karnataka

ETV Bharat / science-and-technology

ಚಂದ್ರನ ಮೇಲಿಳಿಯಲು ಸ್ಥಳ ಗುರುತಿಸಿದ ನಾಸಾ: ಆರ್ಟೆಮಿಸ್ ಮಿಷನ್​ಗೆ ಭರದ ಸಿದ್ಧತೆ - ಚಂದ್ರನ ಮೇಲೆ ಮತ್ತೊಮ್ಮೆ ಗಗನಯಾತ್ರಿ

ಆರ್ಟೆಮಿಸ್ III ಚಂದ್ರನ ಮೇಲೆ ಲ್ಯಾಂಡಿಂಗ್​ಗಾಗಿ ಸ್ಥಳಗಳನ್ನು ಗುರುತಿಸಿದ ನಾಸಾ. ಪ್ರಥಮ ಬಾರಿಗೆ ಚಂದ್ರನ ಮೇಲಿಳಿಯಲಿದ್ದಾರೆ ಮಹಿಳಾ ಗಗನಯಾತ್ರಿ. ಚಂದ್ರನ ಮೇಲೆ ದೀರ್ಘಕಾಲೀನ ವಾಸಕ್ಕೆ ನಾಸಾ ಪ್ಲ್ಯಾನ್.

ಚಂದ್ರನ ಮೇಲಿಳಿಯಲು ಸ್ಥಳ ಗುರುತಿಸಿದ ನಾಸಾ
ಚಂದ್ರನ ಮೇಲಿಳಿಯಲು ಸ್ಥಳ ಗುರುತಿಸಿದ ನಾಸಾ

By

Published : Aug 20, 2022, 12:35 PM IST

ವಾಷಿಂಗ್ಟನ್: ಆರ್ಟೆಮಿಸ್ ಮಿಷನ್ ಅಡಿ ಚಂದ್ರನ ಮೇಲೆ ಮತ್ತೊಮ್ಮೆ ಗಗನಯಾತ್ರಿಗಳನ್ನು ಕಳುಹಿಸಲು ನಾಸಾ ಸಿದ್ಧತೆ ನಡೆಸುತ್ತಿದೆ. ಗಗನಯಾತ್ರಿಗಳನ್ನು ಇಳಿಸುವ ಸಲುವಾಗಿ ಚಂದ್ರನ ಲೂನಾರ್ ಸೌತ್ ಪೋಲ್​ ಬಳಿ ಈಗಾಗಲೇ 13 ಕ್ಯಾಂಡಿಡೇಟ್ ಲ್ಯಾಂಡಿಂಗ್ ವಲಯ​ಗಳನ್ನು ನಾಸಾ ಗುರುತಿಸಿದೆ. ಪ್ರತಿಯೊಂದು ವಲಯದಲ್ಲೂ ಆರ್ಟೆಮಿಸ್-3 ಇಳಿಯಬಹುದಾದ ಹಲವಾರು ಸ್ಥಳಗಳನ್ನು ನಾಸಾ ಗುರುತಿಸಿದೆ. ಗಗನಯಾತ್ರಿಗಳ ತಂಡ ಈ ಸ್ಥಳಗಳಲ್ಲಿ ಇಳಿಯಬಹುದಾಗಿದೆ. ಅಲ್ಲದೇ ಪ್ರಥಮ ಬಾರಿಗೆ ಮಹಿಳೆಯೊಬ್ಬರು ಚಂದ್ರನ ಮೇಲೆ ಇಳಿಯಲಿದ್ದಾರೆ.

ಈ ಸ್ಥಳಗಳನ್ನು ಗುರುತಿಸಲು ನಮಗೆ ಸಾಧ್ಯವಾಗಿದೆ ಎಂದರೆ, ಅಪೋಲೊ ನಂತರ ನಾವು ಮತ್ತೊಮ್ಮೆ ಚಂದ್ರನ ಮೇಲೆ ಮಾನವರನ್ನು ಕಳುಹಿಸುವುದರತ್ತ ಬಹುದೊಡ್ಡ ಹೆಜ್ಜೆಯನ್ನು ಇಟ್ಟಂತಾಗಿದೆ. ನಾವು ಚಂದ್ರನ ಮೇಲೆ ಮಾನವರನ್ನು ಇಳಿಸಿದಾಗ ಈ ಮಿಷನ್ ಹಿಂದಿನ ಎಲ್ಲ ಮಿಷನ್​ಗಳಿಗಿಂತ ವಿಭಿನ್ನವಾಗಿರಲಿದೆ. ಈ ಬಾರಿ ಗಗನಯಾತ್ರಿಗಳು ನಮಗೆ ಈವರೆಗೆ ತಿಳಿಯದ ಕತ್ತಲೆಯ ಪ್ರದೇಶದಲ್ಲಿ ಇಳಿದು ಸಂಶೋಧನೆ ಮಾಡಲಿದ್ದಾರೆ.

ದೀರ್ಘಕಾಲದವರೆಗೆ ಮಾನವ ಚಂದ್ರನ ಮೇಲೆ ವಾಸಿಸುವಂಥ ವ್ಯವಸ್ಥೆಗಳನ್ನು ಮಾಡಲು ಅಡಿಪಾಯ ಹಾಕಲಿದ್ದಾರೆ ಎಂದು ಮಾರ್ಕ್ ಕಿರಾಸಿಚ್ ಹೇಳಿದ್ದಾರೆ. ಮಾರ್ಕ್ ಕಿರಾಸಿಚ್ ಇವರು ವಾಶಿಂಗ್ಟನ್​ನಲ್ಲಿರುವ ನಾಸಾ ಕೇಂದ್ರ ಕಚೇರಿಯಲ್ಲಿ ಆರ್ಟೆಮಿಸ್ ಕ್ಯಾಂಪೇನ್ ಡೆವಲಪ್​ಮೆಂಟ್ ಡಿವಿಜನ್​ನಲ್ಲಿ ಉಪ ಅಸೋಸಿಯೇಟ್ ಆಡಳಿತಾಧಿಕಾರಿಯಾಗಿದ್ದಾರೆ.

ಆರ್ಟೆಮಿಸ್ III ಚಂದ್ರನ ಮೇಲೆ ಲ್ಯಾಂಡಿಂಗ್​ಗಾಗಿ NASA ಗುರುತಿಸಿರುವ ಕ್ಯಾಂಡಿಡೇಟ್ ಲ್ಯಾಂಡಿಂಗ್ ವಲಯಗಳು: ಫೌಸ್ಟಿನಿ ರಿಮ್ A, ಶ್ಯಾಕ್ಲಟನ್ ಬಳಿ ಪೀಕ್, ಕನೆಕ್ಟಿಂಗ್ ರಿಡ್ಜ್, ಕನೆಕ್ಟಿಂಗ್ ರಿಡ್ಜ್ ಎಕ್ಸಟೆನ್ಷನ್, ಡಿ ಗೆರ್ಲಾಚೆ ರಿಮ್ 1, ಡಿ ಗೆರ್ಲಾಚೆ ರಿಮ್ 2, ಡಿ ಗೆರ್ಲಾಚೆ-ಕೋಚರ್ ಮಾಸಿಫ್, ಹಾವರ್ತ್, ಮಲಾಪರ್ಟ್ ಮಸ್ಸಿಫ್ ಬೀಟಾ ಪ್ರಸ್ಥಭೂಮಿ, ನೋಬಲ್ ರಿಮ್ 1, ನೋಬಲ್ ರಿಮ್ 2, ಅಮುಂಡ್ಸೆನ್ ರಿಮ್.

ಈ ಪ್ರತಿಯೊಂದು ಪ್ರದೇಶವು ಚಂದ್ರನ ದಕ್ಷಿಣ ಧ್ರುವದ ಆರು ಡಿಗ್ರಿ ಅಕ್ಷಾಂಶದೊಳಗೆ ನೆಲೆಗೊಂಡಿದೆ ಮತ್ತು ಒಟ್ಟಾರೆಯಾಗಿ, ವೈವಿಧ್ಯಮಯ ಭೂವೈಜ್ಞಾನಿಕ ಲಕ್ಷಣಗಳನ್ನು ಒಳಗೊಂಡಿದೆ. ಒಟ್ಟಾಗಿ, ಎಲ್ಲಾ ಸಂಭಾವ್ಯ ಆರ್ಟೆಮಿಸ್ III ಉಡಾವಣಾ ಅವಕಾಶಗಳಿಗಾಗಿ ಪ್ರದೇಶಗಳು ಲ್ಯಾಂಡಿಂಗ್ ಆಯ್ಕೆಗಳನ್ನು ಒದಗಿಸುತ್ತವೆ. ನಿರ್ದಿಷ್ಟ ಲ್ಯಾಂಡಿಂಗ್ ಸೈಟ್‌ಗಳನ್ನು ಲಾಂಚ್ ವಿಂಡೋದ ಸಮಯಕ್ಕೆ ಬಿಗಿಯಾಗಿ ಜೋಡಿಸಲಾಗಿದೆ. ಆದ್ದರಿಂದ ಅನೇಕ ಪ್ರದೇಶಗಳು ವರ್ಷವಿಡೀ ಕಾರ್ಯಾಚರಣೆಗೆ ಉಪಯುಕ್ತವಾಗಲಿವೆ.

ಪ್ರದೇಶಗಳನ್ನು ಆಯ್ಕೆ ಮಾಡಲು, ವಿಜ್ಞಾನಿಗಳು ಮತ್ತು ಇಂಜಿನಿಯರ್‌ಗಳ ಏಜೆನ್ಸಿ ವ್ಯಾಪ್ತಿಯ ತಂಡವು ಚಂದ್ರನ ದಕ್ಷಿಣ ಧ್ರುವದ ಸಮೀಪವಿರುವ ಪ್ರದೇಶವನ್ನು NASAದ ಚಂದ್ರನ ವಿಚಕ್ಷಣ ಆರ್ಬಿಟರ್ ಮತ್ತು ದಶಕಗಳ ಪ್ರಕಟಣೆಗಳು ಮತ್ತು ಚಂದ್ರನ ವಿಜ್ಞಾನದ ಸಂಶೋಧನೆಗಳನ್ನು ಬಳಸಿಕೊಂಡು ಮೌಲ್ಯಮಾಪನ ಮಾಡಿದೆ. ಉಡಾವಣಾ ವಿಂಡೋ ಲಭ್ಯತೆಯನ್ನು ಪರಿಗಣಿಸುವುದರ ಜೊತೆಗೆ, ಭೂಪ್ರದೇಶದ ಇಳಿಜಾರು, ಭೂಮಿಯೊಂದಿಗಿನ ಸಂವಹನದ ಸುಲಭತೆ ಮತ್ತು ಬೆಳಕಿನ ಪರಿಸ್ಥಿತಿಗಳು ಸೇರಿದಂತೆ ಮಾನದಂಡಗಳನ್ನು ಬಳಸಿಕೊಂಡು ಸುರಕ್ಷಿತ ಲ್ಯಾಂಡಿಂಗ್ ಅನ್ನು ಸರಿಹೊಂದಿಸುವ ಸಾಮರ್ಥ್ಯದ ಆಧಾರದ ಮೇಲೆ ತಂಡವು ಪ್ರದೇಶಗಳನ್ನು ಮೌಲ್ಯಮಾಪನ ಮಾಡಿದೆ.

ಇದನ್ನು ಓದಿ:ಕೋವಿಡ್​ ಟೆಸ್ಟ್​ಗೆ ಸ್ವ್ಯಾಬ್ ತೆಗೆದುಕೊಳ್ಳುವ ರೋಬೋಟ್ ಆವಿಷ್ಕಾರ

ABOUT THE AUTHOR

...view details