ಕರ್ನಾಟಕ

karnataka

ETV Bharat / science-and-technology

'ಪಾರ್ಕರ್‌ ನೌಕೆ ಸೂರ್ಯನನ್ನು ಸ್ಪರ್ಶಿಸಿದೆ': ಅಮೆರಿಕದ ನಾಸಾ ಘೋಷಣೆ - ಅಮೆರಿಕ ವಿಜ್ಞಾನಿಗಳ ಘೋಷಣೆ

ಸೌರ ವಾತಾವರಣ ಮತ್ತು ಹೊರ ಹೋಗುವ ಸೌರ ಮಾರುತದ ನಡುವಿನ ಮೊನಚಾದ, ಅಸಮ ಗಡಿಯನ್ನು ಮೊದಲು ದಾಟಿದೆ. 2018ರಲ್ಲಿ ಉಡಾವಣೆ ಮಾಡಲಾಗಿದ್ದ ಪಾರ್ಕರ್‌ ಸೂರ್ಯನ ಮಧ್ಯಭಾಗದಿಂದ 8 ಮಿಲಿಯನ್‌ ಮೈಲಿ (13 ಮಿಲಿಯನ್‌ ಕಿ.ಮೀ) ದೂರದಲ್ಲಿತ್ತು ಎಂದು ಮಾಹಿತಿ ನೀಡಿದ್ದಾರೆ..

NASA craft touches sun for 1st time dives into atmosphere
'ಪಾರ್ಕರ್‌ ನೌಕೆ ಸೂರ್ಯನನ್ನು ಸ್ಪರ್ಶಿಸಿದೆ'; ನಾಸಾ ಹೊಸ ಮೈಲಿಗಲ್ಲು

By

Published : Dec 15, 2021, 4:29 PM IST

Updated : Dec 15, 2021, 5:34 PM IST

ಕೇಪ್‌ ಕ್ಯಾನವೆರಲ್ (ಅಮೆರಿಕ) :ನಾಸಾ ಬಾಹ್ಯಾಕಾಶ ನೌಕೆ ಪಾರ್ಕರ್‌ ಸೋಲಾರ್‌ ಅಧಿಕೃತವಾಗಿ ಸೂರ್ಯನನ್ನು ಸ್ಪರ್ಶಿಸಿದೆ ಎಂದು ಅಮೆರಿಕದ ವಿಜ್ಞಾನಿಗಳು ಹೇಳಿದ್ದಾರೆ. 'ಕೊರೊನಾ' ಎಂದು ಕರೆಯಲ್ಪಡುವ ಸೌರ ವಾತಾವರಣದ ಮೂಲಕ ಸೂರ್ಯನನ್ನು ಸ್ಪರ್ಶಿಸಿದೆ ಎಂದು ಅಮೆರಿಕದ ಜಿಯೋಫಿಸಿಕಲ್ ಯೂನಿಯನ್ ಸಭೆಯಲ್ಲಿ ವಿಜ್ಞಾನಿಗಳು ಪ್ರಕಟಿಸಿದ್ದಾರೆ.

ಇದರ ದತ್ತಾಂಶವನ್ನು ಮರಳಿ ಪಡೆಯಲು ಕೆಲವು ತಿಂಗಳುಗಳೇ ಕಳೆದಿವೆ. ಇದನ್ನು ದೃಢೀಕರಿಸಲು ಇನ್ನೂ ಹಲವಾರು ತಿಂಗಳುಗಳು ಬೇಕಾಗಿವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಇದೊಂದು ಆಕರ್ಷಕ ಹಾಗೂ ರೋಮಾಂಚನಕಾರಿ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಪ್ರಾಜೆಕ್ಟ್ ವಿಜ್ಞಾನಿ ನೂರ್ ರೌವಾಫಿ ಹೇಳಿದ್ದಾರೆ.

ಸೌರ ವಾತಾವರಣ ಮತ್ತು ಹೊರ ಹೋಗುವ ಸೌರ ಮಾರುತದ ನಡುವಿನ ಮೊನಚಾದ, ಅಸಮ ಗಡಿಯನ್ನು ಮೊದಲು ದಾಟಿದೆ. 2018ರಲ್ಲಿ ಉಡಾವಣೆ ಮಾಡಲಾಗಿದ್ದ ಪಾರ್ಕರ್‌ ಸೂರ್ಯನ ಮಧ್ಯಭಾಗದಿಂದ 8 ಮಿಲಿಯನ್‌ ಮೈಲಿ (13 ಮಿಲಿಯನ್‌ ಕಿ.ಮೀ.) ದೂರದಲ್ಲಿತ್ತು ಎಂದು ಮಾಹಿತಿ ನೀಡಿದ್ದಾರೆ.

ವಿಜ್ಞಾನಿಗಳ ಪ್ರಕಾರ, ಬಾಹ್ಯಾಕಾಶ ನೌಕೆಯು ಕನಿಷ್ಠ ಮೂರು ಬಾರಿ ಸೌರ ವಾತಾವರಣದ ಒಳಗೆ ಮತ್ತು ಹೊರಗೆ ಮುಳುಗಿತ್ತು. ಪ್ರತಿ ಸುಗಮ ಪರಿವರ್ತನೆಯಾಗಿದೆ. ಪಾರ್ಕರ್ ಎಷ್ಟು ವೇಗವಾಗಿ ಚಲಿಸುತ್ತಿತ್ತು ಎಂದು ಗಮನಿಸಲಾಗಿದೆ. ಅದು ಒಂದು ಸೆಕೆಂಡಿಗೆ 62 ಮೈಲುಗಳಿಗಿಂತ ಹೆಚ್ಚು (100 ಕಿಲೋಮೀಟರ್) ವೇಗದಲ್ಲಿತ್ತು ಎಂದು ಮಿಚಿಗನ್ ವಿಶ್ವವಿದ್ಯಾಲಯದ ಜಸ್ಟಿನ್ ಕ್ಯಾಸ್ಪರ್ ತಿಳಿಸಿದ್ದಾರೆ.

ಇದನ್ನೂ ಓದಿ:ISRO-OPPO deal: ಒಪ್ಪಂದದ ವಿರುದ್ಧ ಕಾಂಗ್ರೆಸ್ ನಾಯಕರು ಟ್ವಿಟರ್​ನಲ್ಲಿ ಕಿಡಿ

Last Updated : Dec 15, 2021, 5:34 PM IST

ABOUT THE AUTHOR

...view details