ಕರ್ನಾಟಕ

karnataka

ETV Bharat / science-and-technology

ಎಚ್‌ಐವಿ ಮರು ಸಕ್ರಿಯಗೊಳಿಸುವಿಕೆ ತಡೆಯುವ ನ್ಯಾನೊ ಎನ್​ಝೈಮ್

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಶೋಧಕರು "ನ್ಯಾನೊ ಎನ್​ಝೈಮ್" ಅಭಿವೃದ್ಧಿಪಡಿಸಿದ್ದು, ಇವುಗಳು ಎಚ್‌ಐವಿಯ ಮರು ಸಕ್ರಿಯಗೊಳಿಸುವಿಕೆ ಮತ್ತು ಪುನರಾವರ್ತನೆಯನ್ನು ಯಶಸ್ವಿಯಾಗಿ ತಡೆಯುತ್ತದೆ ಎಂದು ತಿಳಿದುಬಂದಿದೆ.

Nanozymes that can block HIV reactivation
Nanozymes that can block HIV reactivation

By

Published : Apr 1, 2021, 6:51 PM IST

ಹೈದರಾಬಾದ್:ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್​ನ (ಐಐಎಸ್​ಸಿ) ಸಂಶೋಧಕರು ಕೃತಕ ಕಿಣ್ವಗಳನ್ನು (enzymes) ಅಭಿವೃದ್ಧಿಪಡಿಸಿದ್ದು, ಇದು ಹ್ಯೂಮನ್ ಇಮ್ಯುನೊ ಡಿಫಿಷಿಯನ್ಸಿ ವೈರಸ್​ನ (ಎಚ್‌ಐವಿ) ಮರು ಸಕ್ರಿಯಗೊಳಿಸುವಿಕೆ ಮತ್ತು ಪುನರಾವರ್ತನೆಯನ್ನು ಯಶಸ್ವಿಯಾಗಿ ತಡೆಯುತ್ತದೆ.

ವೆನಾಡಿಯಮ್ ಪೆಂಟಾಕ್ಸೈಡ್ ನ್ಯಾನೊಶೀಟ್‌ಗಳಿಂದ ತಯಾರಿಸಲ್ಪಟ್ಟ ಈ "ನ್ಯಾನೊ ಎನ್​ಝೈಮ್​ಗಳು" ಗ್ಲುಟಾಥಿಯೋನ್ ಪೆರಾಕ್ಸಿಡೇಸ್ ಎಂಬ ನೈಸರ್ಗಿಕ ಕಿಣ್ವವನ್ನು ಅನುಕರಿಸುವ ಮೂಲಕ ಕಾರ್ಯನಿರ್ವಹಿಸುತ್ತವೆ. ಇದು ಕೋಶಗಳಲ್ಲಿನ ಆಕ್ಸಿಡೇಟಿವ್ ಒತ್ತಡದ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುವ ಮೂಲಕ ವೈರಸನ್ನು ನಿಯಂತ್ರಣದಲ್ಲಿಡಲು ಅಗತ್ಯವಾಗಿರುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ.

ಎಚ್‌ಐವಿ ಮರು ಸಕ್ರಿಯಗೊಳಿಸುವಿಕೆ ತಡೆಯುವ ನ್ಯಾನೊ ಎನ್​ಝೈಮ್

ಇಎಂಬಿಒ ಮಾಲಿಕ್ಯುಲರ್ ಮೆಡಿಸಿನ್ ಜರ್ನಲ್​ನಲ್ಲಿ ಪ್ರಕಟವಾದ ಈ ಅಧ್ಯಯನದ ನೇತೃತ್ವವನ್ನು ಸಾಂಕ್ರಾಮಿಕ ರೋಗಗಳ ಸಂಶೋಧನಾ ವಿಭಾಗದ (ಸಿಐಡಿಆರ್) ಸಹಾಯಕ ಪ್ರಾಧ್ಯಾಪಕ ಅಮಿತ್ ಸಿಂಗ್ ಮತ್ತು ಅಜೈವಿಕ ಮತ್ತು ಭೌತಿಕ ರಸಾಯನಶಾಸ್ತ್ರ ಇಲಾಖೆಯ ಪ್ರೊಫೆಸರ್ ಗೋವಿಂದಸಾಮಿ ಮುಗೇಶ್ ವಹಿಸಿದ್ದರು.

"ನ್ಯಾನೊ ಎನ್​ಝೈಮ್​ಗಳು ಜೈವಿಕ ವ್ಯವಸ್ಥೆಗಳಲ್ಲಿ ಸ್ಥಿರವಾಗಿರುತ್ತವೆ ಮತ್ತು ಜೀವಕೋಶಗಳ ಒಳಗೆ ಯಾವುದೇ ಅನಗತ್ಯ ಪ್ರತಿಕ್ರಿಯೆಗಳಿಗೆ ಮಧ್ಯಸ್ಥಿಕೆ ವಹಿಸುವುದಿಲ್ಲ" ಎಂದು ಅಧ್ಯಯನಕಾರರು ಹೇಳಿದ್ದು, ಪ್ರಯೋಗಾಲಯದಲ್ಲಿ ಅವುಗಳನ್ನು ತಯಾರಿಸುವುದು ತುಂಬಾ ಸುಲಭ ಎಂದಿದ್ದಾರೆ.

ರೋಗಿಯ ದೇಹದಿಂದ ಎಚ್‌ಐವಿಯನ್ನು ಸಂಪೂರ್ಣವಾಗಿ ತೊಡೆದುಹಾಕಲು ಪ್ರಸ್ತುತ ಯಾವುದೇ ಮಾರ್ಗವಿಲ್ಲ. ಎಚ್ಐವಿ ವಿರೋಧಿ ಔಷಧಗಳು ವೈರಸನ್ನು ನಿಗ್ರಹಿಸುವಲ್ಲಿ ಮಾತ್ರ ಯಶಸ್ವಿಯಾಗುತ್ತವೆ. ಸೋಂಕಿತ ಕೋಶಗಳಿಂದ ಎಚ್‌ಐವಿ ನಿರ್ಮೂಲನೆ ಮಾಡುವಲ್ಲಿ ಅವು ವಿಫಲಗೊಳ್ಳುತ್ತವೆ.

ಲ್ಯಾಬ್ ಪರೀಕ್ಷೆಗಳಲ್ಲಿ ನ್ಯಾನೊ ಎನ್​ಝೈಮ್​ಗಳಿಂದ ಸಾಮಾನ್ಯ ಕೋಶಗಳಿಗೆ ಹಾನಿಯಾಗುವುದಿಲ್ಲ ಎಂದು ಕಂಡುಬಂದರೂ, ದೇಹದೊಳಗೆ ಪರಿಚಯಿಸಿದ ನಂತರ ಅವು ಇತರ ಪರಿಣಾಮಗಳನ್ನು ಬೀರಬಹುದೇ ಎಂದು ಅರ್ಥಮಾಡಿಕೊಳ್ಳಲು ಹೆಚ್ಚಿನ ಅಧ್ಯಯನಗಳು ಅಗತ್ಯವಿದೆಯೆಂದು ಅಧ್ಯಯನಕಾರರು ತಿಳಿಸಿದ್ದಾರೆ.

ABOUT THE AUTHOR

...view details