ಸಿಂಗಾಪುರ: ಶೇ.99.9ರಷ್ಟು ವೈರಸ್ ಅನ್ನು ತಡೆಹಿಡಿಯುವ ‘ನ್ಯಾನೋಟೆಕ್ ಮಾಸ್ಕ್’ ಅನ್ನು ನಾನ್ಯಂಗ್ ಟೆಕ್ನಾಲಜಿ ಯೂನಿವರ್ಸಿಟಿ (ಎನ್ಟಿಯು) ವಿಜ್ಞಾನಿಗಳು ಆವಿಷ್ಕರಿಸಿದ್ದಾರೆ. ಈ ಮಾಸ್ಕ್ ಕೇವಲ 45 ಸೆಕೆಂಡ್ಗಳಲ್ಲಿ ವೈರಸ್ ಅನ್ನು ಕೊಲ್ಲಲಿದ್ದು, ಕೋವಿಡ್ಗಾಗಿ ಈಗ ಬಳಕೆಯಲ್ಲಿರುವ ಎನ್-95 ಮಾಸ್ಕ್ಗಿಂತಲೂ ಹೆಚ್ಚು ಪರಿಣಾಮಕಾರಿಯಾಗಿದೆ. ಈ ಮಾಸ್ಕ್ನ ಆಂಟಿ ಮೈಕ್ರೋಬಿಯಲ್ ಲೇಯರ್ ಕನಿಷ್ಠ ಆರು ದಿನಗಳವರೆಗೆ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತದೆ.
ಈ ಮಾಸ್ಕ್ಗಳು ಸುಮಾರು 10 ಬಾರಿ ತೊಳೆದು ಮತ್ತೆ ಮರುಬಳಕೆ ಮಾಡಬಹುದು. ಇದು ಒಂದು ದಿನ ಬಳಸಿ ಎಸೆಯುವ ಮಾಸ್ಕ್ಗಿಂತಲೂ ಹೆಚ್ಚು ಪರಿಣಾಮಕಾರಿ ಹಾಗೂ ಸಮರ್ಥನೀಯವಾಗಿರುತ್ತವೆ. ಇದಲ್ಲದೇ ಎನ್-95 ಮಾಸ್ಕ್ನ ಫಿಲ್ಟರ್ಗಳಿಗಿಂತಲೂ ನ್ಯಾನೋಟೆಕ್ ಮಾಸ್ಕ್ ಫಿಲ್ಟರ್ಗಳು ಹೆಚ್ಚು ಗಾಳಿಯನ್ನು ಒಳ ಬರುವಂತೆ ವಿನ್ಯಾಸಮಾಡಲಾಗಿದೆ.