ಕರ್ನಾಟಕ

karnataka

ETV Bharat / science-and-technology

ಟ್ವಿಟರ್​ ಬಳಿಕ OpenAI ಮೇಲೆ ಮಸ್ಕ್​ ಕಣ್ಣು: ಇದಕ್ಕೆಂದೇ X.AI ಕಂಪನಿ ಸೃಷ್ಟಿ - ತಂತ್ರಜ್ಞಾನದಿಂದ ಪ್ರತಿಯೊಂದು ಕ್ಷೇತ್ರದಲ್ಲೂ ಎಐ ಛಾಪು

ಈ ಹಿಂದೆ OpenAI ಖರೀದಿಗೆ ಮುಂದಾಗಿ ವಿಫಲವಾಗಿದ್ದ ಎಲೋನ್​ ಮಸ್ಕ್​ ಇದೀಗ X.AI ಎಂಬ ಹೊಸ ಕೃತಕ ಬುದ್ದಿಮತ್ತೆಯ ಕಂಪನಿಯನ್ನು ಸ್ಥಾಪಿಸಿದ್ದಾರೆ

musk creates  X.AI Company for promote AI
musk creates X.AI Company for promote AI

By

Published : Apr 15, 2023, 12:32 PM IST

Updated : Apr 15, 2023, 12:55 PM IST

ನವದೆಹಲಿ: ಸದ್ಯ ಕೃತಕ ಬುದ್ಧಿಮತ್ತೆ ಜಗತ್ತನ್ನು ಆಳಲು ಹೊರಟಿದೆ. ತಂತ್ರಜ್ಞಾನದಿಂದ ಪ್ರತಿಯೊಂದು ಕ್ಷೇತ್ರದಲ್ಲೂ ಎಐ ಛಾಪು ಮೂಡಿಸುತ್ತಿರುವುದು ಸುಳ್ಳಲ್ಲ. ಇದು ಎಐ ಯುಗವಾಗಿ ಮಾರ್ಪಡುತ್ತಿದೆ. ಇದನ್ನು ಅರಿತಿರುವ ಟ್ವಿಟರ್​ ಸಿಇಒ ಎಲೋನ್​ ಮಸ್ಕ್​ ಹೊಸ ಕಂಪನಿಯೊಂದನ್ನು ಹುಟ್ಟು ಹಾಕಿದ್ದಾರೆ. X.AI ಎಂಬ ಕಂಪನಿ ಮೂಲಕ ಈ ಕೃತಕ ಬುದ್ದಿಮತ್ತೆ (artificial intelligence- AI) ಉತ್ತೇಜನಕ್ಕೆ ಮುಂದಾಗಿದ್ದಾರೆ. ಟೆಕ್ಸಾಸ್​ನ ನೆವಾಡಾದಲ್ಲಿ ಈ ಸಂಸ್ಥೆ ದಾಖಲಾಗಿದೆ. ಮಸ್ಕ್​ ಕುಟುಂಬ ಕಚೇರಿಯ ನಿರ್ದೇಶಕರಾಗಿರುವ ಜೆರೆಡ್​ ಬಿರ್ಚಲ್​ ಈ ಸಂಸ್ಥೆಯ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಕಂಪನಿ ಸ್ಥಾಪನೆ ಉದ್ದೇಶ: X.AI ಸಂಸ್ಥೆಯ ಸದ್ಯ 100 ಮಿಲಿಯನ್​​ ಶೇರ್​ಗಳ ಮಾರಾಟ ಅಧಿಕೃತಗೊಳಿಸಿದೆ ಎಂದು ವಾಲ್​ ಸ್ಟ್ರೀಟ್​ ಜರ್ನಲ್​ ತಿಳಿಸಿದೆ. ಮೈಕ್ರೋಸಾಫ್ಟ್​ನ​​​​ ಓಪನ್​ಎಐ ಚಾಟ್​ಜಿಪಿಟಿ ಯಶಸ್ವಿಯಾಗಿದ್ದು, ಅದನ್ನು ಕೊಳ್ಳುವ ಉದ್ದೇಶದಿಂದಾಗಿ ಮಸ್ಕ್​ ಈ ಎಐ ಸಂಸ್ಥೆ ಹುಟ್ಟು ಹಾಕಿದ್ದಾನೆ ಎನ್ನಲಾಗಿದೆ. ಇನ್ನು ವಿಚಿತ್ರ ಎಂದರೆ, ಈ ಹಿಂದೆ ಇದೇ ಓಪನ್​ಎಐಗೆ ಆರಂಭಿಕವಾಗಿ 100 ಮಿಲಿಯನ್​ ಡಾಲರ್​ ಹೂಡಿದ್ದು, ಇದೆ ಎಲೋನ್​ ಮಾಸ್ಕ್​. ಆದರೆ, ಬಳಿಕ ಅವರು ಈ ಸಂಸ್ಥೆಯಿಂದ ಹೊರ ಬಂದರು.

ಇತ್ತೀಚಿನ ಕೆಲವು ತಿಂಗಳಲ್ಲಿ ಚಾಟ್​ಜಿಪಿಟಿ ಮತ್ತು ಜಿಪಿಟಿ-4 ಜಗತ್ತಿನಾದ್ಯಂತ ಹಲವರ ಕೋಪಕ್ಕೆ ಗುರಿಯಾಗಿದೆ. ಈ ಸಂಬಂಧ ಅನೇಕ ಉದ್ಯಮಿಗಳು, ಮಸ್ಕ್​, ಆ್ಯಪಲ್​ ಸಹ ಸಂಸ್ಥಾಪಕ ಸ್ಟೀವ್​ ವೊಜ್ನಿಕ್​ ಸೇರಿದಂತೆ ಹಲವು ಎಐ ಸಂಶೋಧಕರು ಪತ್ರವನ್ನು ಬರೆದಿದ್ದರು. ಈ ಎಐ ವ್ಯವಸ್ಥೆಯನ್ನು 6 ತಿಂಗಳ ಕಾಲ ವಿರಾಮಗೊಳಿಸುವಂತೆ ಅವರು ಪತ್ರದಲ್ಲಿ ತಿಳಿಸಿದ್ದರು.

ಓಪನ್​ಎಐನಿಂದ ಹೊರ ನಡೆದಿದ್ದ ಮಸ್ಕ್​: 2018ರಲ್ಲೇ ಮಾಸ್ಕ್​ ಈ ಓಪನ್​ ಎಐ ಅನ್ನು ವಶ ಪಡೆಯಲು ಮುಂದಾಗಿದ್ದರು. ಆದರೆ, ಸ್ಯಾಮ್​ ಅಲ್ಟಮಾನ್​ ಮತ್ತು ಓಪನ್​ಎಐನ ಇನ್ನಿತರ ಸಂಸ್ಥಾಪಕರು ಈ ಮನವಿಯನ್ನು ತಿರಸ್ಕರಿಸಿದ್ದರು. ಇದೇ ಹಿನ್ನೆಲೆ ಆರಂಭಿಕ ಹೂಡಿಕೆ ಮಾಡಿದ್ದ ಮಸ್ಕ್​ ಅವರು ಸಂಸ್ಥೆಯಿಂದ ಹೊರ ನಡೆದರು ಎಂದು ಸೆಮಫೋರ್​ ವರದಿ ಮಾಡಿದೆ. ಮಸ್ಕ್​ 1 ಬಿಲಿಯನ್​ ಡಾಲರ್​​ ಪೂರೈಸುವ ಭರವಸೆ ತಿರಸ್ಕರಿಸಿದರು. ಆದರೆ, ಅವರು 100 ಮಿಲಿಯನ್​ ಕೊಡುಗೆಯನ್ನು ನೀಡಿ, ಹೊರ ನಡೆದರು ಎಂದು ವರದಿ ತಿಳಿಸಿದೆ.

ಲಾಭದ ಕಂಪನಿ ಓಪನ್​ಎಐ: 2019ರಲ್ಲಿ ಓಪನ್​ಎಐ ತನ್ನ ಕಂಪ್ಯೂಟ್​ ಪವರ್​ ಪಾವತಿಗೆ ಅದು ಲಾಭವನ್ನು ಸಂಗ್ರಹಿಸುವುದಾಗಿ ತಿಳಿಸಿತು. ಇದಾದ ಆರು ತಿಂಗಳೊಳಗೆ ಮೈಕ್ರೋಸಾಫ್ಟ್​ ಓಪನ್​ಎಐಗೆ 1 ಬಿಲಿಯನ್​ ಪಾವತಿಗೆ ಮುಂದಾಯಿತು. ಇದಾದ ಬಳಿಕ ಓಪನ್​ಎಐ ತಂತ್ರಜ್ಞಾನ ಯುಗದಲ್ಲಿ ಹೊಸ ಇತಿಹಾಸವನ್ನೇ ಸೃಸ್ಟಿಸಿತು. ಓಪನ್​ಎಐ ಕಡೆಯ ಮೌಲ್ಯಮಾಪನ 20 ಬಿಲಿಯನ್​ ಡಾಲರ್​ ಆಗಿದೆ. ಜಗತ್ತಿನಲ್ಲಿರುವ ಎಐ ಸಂಸ್ಥೆಗಳಲ್ಲೇ ಈ ಓಪನ್​ಎಐ ಹೆಚ್ಚು ಮೌಲ್ಯ ಹೊಂದಿದೆ. ಇನ್ನು ಈ ಓಪನ್​ಎಐ ಕುರಿತು ಹಲವು ಬಾರಿ ಮಸ್ಕ್​ ಟೀಕೆ ಕೂಡಾ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಚಂದಾದಾರಿಕೆ ಆಧಾರಿತ ಹಣಗಳಿಸುವ ಯೋಜನೆ ಅನಾವರಣ: ಟ್ವಿಟರ್ ಸಿಇಒ

Last Updated : Apr 15, 2023, 12:55 PM IST

ABOUT THE AUTHOR

...view details