ನವದೆಹಲಿ: ಗ್ಲೋಬಲ್ ಸ್ಮಾರ್ಟ್‌ಫೋನ್ ಬ್ರಾಂಡ್ ಮೊಟೊರೊಲಾ ತನ್ನ ಹೊಸ ಕೈಗೆಟುಕುವ ಸ್ಮಾರ್ಟ್‌ಫೋನ್ ಮೊಟೊ ಜಿ13 ಅನ್ನು ದೇಶದಲ್ಲಿ ಬಿಡುಗಡೆ ಮಾಡುವುದಾಗಿ ಬುಧವಾರ ಪ್ರಕಟಿಸಿದೆ. ಹೊಸ ಸ್ಮಾರ್ಟ್ ಫೋನ್ 90Hz ರಿಫ್ರೆಶ್ ದರದೊಂದಿಗೆ 6.5 ಇಂಚಿನ IPS LCD ಡಿಸ್ಪ್ಲೇ ಹೊಂದಿರಲಿದೆ. ಹೊಸ ಮೊಟೊ g13 4GB RAM + 128GB ಸ್ಟೋರೇಜ್ ಮಾದರಿಗೆ ರೂ 9,999 ಮತ್ತು 4GB RAM + 64GB ಸ್ಟೋರೇಜ್ ಮಾದರಿಗೆ ರೂ 9,499 ಬೆಲೆ ನಿಗದಿ ಮಾಡಲಾಗಿದೆ ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ.
ಸಾಧನವು ಎರಡು ಬಣ್ಣಗಳಲ್ಲಿ ಮಾರಾಟಕ್ಕೆ ಲಭ್ಯವಾಗಲಿದೆ. ಮ್ಯಾಟ್ ಚಾರ್ಕೋಲ್ ಮತ್ತು ಲ್ಯಾವೆಂಡರ್ ಬ್ಲೂ ಈ ಎರಡು ಆಕರ್ಷಕ ವರ್ಣಗಳಲ್ಲಿ ಹೊಸ ಮೋಟೊ ಸ್ಮಾರ್ಟ್‌ಫೋನ್ ಸಿಗಲಿದೆ. ಏಪ್ರಿಲ್ 5 ರಿಂದ ಫ್ಲಿಪ್ಕಾರ್ಟ್, ಮೊಟೊರೊಲಾ ಡಾಟ್ ಇನ್ ಪೋರ್ಟಲ್ ಮತ್ತು ಪ್ರಮುಖ ಚಿಲ್ಲರೆ ಅಂಗಡಿಗಳಲ್ಲಿ ಮಾರಾಟವಾಗಲಿದೆ. ಸ್ಮಾರ್ಟ್‌ಫೋನ್ ಅಕ್ರಿಲಿಕ್ ಗ್ಲಾಸ್ (PMMA) ಬಾಡಿ ಹೊಂದಿದೆ ಮತ್ತು ಅಲ್ಟ್ರಾ ತೆಳುವಾದ ಮತ್ತು ಪ್ರೀಮಿಯಂ ವಿನ್ಯಾಸವನ್ನು ಹೊಂದಿದೆ.
ಹೊಸ ಫೋನ್ ಉತ್ತಮ ಕಾರ್ಯಕ್ಷಮತೆಗಾಗಿ MediaTek Helio G85 ಪ್ರೊಸೆಸರ್ ಹೊಂದಿದೆ. 50MP ಕ್ವಾಡ್ ಪಿಕ್ಸೆಲ್ ಕ್ಯಾಮೆರಾ ಸಿಸ್ಟಮ್ ಇದ್ದು, ಇದು ಬಳಕೆದಾರರಿಗೆ ಸುಸ್ಪಷ್ಟವಾದ ಚಿತ್ರಗಳನ್ನು ಸೆರೆಹಿಡಿಯಲು ಅನುವು ಮಾಡಿಕೊಡುತ್ತದೆ ಮತ್ತು 8MP ಮುಂಭಾಗದ ಕ್ಯಾಮೆರಾವನ್ನು ಸಹ ಹೊಂದಿದೆ. ಇದಲ್ಲದೆ, ಫೋನ್‌ನಲ್ಲಿ ಡಾಲ್ಬಿ ಅಟ್ಮಾಸ್‌ನಿಂದ ಟ್ಯೂನ್ ಮಾಡಲಾದ ಎರಡು ದೊಡ್ಡ ಸ್ಟಿರಿಯೊ ಸ್ಪೀಕರ್‌ಗಳನ್ನು ಅಳವಡಿಸಲಾಗಿದೆ. ಇದು ಬಳಕೆದಾರರಿಗೆ ಸುಮಧುರವಾದ ಸಂಗೀತದ ಅನುಭವವನ್ನು ನೀಡುತ್ತದೆ ಎಂದು ಕಂಪನಿ ಹೇಳಿದೆ. ಅಲ್ಲದೆ, ಹೊಸ ಸಾಧನವು 5000mAh ಬ್ಯಾಟರಿ ಹೊಂದಿದೆ.