ಕರ್ನಾಟಕ

karnataka

ETV Bharat / science-and-technology

ಚಂದ್ರ ಇಲ್ಲಿಯವರೆಗೆ ತಿಳಿದುಕೊಂಡಿದ್ದಕ್ಕಿಂತ 40 ಮಿಲಿಯನ್ ವರ್ಷ ಹಳೆಯದು; ಚಂದ್ರನ ವಯಸ್ಸೆಷ್ಟು ಗೊತ್ತಾ? - ಚಂದ್ರನಿಂದ ತರಲಾದ ಈ ಹರಳುಗಳು

ಹೊಸ ಸಂಶೊಧನೆಯ ಪ್ರಕಾರ ಚಂದ್ರನ ವಯಸ್ಸು 4.46 ಬಿಲಿಯನ್ ವರ್ಷ ಎಂದು ವಿಜ್ಞಾನಿಗಳು ಹೇಳಿದ್ದಾರೆ.

Moon 40 mn years older than earlier thought, reveal crystals from lunar surface
Moon 40 mn years older than earlier thought, reveal crystals from lunar surface

By ETV Bharat Karnataka Team

Published : Oct 24, 2023, 5:17 PM IST

ವಾಷಿಂಗ್ಟನ್ : ಚಂದ್ರನು ಇಲ್ಲಿಯವರೆಗೆ ನಾವು ತಿಳಿದುಕೊಂಡಿದ್ದಕ್ಕಿಂತ 40 ಮಿಲಿಯನ್ ವರ್ಷ ಹಳೆಯದು ಎಂದು ವಿಜ್ಞಾನಿಗಳು ಹೇಳಿದ್ದಾರೆ. 1972ರಲ್ಲಿ ಅಪೊಲೊ ನೌಕೆ ತಂದಿದ್ದ ಚಂದ್ರನ ಮೇಲಿನ ಹರಳುಗಳ ಅಧ್ಯಯನದ ನಂತರ ವಿಜ್ಞಾನಿಗಳು ಈ ನಿರ್ಧಾರಕ್ಕೆ ಬಂದಿದ್ದಾರೆ.

'ಜಿಯೋಕೆಮಿಕಲ್ ಪರ್​ಸ್ಪೆಕ್ಟಿವ್ ಲೆಟರ್ಸ್' ಹೆಸರಿನ ಜರ್ನಲ್​ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ, ಸಂಶೋಧಕರು ಚಂದ್ರನ ರಚನೆಯ ಸಮಯವನ್ನು ಗುರುತಿಸಲು ಹರಳುಗಳನ್ನು ಬಳಸಿದ್ದಾರೆ. ಹೊಸ ಅಧ್ಯಯನದ ಪ್ರಕಾರ ಚಂದ್ರನ ವಯಸ್ಸು ಈಗ ಅಂದುಕೊಂಡಿದ್ದಕ್ಕಿಂತ 40 ಮಿಲಿಯನ್ ವರ್ಷ ಹೆಚ್ಚು. ಅಂದರೆ ಚಂದ್ರ ಗ್ರಹ ಕನಿಷ್ಠ 4.46 ಬಿಲಿಯನ್ ವರ್ಷಗಳಷ್ಟು ಹಳೆಯದು.

"ಚಂದ್ರನಿಂದ ತರಲಾದ ಈ ಹರಳುಗಳು ದೈತ್ಯ ಪರಿಣಾಮದ ನಂತರ ರೂಪುಗೊಂಡ ಅತ್ಯಂತ ಹಳೆಯ ಘನವಸ್ತುಗಳಾಗಿವೆ ಮತ್ತು ಈ ಹರಳುಗಳು ಎಷ್ಟು ಹಳೆಯವು ಎಂದು ನಮಗೆ ತಿಳಿದಿರುವುದರಿಂದ, ಅವು ಚಂದ್ರನ ಕಾಲಾನುಕ್ರಮವನ್ನು ನಿರ್ಧರಿಸುವ ಮೂಲವಾಗಿವೆ" ಎಂದು ಅಮೆರಿಕದ ಫೀಲ್ಡ್ ಮ್ಯೂಸಿಯಂನಲ್ಲಿ ಉಲ್ಕಾಶಿಲೆ ಮತ್ತು ಧ್ರುವ ಅಧ್ಯಯನಗಳ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಫಿಲಿಪ್ ಹೆಕ್ ಹೇಳಿದರು.

ಅಧ್ಯಯನದಲ್ಲಿ ಬಳಸಲಾದ ಚಂದ್ರನ ಧೂಳಿನ ಮಾದರಿಯನ್ನು ಅಪೊಲೊ 17ರ ಗಗನಯಾತ್ರಿಗಳು 1972 ರಲ್ಲಿ ಭೂಮಿಗೆ ತಂದಿದ್ದರು. ಈ ಧೂಳು ಶತಕೋಟಿ ವರ್ಷಗಳ ಹಿಂದೆ ರೂಪುಗೊಂಡ ಸಣ್ಣ ಹರಳುಗಳನ್ನು ಹೊಂದಿದೆ. ಹೀಗಾಗಿ ಈ ಹರಳುಗಳು ಚಂದ್ರನು ಯಾವಾಗ ರೂಪುಗೊಂಡಿರಬೇಕು ಎಂಬುದರ ಸ್ಪಷ್ಟ ಸಂಕೇತವಾಗಿವೆ. 1972ರಲ್ಲಿ ನಡೆದ ಅಪೊಲೊ ಚಂದ್ರಯಾನವೇ ಕೊನೆಯ ಮಾನವ ಸಹಿತ ಚಂದ್ರಯಾನವಾಗಿದೆ.

ಮಂಗಳ ಗ್ರಹದ ಗಾತ್ರದ ವಸ್ತುವು ಭೂಮಿಗೆ ಅಪ್ಪಳಿಸಿ ಚಂದ್ರನನ್ನು ರೂಪಿಸಿದಾಗ, ಪ್ರಭಾವದ ಶಕ್ತಿಯು ಬಂಡೆಯನ್ನು ಕರಗಿಸಿ ಅಂತಿಮವಾಗಿ ಚಂದ್ರನ ಮೇಲ್ಮೈ ರಚನೆಯಾಯಿತು. ಶಿಲಾದ್ರವ ಸಾಗರವು ತಣ್ಣಗಾದ ನಂತರವೇ ಹರಳುಗಳು ರೂಪುಗೊಂಡಿರಬೇಕು. ಹೀಗಾಗಿ ಜಿರ್ಕಾನ್ ಹರಳುಗಳ ವಯಸ್ಸನ್ನು ನಿರ್ಧರಿಸುವ ಮೂಲಕ ಚಂದ್ರನ ಕನಿಷ್ಠ ವಯಸ್ಸನ್ನು ಕಂಡು ಹಿಡಿಯಬಹುದು.

ಸಹ ಸಂಶೋಧಕ ಜಾಂಗ್ ಅವರ ಹಿಂದಿನ ಅಧ್ಯಯನವು ಚಂದ್ರನ ಇದೇ ವಯಸ್ಸನ್ನು ಸೂಚಿಸಿತ್ತು. ಆದರೆ ಇತ್ತೀಚಿನ ಅಧ್ಯಯನದಲ್ಲಿ ಪರಮಾಣು ಪ್ರೋಬ್ ಟೊಮೊಗ್ರಫಿ ಎಂಬ ವಿಶ್ಲೇಷಣಾತ್ಮಕ ವಿಧಾನವನ್ನು ಇದೇ ಮೊದಲ ಬಾರಿಗೆ ಬಳಸಲಾಗಿದೆ. ಇದು ಚಂದ್ರನ ವಯಸ್ಸನ್ನು ಆದಷ್ಟು ನಿಖರವಾಗಿ ಪತ್ತೆ ಮಾಡಿದೆ. ಸಂಶೋಧಕರು ಕಂಡುಕೊಂಡ ಸೀಸದ ಐಸೊಟೋಪ್ ಗಳ ಮಾದರಿ ಸುಮಾರು 4.46 ಬಿಲಿಯನ್ ವರ್ಷಗಳಷ್ಟು ಹಳೆಯದು ಎಂದು ಕಂಡು ಬಂದಿದೆ. ಹೀಗಾಗಿ ಚಂದ್ರನು ಕನಿಷ್ಠ ಅಷ್ಟು ಹಳೆಯದಾಗಿರಬೇಕು ಎಂಬ ನಿರ್ಧಾರಕ್ಕೆ ಬಂದಿದ್ದಾರೆ ವಿಜ್ಞಾನಿಗಳು.

ಇದನ್ನೂ ಓದಿ : ಮಹಿಳಾ ಉದ್ಯೋಗಿಗೆ ಲಿಂಗ ತಾರತಮ್ಯ; ಗೂಗಲ್​ಗೆ 1.1 ಮಿಲಿಯನ್ ಡಾಲರ್ ದಂಡ

ABOUT THE AUTHOR

...view details