ನವದೆಹಲಿ:ಕಂಪ್ಯೂಟರ್ಗಳಲ್ಲಿ ಅಕ್ಷರಗಳನ್ನು ಟೈಪಿಸಲು ನಾವೆಲ್ಲರೂ ಬಳಸುವ ಮೈಕ್ರೊಸಾಫ್ಟ್ ವರ್ಡ್ಗೆ ಇಂದಿಗೆ 40 ವರ್ಷ ತುಂಬಿವೆ. ಆರಂಭದಲ್ಲಿ 'ಮಲ್ಟಿ-ಟೂಲ್ ವರ್ಡ್' ಹೆಸರಿನಲ್ಲಿ ಬಿಡುಗಡೆಯಾಗಿ, ಜನ ಪಿಸಿ ಮತ್ತು ಲ್ಯಾಪ್ಟಾಪ್ಗಳಲ್ಲಿ ಟೈಪ್ ಮಾಡುವ ವಿಧಾನವನ್ನು ಬದಲಾಯಿಸಿದ ಮೈಕ್ರೋಸಾಫ್ಟ್ ವರ್ಡ್ ಬುಧವಾರ 40ನೇ ವರ್ಷಕ್ಕೆ ಕಾಲಿಟ್ಟಿದೆ. ಟೈಪಿಂಗ್ ಮಶೀನ್ಗಳ ಬದಲಾಗಿ ಕಂಪ್ಯೂಟರ್ಗಳು ಕಚೇರಿಗಳಲ್ಲಿ ಕಾಣಿಸಿಕೊಂಡಾಗ ನಮಗೆ ಟೈಪ್ ಮಾಡಲು ಕಲಿಸಿಕೊಟ್ಟಿದ್ದೇ ಈ ಮೈಕ್ರೊಸಾಫ್ಟ್ ವರ್ಡ್.
ಮೈಕ್ರೊಸಾಫ್ಟ್ ವರ್ಡ್ನ ಮೊದಲ ಆವೃತ್ತಿಯನ್ನು 1981ರಲ್ಲಿ ಮಾಜಿ ಜೆರಾಕ್ಸ್ ಕಂಪನಿಯ ಪ್ರೋಗ್ರಾಮರ್ಗಳಾದ ಚಾರ್ಲ್ಸ್ ಸಿಮೊನಿ ಮತ್ತು ರಿಚರ್ಡ್ ಬ್ರಾಡಿ ತಯಾರಿಸಿದ್ದರು. ಮೈಕ್ರೋಸಾಫ್ಟ್ ಸಹ - ಸಂಸ್ಥಾಪಕ ಬಿಲ್ ಗೇಟ್ಸ್ ಮತ್ತು ಪಾಲ್ ಅಲೆನ್ 1981 ರಲ್ಲಿ ಈ ಇಬ್ಬರು ಜೆರಾಕ್ಸ್ ಉದ್ಯೋಗಿಗಳನ್ನು ಕರೆದು ತಮ್ಮ ಕಂಪನಿಯಲ್ಲಿ ನೇಮಿಸಿಕೊಂಡಿದ್ದರು.
ಮೊದಲ ವರ್ಡ್ ಆವೃತ್ತಿ ವರ್ಡ್ 1.0, ಅಕ್ಟೋಬರ್ 1983 ರಲ್ಲಿ ಕ್ಸೆನಿಕ್ಸ್ ಮತ್ತು ಎಂಎಸ್-ಡಾಸ್ ಗಾಗಿ ಬಿಡುಗಡೆಯಾಯಿತು. ಸ್ವಲ್ಪ ಸುಧಾರಿತ ಇಂಟರ್ಫೇಸ್ನೊಂದಿಗೆ ಮೊದಲ ವಿಂಡೋಸ್ ಆವೃತ್ತಿಯನ್ನು 1989 ರಲ್ಲಿ ಬಿಡುಗಡೆ ಮಾಡಲಾಯಿತು. 1990 ರಲ್ಲಿ ವಿಂಡೋಸ್ 3.0 ಬಿಡುಗಡೆಯಾದಾಗ ಎಂಎಸ್ ವರ್ಡ್ ದೊಡ್ಡ ಮಟ್ಟದ ವಾಣಿಜ್ಯ ಯಶಸ್ಸನ್ನು ಗಳಿಸಿತು.