ವಾಷಿಂಗ್ಟನ್:ವಿಂಡೋಸ್ 11 ರಲ್ಲಿ ನೋಟ್‌ಪ್ಯಾಡ್ ಅ್ಯಪ್ನ ಟ್ಯಾಬ್ ವೈಶಿಷ್ಟ್ಯಗಳನ್ನು ಮೈಕ್ರೋಸಾಫ್ಟ್ ಉದ್ಯೋಗಿಗಳು ಅನಿರೀಕ್ಷಿತವಾಗಿ ಕಳೆದ ಡಿಸೆಂಬರ್ನಲ್ಲಿ ಪ್ರಕಟಿಸಿದ್ದರು. ನೋಟ್ ಪ್ಯಾಡ್ ಇಂಟರ್ನಲ್ ವರ್ಷನ್ ಆನ್ಲೈನ್ ಸ್ಕ್ರೀನ್ಶಾಟ್ ಅನ್ನು ಅವರು ಹಂಚಿಕೊಳ್ಳುವ ಮೂಲಕ ಆ್ಯಪ್ ಹೊಸ ಟ್ಯಾಬ್ ಮೇಲ್ಮೈ ಲಕ್ಷಣವನ್ನು ತಿಳಿಸಿದ್ದರು.
ಒಂದಕ್ಕಿಂತ ಹೆಚ್ಚಿನ ಟ್ಯಾಬ್ಗಳೊಂದಿಗಿನ ಬೆಂಬಲವನ್ನು ಈ ಅಪ್ಡೇಟ್ ಪರಿಚಯಿಸಿದೆ ಎಂದು ಕಂಪನಿ ತಿಳಿಸಿದೆ. ಸಿಂಗಲ್ ನೋಟ್‌ಪ್ಯಾಡ್ ವಿಂಡೋದಲ್ಲಿ ಬಳಕೆದಾರರು ಒಂದಕ್ಕಿಂತ ಹೆಚ್ಚು ಫೈಲ್ಗಳನ್ನು ಸೃಷ್ಟಿಸಲು, ನಿರ್ವಹಿಸಲು ಮತ್ತು ಸಂಘಟಿಸಲು ಸಾಧ್ಯವಾಗಲಿದೆ.
ಏನಿದರ ವೈಶಿಷ್ಟತೆ:ಮೇಲಾಗಿ, ಬಳಕೆದಾರರು ತಮ್ಮ ಸ್ವಂತ ವಿಂಡೋವನ್ನು ಡ್ರಾಗ್ ಮಾಡುವ ಮೂಲಕ ಬಳಕೆದಾರರು ತಮ್ಮ ಫೈಲ್ಗಳೊಂದಿಗೆ ಮಲ್ಟಿಪಲ್ ವಿಂಡೋ ಮೂಲಕ ಕೆಲಸ ಮಾಡಬಹುದಾಗಿದೆ. ಈ ಹೊಸ ಆ್ಯಪ್ ಹೊಸ ಟ್ಯಾಬ್ನಲ್ಲಿ ವಿಂಡೋ ತೆರೆಯಲು ಕಸ್ಟಮೈಸ್ ಮಾಡುವ ವ್ಯವಸ್ಥೆ ಹೊಂದಿದೆ. ಅಪ್ಡೇಟ್ ಜೊತೆಯಲ್ಲಿ ಸೇವ್ ಆಗಿರದ ಫೈಲ್ಗಳ ನಿರ್ವಹಣೆಯಲ್ಲಿ ಅಭಿವೃದ್ಧಿ ಜೊತೆ ಜೊತೆಗೆ ಟ್ಯಾಬ್ ಬೆಂಬಲಿತ ನಿರ್ವಹಣೆಗೆ ಶಾರ್ಟ್ಕಟ್ನೊಂದಿಗೆ ಹೊಸ ಕೀಬೋರ್ಡ್ ಅನ್ನು ಬಳಕೆದಾರರು ಪಡೆಯಬಹುದಾಗಿದೆ. ಬಳಕೆದಾರರು ಇದರನ್ನು ಬಳಸುವಾಗ ಕೆಲವು ಸಮಸ್ಯೆಗಳನ್ನು ಅನುಭವಿಸುವ ಸಾಧ್ಯತೆ ಇರುವ ಬಗ್ಗೆ ಕೂಡ ಅರಿವು ಹೊಂದಿರುವುದಾಗಿ ಮೈಕ್ರೊಸಾಫ್ಟ್ ತಿಳಿಸಿದೆ.
ಕೆಲವು ಬಳಕೆದಾರರು ಕೆಲವು ಕೀಬೋರ್ಡ್ ಶಾರ್ಟ್ಗಳ ಜೊತೆ ಈ ಸಮಸ್ಯೆಯನ್ನು ಎದುರಿಸಬಹುದು. ಉನ್ನತ ಮಟ್ಟದ ಪ್ರದರ್ಶನ, ವಿಶ್ವಾಸರ್ಹತೆಯನ್ನು ಮುಟ್ಟುವಲ್ಲಿ ಈ ಹೊಸ ನೋಟ್‌ಪ್ಯಾಡ್ ಕಾರ್ಯ ನಿರ್ವಹಿಸಲಿದೆ ಎಂಬ ಭರವಸೆ ನೀಡುತ್ತೇವೆ ಎಂದು ಮೈಕ್ರೋಸಾಫ್ಟ್ ತಿಳಿಸಿದೆ. ಮೈಕ್ರೋಸಾಫ್ಟ್ ಕಳೆದ ವರ್ಷ ಫೈಲ್ ಎಕ್ಸ್‌ಪ್ಲೋರರ್‌ಗೆ ಟ್ಯಾಬ್‌ಗಳನ್ನು ಸೇರಿಸಿದ ನಂತರ, ಟ್ಯಾಬ್ಡ್ ಇಂಟರ್ಫೇಸ್ ಅನ್ನು ಪಡೆಯುವ ಮೊದಲ ಅಂತರ್ ನಿರ್ಮಿತ ಅಪ್ಲಿಕೇಶನ್ ನೋಟ್‌ಪ್ಯಾಡ್ ಆಗಿದೆ. ಕಂಪನಿಯು ಸುಮಾರು ಐದು ವರ್ಷಗಳ ಹಿಂದೆ ಹೊಸ ವೈಶಿಷ್ಟ್ಯದೊಂದಿಗೆ ವಿಂಡೋಸ್ 10ರಲ್ಲಿ ಅಪ್ಲಿಕೇಶನ್‌ಗಳಲ್ಲಿ ಟ್ಯಾಬ್‌ಗಳನ್ನು ಮೊದಲ ಬಾರಿಗೆ ಪರೀಕ್ಷಿಸಿದೆ.
ಒಂದೇ ವಿಂಡೋದಲ್ಲಿ ಹಲವು ವೆಬ್ಸೈಟ್: ಇದು ನೋಟ್‌ಪ್ಯಾಡ್, ಫೈಲ್ ಎಕ್ಸ್‌ಪ್ಲೋರರ್ ಮತ್ತು ಇತರ ಹಲವು ಅಪ್ಲಿಕೇಶನ್‌ಗಳಿಗೆ ಟ್ಯಾಬ್ ಬೆಂಬಲವನ್ನು ಹೊಂದಿದ್ದು. ಆದರೆ ಮೈಕ್ರೋಸಾಫ್ಟ್ ರದ್ದುಗೊಳಿಸಿ, ಇವುಗಳನ್ನು ಎಂದಿಗೂ ವಿಂಡೋಸ್ 10 ಬಳಕೆದಾರರಿಗೆ ಪರಿಚಯಿಸಲಿಲ್ಲ. ನೋಟ್‌ಪ್ಯಾಡ್ ಟ್ಯಾಬ್ ಬೆಂಬಲದ ವಿಂಡೋಸ್ 11ರಲ್ಲಿ ಗ್ರಾಫಿಕ್ಸ್ ಸೆಟ್ಟಿಂಗ್‌ಗಳ ಪುಟವನ್ನು ನವೀಕರಿಸುತ್ತಿದೆ. ಟ್ಯಾಬ್ನಲ್ಲಿನ ನೋಟ್‌ಪ್ಯಾಡ್ ಮೈಕ್ರೋಸಾಫ್ಟ್ ಎಡ್ಜ್ ವೆಬ್ ಬ್ರೋಸರ್ ಟ್ಯಾಬ್ನಂತೆ ಇರಲಿದೆ. ಇದು ಒಂದೇ ವಿಂಡೋದಲ್ಲಿ ಅನೇಕ ವೈಬ್ಸೈಟ್ಗಳನ್ನು ತೆರೆಯಲು ಬಳಕೆದಾರರಿಗೆ ಸಹಾಯ ಮಾಡುತ್ತದೆ.
ವಿಂಡೋ 11 ಅಪ್ಲಿಕೇಷನ್ ಹೊಸ ನವೀಕರಣದೊಂದಿಗೆ ಮೊದಲಿಗಿಂತ ವೇಗವಾಗಿ ಪುಟಗಳನ್ನು ಲೋಡ್ ಮಾಡುತ್ತವೆ. ಬಳಕೆದಾರರು ಚಾಟ್ ಪಟ್ಟಿಯ ಮೂಲಕ ಸ್ಕ್ರಾಲ್ ಮಾಡಿದಾಗ ಸುಪ್ತತೆಯನ್ನು ಶೇ.11,4 ರಷ್ಟು ಸುಧಾರಿಸಲಾಗಿದೆ. ಮತ್ತೊಂದೆಡೆ, ಚಾನಲ್ ಪಟ್ಟಿಯಲ್ಲಿ ಸ್ಕ್ರೋಲಿಂಗ್ ಈಗ ಶೇ.12,1 ರಷ್ಟು ವೇಗವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಮೈಕ್ರೋಸಾಫ್ಟ್ ತಿಳಿಸಿದೆ. ವಿಂಡೋಸ್ 11 ಬಳಕೆದಾರರು ಎಪಿಕೆ ಫೈಲ್ ಇರುವವರೆಗೂ ಅಮೆಜಾನ್ ಆ್ಯಪ್ ಸ್ಟೋರ್‌ನಲ್ಲಿ ಕಂಡು ಬರುವ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳನ್ನು ವಿಂಡೋಸ್ 11ನಿಂದಲೇ ಇನ್ಸ್ಟಾಲ್ ಮಾಡಲು ಸಾಧ್ಯವಾಗುತ್ತದೆ.
ಇದನ್ನೂ ಓದಿ:ಎರಡನೇ ಪೀಳಿಗೆಯ ಹೋಮ್ಪಾಡ್ ಘೋಷಣೆ ಮಾಡಿದ ಆ್ಯಪಲ್: ಫೆಬ್ರವರಿ 3 ರಿಂದ ಮಾರುಕಟ್ಟೆಯಲ್ಲಿ ಲಭ್ಯ