ಸ್ಯಾನ್ ಫ್ರಾನ್ಸಿಸ್ಕೋ:ವಿಂಡೋಸ್ 7 ಮತ್ತು ವಿಂಡೋಸ್ 8/8.1 ಎರಡರಲ್ಲೂ ಎಡ್ಜ್ ವೆಬ್ ಬ್ರೌಸರ್‌ಗೆ ಸಪೋರ್ಟ್ ಕೊನೆಗೊಳಿಸುವ ದಿನಾಂಕವನ್ನು ಮೈಕ್ರೋಸಾಫ್ಟ್ ಘೋಷಿಸಿದೆ. ಕಂಪನಿಯು ಎರಡೂ ಆಪರೇಟಿಂಗ್ ಸಿಸ್ಟಮ್‌ಗಳಿಗೆ Microsoft Edge WebView2 ನ ಬೆಂಬಲವನ್ನು ಕೊನೆಗೊಳಿಸಿದೆ. WebView2 ಇದು ಅಪ್ಲಿಕೇಶನ್‌ಗಳಲ್ಲಿ ವೆಬ್ ವಿಷಯವನ್ನು ಎಂಬೆಡ್ ಮಾಡಲು ಡೆವಲಪರ್ ಕಂಟ್ರೋಲ್ ಟೂಲ್ ಆಗಿದೆ.
ಮೈಕ್ರೊಸಾಫ್ಟ್ನ ಬ್ಲಾಗ್‌ಪೋಸ್ಟ್ ಪ್ರಕಾರ, ಎರಡೂ ಆಪರೇಟಿಂಗ್ ಸಿಸ್ಟಂಗಳು ಜನವರಿ 10, 2023 ರಂದು ಎಡ್ಜ್‌ಗೆ ಬೆಂಬಲವನ್ನು ಕೊನೆಗೊಳಿಸಲಿವೆ. ಇದಲ್ಲದೇ, ವಿಂಡೋಸ್ 7 ಮತ್ತು ವಿಂಡೋಸ್ 8.1 ನಲ್ಲಿ ಕ್ರೋಮ್ ಸಪೋರ್ಟ್ ಕೂಡ ಕೊನೆಗೊಳ್ಳುತ್ತಿದೆ. ಆದ್ದರಿಂದ ಬಳಕೆದಾರರು ಕ್ರೋಮ್ ಬ್ರೌಸರ್ ಬಳಸಬೇಕಾದರೆ ವಿಂಡೋಸ್ 10 ಅಥವಾ ವಿಂಡೋಸ್ 11 ಗೆ ಅಪ್‌ಗ್ರೇಡ್ ಮಾಡಬೇಕಾಗುತ್ತದೆ.
ವಿಂಡೋಸ್ 7 ಮತ್ತು ವಿಂಡೋಸ್ 8/8.1 ಗೆ ಸಪೋರ್ಟ್ ಕೊನೆಗೊಳಿಸಲು ನಾವು ಡೆವಲಪರ್‌ಗಳನ್ನು ಪ್ರೋತ್ಸಾಹಿಸುತ್ತೇವೆ ಎಂದು ಮೈಕ್ರೋಸಾಫ್ಟ್ ಬ್ಲಾಗ್‌ಪೋಸ್ಟ್‌ನಲ್ಲಿ ಹೇಳಿದೆ. ಇದನ್ನು ಮಾಡುವುದು ಕೆಲ ಡೆವಲಪರ್‌ಗಳಿಗೆ ಸುಲಭವಲ್ಲ ಎಂಬುದು ಗೊತ್ತಿದೆ. ಆದಾಗ್ಯೂ ಈ ಆಪರೇಟಿಂಗ್ ಸಿಸ್ಟಮ್‌ಗಳಿಗೆ ಬೆಂಬಲವನ್ನು ಕೊನೆಗೊಳಿಸುವುದರಿಂದ ಬಳಕೆದಾರರನ್ನು ಸಂಭಾವ್ಯ ಭದ್ರತಾ ಬೆದರಿಕೆಗಳು ಮತ್ತು ಅಪಾಯಗಳಿಂದ ಸುರಕ್ಷಿತವಾಗಿರಿಸಲು ಸಾಧ್ಯವಾಗುತ್ತದೆ.