ಹೈದರಾಬಾದ್: ಖಗೋಳ ಘಟನೆಗಳು ಸದಾ ಮನುಷ್ಯರಲ್ಲಿ ವಿಸ್ಮಯವನ್ನು ಮೂಡಿಸುತ್ತಲೇ ಇರುತ್ತದೆ. ಇಂತಹ ಕೌತುಕದ ಸನ್ನಿವೇಶವೊಂದು ಇದೀಗ ನಡೆಯಲಿದೆ ಎಂದು ಹೈದರಾಬಾದ್ನ ಭಾರತೀಯ ಬಾಹ್ಯಾಕಾಶ ಸೊಸೈಟಿ ನಿರ್ದೇಶಕ ಶ್ರೀರಘುನಂದನ್ ಕುಮಾರ್ ತಿಳಿಸಿದ್ದಾರೆ. ಇದೇ ಡಿಸೆಂಬರ್ 16 ರಿಂದ 20ರವರೆಗೆ ಭೂಮಿಯ ಮೇಲೆ ಉಲ್ಕಾಪಾತಗಳ ಮಳೆ ಸುರಿಯಲಿದೆ. ಈ ಉಲ್ಕಾಪಾತದ ಘಟನೆಯನ್ನು ರಾತ್ರಿ 9ರಿಂದ ಬೆಳಗ್ಗೆ 5 ಗಂಟೆಯವರೆಗೆ ಬರೀಗಣ್ಣಿನಲ್ಲಿ ಪ್ರತಿಯೊಬ್ಬರು ಕಾಣಬಹುದಾಗಿದೆ ಎಂದಿದ್ದಾರೆ.
ಸೂರ್ಯನ ಸುತ್ತ ಸುತ್ತುತ್ತಿದ್ದ ಪೇಥಾನ್ ಎಂಬ ಕ್ಷುದ್ರಗ್ರಹವೊಂದು ಕಳೆದು ಕೆಲವು ತಿಂಗಳಿನಿಂದ ಭೂಮಿಯ ಕಕ್ಷೆಗೆ ಪ್ರವೇಶ ಮಾಡಿದೆ. ಇದು ಯಾವುಧೋ ಗಾಳಿಯೊಂದಿಗೆ ಘರ್ಷಣೆ ನಡೆಸಿ ಡಿಕ್ಕಿ ಹೊಡೆದು, ಸಣ್ಣ ಸಣ್ಣ ಉಲ್ಕಾಪಾತಗಳು ಭೂಮಿ ಮೇಲೆ ಬೀಳಲಿದೆ ಎಂದಿದ್ದಾರೆ. ಅಂತಾರಾಷ್ಟ್ರೀಯ ಹವಾಮಾನ ಸಂಘಟನೆ (ಐಎಂಒ) ವೆಬ್ಸೈಟ್ ಪ್ರಕಾರ, ಇದು ಗಂಟೆಗೆ 150 ಲೈಟ್ಬೀಮ್ಗಳಲ್ಲಿ ಹೊಳೆಯುತ್ತದೆ. ಈ ಉಲ್ಕಾಪಾತವೂ ನಗರಗಳಿಗಿಂತ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಪ್ರಖರವಾಗಿ ಕಾಣಿಸಲಿದೆ.
ಫೋಟೋ ಅಪ್ಲೋಡ್ ಮಾಡಿ: ಡಿಸೆಂಬರ್ ಮಾಸದಲ್ಲಿ ಖಗೋಳ ವಿದ್ಯಾಮಾನಗಳು ಹೆಚ್ಚು ಸ್ಪಷ್ಟವಾಗಿ ಗೋಚರಿಸಲಿದೆ. ಈ ಖಗೋಳ ವಿಸ್ಮಯ ಘಟನೆ ಯಾರಿಗೆ ಈ ಕ್ಷಣಗಳು ಕಾಣುತ್ತವೆಯೋ ಅವರು ಈ ಚಿತ್ರ ಅಥವಾ ವಿಡಿಯೋವನ್ನು ಸೆರೆ ಹಿಡಿದು ಐಎಂಒ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಬಹುದು ಎಂದು ಕುಮಾರ್ ತಿಳಿಸಿದ್ದಾರೆ.