ಕರ್ನಾಟಕ

karnataka

By

Published : Oct 7, 2022, 12:57 PM IST

ETV Bharat / science-and-technology

ಮೆಟಾದ ಮೆಟಾವರ್ಸ್ ಅಪ್ಲಿಕೇಶನ್​ನಲ್ಲಿ ಹಲವಾರು ಗುಣಮಟ್ಟದ ಸಮಸ್ಯೆ

ಮೆಟಾದ ಮೆಟಾವರ್ಸ್ ಅಪ್ಲಿಕೇಶನ್​ ಹಲವಾರು ಸಮಸ್ಯೆಗಳಿಂದ ಕೂಡಿದೆ ಎಂದು ವರದಿಯಾಗಿದೆ. ಕಂಪನಿಯಲ್ಲಿನ ವರ್ಚುಯಲ್ ರಿಯಾಲಿಟಿ (ವಿಆರ್) ಸಾಮಾಜಿಕ ನೆಟ್‌ವರ್ಕ್ ತಯಾರಕರು ಸಹ ಅದನ್ನು ಬಳಸುತ್ತಿಲ್ಲ ಎಂದು ತಿಳಿದುಬಂದಿದೆ.

metaverse app has several quality issues
ದ ಮೆಟಾವರ್ಸ್​ನಲ್ಲಿ ಮೀಮ್‌ಗಳು ಸಮಸ್ಯೆ

ಸ್ಯಾನ್ ಫ್ರಾನ್ಸಿಸ್ಕೋ: ಮೆಟಾದ ಮೆಟಾವರ್ಸ್ ಅಪ್ಲಿಕೇಶನ್​ (ಹಿಂದೆ ಫೇಸ್‌ಬುಕ್) ಹಲವಾರು ಸಮಸ್ಯೆಗಳನ್ನು ಹೊಂದಿದೆ ಎಂದು ವರದಿಯಾಗಿದೆ. ಅಲ್ಲದೇ ಕಂಪನಿಯಲ್ಲಿ ವರ್ಚುಯಲ್ ರಿಯಾಲಿಟಿ (ವಿಆರ್) ಸಾಮಾಜಿಕ ನೆಟ್‌ವರ್ಕ್​ನಲ್ಲಿ ಕೆಲಸ ಮಾಡುವವರು ಸಹ ಇದನ್ನು ಬಳಸುತ್ತಿಲ್ಲ. ಆಂತರಿಕ ಮೆಮೊಗಳನ್ನು ಉಲ್ಲೇಖಿಸಿ ದಿ ವರ್ಜ್‌ನಲ್ಲಿನ ವರದಿಯ ಪ್ರಕಾರ, 'ಹರೈಸನ್ ವರ್ಲ್ಡ್ಸ್' ಎಂಬ ಮೆಟಾದ ವಿಆರ್ ಸಾಮಾಜಿಕ ನೆಟ್‌ವರ್ಕ್ ಪ್ರಸ್ತುತ ಸ್ವಲ್ಪ ಭರವಸೆ ಹೊಂದಿದೆ.

ಹೆಚ್ಚಿನ ಬಳಕೆದಾರರಿಗೆ ನಾವು ಹಾರಿಜಾನ್​ನನ್ನು ನೀಡುವ ಮೊದಲು ಗುಣಮಟ್ಟದ ಮತ್ತು ಅದರ ಕಾರ್ಯಕ್ಷಮತೆಯ ಸಮಸ್ಯೆಗಳನ್ನು ನಾವು ಸರಿಪಡಿಸುತ್ತೇವೆ ಎಂದು ಮೆಟಾದ ಮೆಟಾವರ್ಸ್‌ನ ವಿಪಿ ವಿಶಾಲ್ ಷಾ ಹೇಳಿದ್ದಾರೆ.

ಕಳಪೆ - ವಿನ್ಯಾಸಗೊಳಿಸಿದ ಮೆಟಾವರ್ಸ್​ನಲ್ಲಿ ಮೀಮ್‌ಗಳು ಸಮಸ್ಯೆ ಎದುರಿಸಿದ ನಂತರ, ಈ ಬಗ್ಗೆ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲು ಆಗಸ್ಟ್‌ನಲ್ಲಿ ಮೆಟಾ ಸಂಸ್ಥಾಪಕ ಮತ್ತು CEO ಮಾರ್ಕ್ ಜುಕರ್‌ಬರ್ಗ್ ಒತ್ತಾಯಿಸಿದರು. ಇದೇ ತಿಂಗಳಲ್ಲಿ ಮೆಟಾದ ಹೊರೈಜನ್ ಸಾಮಾಜಿಕ ಮಾಧ್ಯಮ ವರ್ಚುವಲ್ ರಿಯಾಲಿಟಿ (ವಿಆರ್) ಪ್ಲಾಟ್‌ಫಾರ್ಮ್‌ನ ಭಾರತೀಯ ಮೂಲದ ವಿಪಿ ವಿವೇಕ್ ಶರ್ಮಾ ಅದರಿಂದ ಹೊರಬಂದರು.

ಇದನ್ನೂ ಓದಿ:ಅತ್ಯಂತ ದುರ್ಬಲ ಬ್ರೌಸರ್ ಕ್ರೋಮ್.. ಒಪೆರಾ ಬೆಸ್ಟ್​

ಹರೈಸನ್ ವರ್ಲ್ಡ್ಸ್ ಎಂಬುದು ಸಾಮಾಜಿಕ VR ಅನುಭವವಾಗಿದ್ದು, ನೀವು ಸ್ನೇಹಿತರೊಂದಿಗೆ ಹೊಸ ಸ್ಥಳಗಳನ್ನು ಅನ್ವೇಷಿಸಬಹುದು. ನಿಮ್ಮದೇ ಆದ ಅನನ್ಯ ಪ್ರಪಂಚವನ್ನು ನಿರ್ಮಿಸಿಕೊಳ್ಳಬಹುದು. ಇದು ಸಾಮಾಜಿಕ ಮೆಟಾವರ್ಸ್ ಪ್ಲಾಟ್‌ಫಾರ್ಮ್ ಪ್ರಸ್ತುತ ಕಂಪನಿಯ Quest VR ಹೆಡ್‌ಸೆಟ್‌ಗಳಲ್ಲಿ ಮಾತ್ರ ಲಭ್ಯವಿದೆ.

ABOUT THE AUTHOR

...view details