ಸ್ಯಾನ್ ಫ್ರಾನ್ಸಿಸ್ಕೋ: ಬಳಕೆದಾರರ ವೈಯಕ್ತಿಕ ಗುಣಲಕ್ಷಣಗಳ ಸಾಮ್ಯತೆ ಹೊಂದಿರುವ ಹೊಸ ಅವತಾರ್ಗಳನ್ನು ಈಗಾಗಲೇ ಮೆಟಾ ಪರಿಚಯಿಸಿತ್ತು. ಇದೀಗ ಈ ಅವತಾರ್ಗೆ ಮತ್ತಷ್ಟು ಹೊಸತನ ಸೇರಿಸಿರುವ ಮೆಟಾ ಹೊಸ ದೇಹಾಕೃತಿ, ಕೂದಲ ರಚನೆ ಮತ್ತು ಬಟ್ಟೆಗಳ ವಿನ್ಯಾಸದಲ್ಲಿ ಮತ್ತುಷ್ಟು ಹೊಸತನವನ್ನು ಪರಿಚಯಿಸಿದೆ. ಈ ಮೂಲಕ ಹೊಸ ಅವತಾರ್ಗಳ ಮೂಲಕ ಬಳಕೆದಾರರು ತಮ್ಮನ್ನು ತಾವು ಇನ್ನಷ್ಟು ಚೆನ್ನಾಗಿ ಅಭಿವ್ಯಕ್ತಿಗೊಳಿಸಬಹುದಾಗಿದೆ. ಈಗಾಗಲೇ ಮೆಟಾದ ಅವತಾರ್ಗಳು ಸಾಕಷ್ಟು ಜನಪ್ರಿಯತೆ ಪಡೆದಿದ್ದು, ಒಂದು ಬಿಲಿಯನ್ ಅವತಾರ್ಗಳನ್ನು ಫ್ಲಾಟ್ಫಾರ್ಮ್ನಲ್ಲಿ ಘೋಷಿಸಲಾಗಿದೆ ಎಂದು ಕಂಪನಿ ತಿಳಿಸಿದೆ.
ಇದರ ಜೊತೆಗೆ ಕೆಲವು ಹೊಸ ಸುಧಾರಣೆಗಳನ್ನು ತಂದಿದ್ದು, ಈ ವಸಂತ ಋತುವಿನಲ್ಲಿ ಈ ಮೆಟಾ ಅವತಾರ್ಗಳು ನಿಮ್ಮ ಲುಕ್ ಅನ್ನು ಇನ್ನಷ್ಟು ತಾಜಾತನಗೊಳಿಸಲು ಸಹಾಯ ಮಾಡುತ್ತದೆ. ನಿಮ್ಮನ್ನು ಇನ್ನಷ್ಟು ಚೆನ್ನಾಗಿ 'ಅಭಿವ್ಯಕ್ತಿಗೊಳಿಸಲು ಮತ್ತಷ್ಟು ಹೊಸ ಅವತಾರ್ಗಳನ್ನು ಪರಿಚಯಿಸಲಾಗಿದೆ. ಅದರಲ್ಲಿ 'ಹಿಪ್ ಡೋಂಟ್ ಲೈ' ಡ್ಯಾನ್ಸಿಂಗ್ ಮೂಲಕವೂ ನಿಮ್ಮನ್ನು ನೀವು ಪ್ರಸ್ತುತಪಡಿಸಿಕೊಳ್ಳಬಹುದಾಗಿದೆ ಎಂದು ಮೆಟಾ ತಮ್ಮ ಬ್ಲಾಗ್ಪೋಸ್ಟ್ನಲ್ಲಿ ತಿಳಿಸಿದೆ.
ಹೊಸ ನಾವೀನ್ಯತೆ: ವಿವಿಧ ದೇಹದ ಅಕೃತಿ ಹೊಂದಿರುವ ಅದರಲ್ಲೂ ವಿಶೇಷವಾಗಿ ದಪ್ಪ ದೇಹಾಕೃತಿ ಹೊಂದಿರುವ ಬಳಕೆದಾರರಿಗೆ ಕಂಪನಿ ಈ ಹೊಸ ದೇಹಾಕೃತಿಗಳನ್ನು ಪರಿಚಯಿಸಿದೆ. ಇದರಲ್ಲಿ ಇಬ್ಬರು ಕೊಂಚ ದಪ್ಪಗಿನ ಮಹಿಳೆಯರನ್ನು ಪ್ರಸ್ತುತ ಪಡಿಸುವ ದೇಹಾಕೃತಿಗಳಿವೆ. ಇದಕ್ಕಿಂತ ಹಚ್ಚಾಗಿ, ಕೆಲವು ಪ್ರಚಲಿತ ಆಯ್ಕೆಗಳು ನಿಮ್ಮನ್ನು ನೀವು ವಿಭಿನ್ನ ಎಂದು ತೋರಿಸಲು ಸಾಧ್ಯವಾಗುತ್ತದೆ ಎಂದಿದ್ದಾರೆ.