ನವದೆಹಲಿ:ಜನಪ್ರಿಯ ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನ ನಿಯಮಗಳನ್ನು ಉಲ್ಲಂಘಿಸಿ ಸುದ್ದಿ, ಫೋಟೋ, ವಿಡಿಯೋ ಅಥವಾ ವಿಷಯಗಳನ್ನು ಹಂಚಿಕೊಂಡ ಸುಮಾರು 34 ಕಟೆಂಟ್ ಅನ್ನು ಭಾರತದಲ್ಲಿ ಕಿತ್ತು ಹಾಕಲಾಗಿದೆ ಎಂದು ಮೆಟಾ ತಿಳಿಸಿದೆ. 2022 ಡಿಸೆಂಬರ್ ತಿಂಗಳ ವರದಿಯನ್ನು ಮೆಟಾ ಪ್ರಕಟಿಸಿದೆ. ಇದರನುಸಾರಫೇಸ್ಬುಕ್ನ 13 ನಿಯಮಗಳ ವಿರುದ್ಧವಾಗಿದ್ದ 22.54 ಮಿಲಿಯನ್ ಕಂಟೆಟ್ ಮತ್ತು ಇನ್ಸ್ಟಾಗ್ರಾಂನ 12 ನಿಯಮಗಳ ವಿರುದ್ಧವಾಗಿದ್ದ 12.03 ಮಿಲಿಯನ್ ಕಟೆಂಟ್ಗಳನ್ನು ತೆಗೆದು ಹಾಕಲಾಗಿದೆ.
ಡಿಸೆಂಬರ್ 1 ರಿಂದ 31ರವರೆಗೆ ಮೆಟಾ ನಿಯಮದ ವಿರುದ್ಧವಾಗಿರುವ ಕಟೆಂಟ್ ಸಂಬಂಧಿಸಿದಂತೆ ಫೇಸ್ಬುಕ್ನಿಂದ 764 ದೂರು ಸ್ವೀಕರಿಸಲಾಗಿದೆ. ಭಾರತೀಯ ಕುಂದುಕೊರತೆ ಕಾರ್ಯವಿಧಾನದ ಮೂಲಕ ಕಂಪನಿಯು ಈ ಕ್ರಮ ತೆಗೆದು ಕೊಂಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ನಿರ್ದಿಷ್ಟ ವಿಷಯಗಳ ಉಲ್ಲಂಘನೆಯ ವರದಿಗೆ ಪೂರ್ವಸ್ಥಾಪಿತ ಚಾನಲ್ಗಳ ಮೂಲಕ ಇದನ್ನು ಮಾಡಲಾಗಿದೆ. ತಮ್ಮ ಡೇಟಾವನ್ನು ಡೌನ್ಲೋಡ್ ಮಾಡಲು ಪರ್ಯಾಯ ಮಾರ್ಗ ಹುಡುಕುವುದು, ಖಾತೆ ಹ್ಯಾಕ್ ಮಾಡುವುದು ಸೇರಿದಂತೆ ಹಲವು ವಿಷಯಗಳ ಅನುಸಾರ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೆಟಾ ಹೇಳಿದೆ. 2021ರ ಐಟಿ ನಿಯಮ ಅನುಸಾರ ಮಾಸಿಕ ವರದಿಯಲ್ಲಿ ಈ ವಿಷಯ ತಿಳಿಸಿದೆ.
ವಿಶೇಷ ಪರಿಶೀಲನೆಯ ಅಗತ್ಯವಿರುವ 419 ಕಂಟೆಂಟ್ಗಳನ್ನು ನಿಯಮಗಳ ಅನುಸಾರ ನಾವು ಪರಿಶೀಲಿಸಿದ್ದು, ಒಟ್ಟು 205 ವರದಿಗಳ ಮೇಲೆ ನಾವು ಕ್ರಮ ಕೈಗೊಂಡಿದ್ದೇವೆ. ಉಳಿದ 214 ದೂರುಗಳನ್ನು ಪರಿಶೀಲಿಸಲಾಗಿದೆ. ಆದರೆ, ಇನ್ನೂ ಕ್ರಮ ಕೈಗೊಂಡಿಲ್ಲ ಎಂದು ಮೆಟಾ ತಿಳಿಸಿದೆ. ಭಾರತದ ಕುಂದುಕೊರತೆ ಕಾರ್ಯ ವಿಧಾನದ ಅನುಸಾರ ಇನ್ಸ್ಟಾಗ್ರಾಂ ಮೂಲಕ 10,820 ದೂರುಗಳನ್ನು ಪಡೆಯಲಾಗಿದೆ. ಇದರಲ್ಲಿ ಬಳಕೆದಾರರಿಗೆ ಒದಗಿಸಿದ ಟೂಲ್ ಬಳಕೆ ಮಾಡಿ 2,461 ಪ್ರಕರಣ ಪರಿಹರಿಸಲಾಗಿದೆ. 8,359 ದೂರುಗಳ ವಿಶೇಷ ಪರಿಶೀಲನೆ ಅಗತ್ಯವಿದೆ. 2,926 ವಿಷಯಗಳ ಪರಿಶೀಲನೆ ನಡೆಸಿ ಮೆಟಾ ಕ್ರಮಕ್ಕೆ ಮುಂದಾಗಿದೆ. ಉಳಿದ 5, 433 ದೂರುಗಳನ್ನು ಇನ್ಸ್ಟಾಗ್ರಾಂ ಪರಿಶೀಲನೆ ಕ್ರಮಕ್ಕೆ ಮುಂದಾಗಿಲ್ಲ.