ದಿನದಿಂದ ದಿನಕ್ಕೆ ಹೆಚ್ಚು ಬಳಕೆದಾರಸ್ನೇಹಿಯಾಗಿ ರೂಪುಗೊಳ್ಳುತ್ತಿರುವ ಮೆಟಾ ಒಡೆತನದ ವಾಟ್ಸ್ ಆ್ಯಪ್ಗೆ ಮತ್ತಷ್ಟು ಹೊಸ ವೈಶಿಷ್ಟ್ಯಗಳನ್ನು ಸೇರಿಸಲಾಗಿದೆ. ಈ ವಿಚಾರವನ್ನು ಮಾರ್ಕ್ ಜುಗರ್ ಬರ್ಗ್ ತಿಳಿಸಿದ್ದು, ವಾಟ್ಸಾಪ್ ಗ್ರೂಪ್ಗೆ ಎರಡು ಹೊಸ ಅಪ್ಡೇಟ್ ಮಾಡಿರುವುದಾಗಿ ತಿಳಿಸಿದ್ದಾರೆ.
ಈಗಾಗಲೇ ವಾಟ್ಸ್ ಆ್ಯಪ್ ಗ್ರೂಪ್ನಲ್ಲಿ ಡೇಟ್ ಫಿನ್ಸ್, ಆಡ್ಮಿನ್ ಕಂಟ್ರೋಲ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಪರಿಚಯಿಸಲಾಗಿದೆ. ಇದೀಗ ಈ ಗ್ರೂಪ್‌ಗಳ ಖಾಸಗಿತನದಲ್ಲಿ ಆಡ್ಮಿನ್ಗಳು ಮತ್ತಷ್ಟು ನಿಯಂತ್ರಣ ಹೊಂದಲು ಸಾಧ್ಯವಿದೆ. ಕಳೆದ ಕೆಲವು ತಿಂಗಳಿಂದ ಈ ಗ್ರೂಪ್‌ಗಳ ಅಪ್ಡೇಟ್ ವಿಷಯದಲ್ಲಿ ಹೊಸ ಹೊಸ ಮರ್ಪಾಡುಗಳನ್ನು ಮಾಡಲಾಗುತ್ತಿದೆ. ಗ್ರೂಪ್ ಸಂಖ್ಯೆ ದೊಡ್ಡದು, ಗ್ರೂಪ್ ಆಡ್ಮಿನ್ಗಳು ಇತರೆ ಸದಸ್ಯರು ಕಳುಹಿಸಿದ ಸಂದೇಶ ಅಳಿಸುವ ಅಧಿಕಾರ ನೀಡಲಾಗಿದೆ.
ಈ ಸಂಬಂಧ ಮಾಹಿತಿ ತಿಳಿಸಿರುವ ಮೆಟಾ, ವಾಟ್ಸ್ ಆ್ಯಪ್ನಲ್ಲಿ ಗ್ರೂಪ್ಗಳು ಅತ್ಯವಶ್ಯಕ. ಏಕ ಕಾಲದಲ್ಲಿ ಹಲವರಿಗೆ ಒಂದೇ ಸಂದೇಶ ಕಳುಹಿಸಲು, ಚರ್ಚೆ ನಡೆಸಲು ಸೇರಿದಂತೆ ಇನ್ನಿತರ ಅಂಶಗಳಿಗೆ ಈ ಗ್ರೂಪ್ ಅಗತ್ಯವಾಗಿದೆ. ಗ್ರೂಪ್ಗಳಿಗೆ ಮತ್ತಷ್ಟು ಸುಲಭ ಸಾಧನಗಳನ್ನು ಪರಿಚಯಿಸಲು ನಾವು ಉತ್ಸುಕರಾಗಿದ್ದಾರೆ. ಇಂದು ಕೆಲವು ಅಪ್ಡೇಟ್ಗಳನ್ನು ಪರಿಚಯಿಸುತ್ತಿದ್ದು, ಆಡ್ಮಿನ್ಗಳು ಇದನ್ನು ನಿರ್ವಹಣೆ ಮಾಡಬಹುದಾಗಿದ್ದು, ಇದನ್ನು ಸುಲಭವಾಗಿ ಪ್ರತಿಯೊಬ್ಬರಿಗೂ ತಿಳಿಸಬಹುದು ಎಂದಿದೆ.