ಸ್ಯಾನ್ ಫ್ರಾನ್ಸಿಸ್ಕೊ: ಇತ್ತೀಚಿಗಷ್ಟೆ ಆ್ಯಪಲ್ ವಾರ್ಷಿಕ ವರ್ಲ್ಡ್ ವೈಡ್ ಡೆವಲಪರ್ ಸಮ್ಮೇಳನದಲ್ಲಿ ಮೊದಲ ಬಾರಿಗೆ ಆ್ಯಪಲ್ ವಿಷನ್ ಪ್ರೊ ಎಆರ್ ಹೆಡ್‌ಸೆಟ್ ಅನ್ನು ಬಿಡುಗಡೆ ಮಾಡಲಾಗಿತ್ತು. ಡಿಜಿಟಲ್ ವೀಕ್ಷಣೆಯನ್ನು ನೈಜ ಅನುಭವ ನೀಡುವ ಉದ್ದೇಶದಿಂದ ಮೊದಲ ಬಾರಿಗೆ ಮಿಶ್ರ ರಿಯಾಲಿಟಿ ಹೆಡ್‌ಸೆಟ್ ಬಿಡುಗಡೆ ಮಾಡುತ್ತಿರುವುದಾಗಿ ಆ್ಯಪಲ್ ಸಿಇಒ ಟಿಮ್ ಕುಕ್ ತಿಳಿಸಿದ್ದರು. ಆದರೆ, ಈ ವಿಷನ್ ಪ್ರೊ ಬಗ್ಗೆ ಮೆಟಾ ಸಂಸ್ಥಾಪಕ ಮತ್ತು ಸಿಇಒ ಆಗಿರುವ ಮಾರ್ಕ್ ಜುಗರ್ಬರ್ಗ್ ಅಪಸ್ವರ ಎತ್ತಿದ್ದಾರೆ.
ಈ ಸಂಬಂಧ ಸಹೋದ್ಯೋಗಿಗಳೊಂದಿಗೆ ಸಭೆಯಲ್ಲಿ ಮಾತನಾಡಿರುವ ಅವರು, ಮಾರುಕಟ್ಟೆಗೆ ಪರಿಚಯಿಸಲಾಗಿರುವ ಆ್ಯಪಲ್ ವಿಷನ್ ಪ್ರಿ ಹೆಡ್‌ಸೆಟ್, ಕಂಪ್ಯೂಟಿಂಗ್‌ನ ಭವಿಷ್ಯದ ದೃಷ್ಟಿಯಿಂದ ಕೂಡಿರಬಹುದು. ಆದರೆ, ನನಗೆ ಬೇಕಾದ ರೀತಿ, ನಾನು ಅಪೇಕ್ಷಿಸಿದಂತೆ ಇದು ಇಲ್ಲ ಎಂದಿದ್ದಾರೆ.
ಆ್ಯಪಲ್ ತನ್ನ ವಿಷನ್ ಪ್ರೊನಲ್ಲಿ ಯಾವುದೇ ಹೊಸ ರೀತಿಯ ಪ್ರಮುಖವಾದ ಅಭಿವೃದ್ಧಿ ಹೊಂದಿದ ತಂತ್ರಜ್ಞಾನವನ್ನು ಪರಿಚಯಿಸಿಲ್ಲ. ಮೆಟಾ ಕೂಡ ಇದನ್ನು ಪರಿಶೀಲಿಸಿದ್ದು, ಹೊಸತನವನ್ನು ಪತ್ತೆ ಮಾಡಿಲ್ಲ. ವಿಷನ್ ಪ್ರೊ 3,499 ಡಾಲರ್ ಮಾರಾಟದ ಬೆಲೆಗೆ ಹೋಲಿಸಿದರೆ ಕ್ವೆಸ್ಟ್ 3 ಹೆಡ್‌ಸೆಟ್‌ನ ಮೂಲಕ ಅಂದರೆ 499 ಡಾಲರ್ ಕಡಿಮೆ ಮಟ್ಟದಲ್ಲಿ ಮೆಟಾ ದೊಡ್ಡ ಬಳಕೆದಾರರನ್ನು ತಲುಪಲು ಸಾಧ್ಯವಾಗುತ್ತದೆ. ಉತ್ಪನ್ನಗಳು ಎಲ್ಲರಿಗೂ ಸಾಧ್ಯವಾದಷ್ಟು ಸುಲಭವಾಗಿ ಮತ್ತು ಕೈಗೆಟುಕುವ ದರದಲ್ಲಿ ಜನರಿಗಗೆ ಮಟ್ಟಿಸಲು ನಾವು ಕೆಲಸ ಮಾಡುತ್ತೇವೆ. ಇದೆ ಮೆಟಾ ಗುರಿಯಾಗಿದ್ದು, ನಾವು ತಯಾರಿಸುವ ಉತ್ಪನ್ನಗಳ ಪ್ರಮುಖ ಭಾಗ ಇದಾಗಿದೆ. ನಾವು ಹತ್ತಾರು ಮಿಲಿಯನ್ ಕ್ವೆಸ್ಟ್‌ಗಳನ್ನು ಮಾರಾಟ ಮಾಡಿದ್ದೇವೆ ಎಂದರು.