ಕರ್ನಾಟಕ

karnataka

ETV Bharat / science-and-technology

ಮಸ್ಕ್​ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಂಡ 14ರ ಬಾಲಕ.. ಅದು ಹೇಗೆ ಸಾಧ್ಯ?

14ನೇ ವಯಸ್ಸಿನಲ್ಲಿ ಸ್ಪೇಸ್‌ - ಎಕ್ಸ್‌ನಂತಹ ಪ್ರತಿಷ್ಠಿತ ಕಂಪನಿಯಲ್ಲಿ ಉದ್ಯೋಗ ಪಡೆಯುವುದು ಸಾಮಾನ್ಯ ಸಂಗತಿಯಲ್ಲ. ಆದರೆ, ಕೈರಾನ್ ಕ್ವಾಜಿ ಅದನ್ನು ಸಾಧಿಸಿದ್ದಾರೆ. ವಿಜ್ಕಿಡ್ ಒಂದು ರೀತಿಯ ಇತಿಹಾಸ ಸೃಷ್ಟಿಸಿದೆ.

Meet Kairan Quazi, a software engineer at the age of 14 at Elon Musk's SpaceX
ಮಸ್ಕ್​ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಂಡ 14ರ ಬಾಲಕ.. ಅದು ಹೇಗೆ ಸಾಧ್ಯ?

By

Published : Jun 13, 2023, 7:04 AM IST

ಹೈದರಾಬಾದ್:14 ನೇ ವಯಸ್ಸಿನ ಒಬ್ಬ ಹುಡುಗನಿಂದ ಏನನ್ನು ನಿರೀಕ್ಷಿಸಬಹುದು? ಹೇಳಿ. ಎಲ್ಲರಂತೆ ಕಾಮನ್​ ಆಗಿ ಸ್ನೇಹಿತರೊಂದಿಗೆ ಚಾಟ್‌, ಆಟ, ಶಾಲೆಯಲ್ಲಿ ಪಾಠಗಳನ್ನು ಕಲಿಯುವುದು, ಚಲನಚಿತ್ರಗಳ ವೀಕ್ಷಣೆ ಇಂತಹುದ್ದನ್ನೆಲ್ಲ ಮಾಡಬಹುದು. ಇದು ಎಲ್ಲ ಸಾಮಾನ್ಯ ಬಾಲಕರ ದೈನಂದಿನ ಚಟುವಟಿಕೆ. ಆದರೆ ಇಲ್ಲೊಬ್ಬ ಬಾಲಕ ಇವೆಲ್ಲವನ್ನೂ ಮೀರಿದ ಚಟುವಟಿಕೆಗಳನ್ನ ಮಾಡ್ತಾನೆ.

ಹೌದು ಇಲ್ಲೊಬ್ಬ ವಿಶೇಷ ಬಾಲಕನಿದ್ದಾನೆ. ತನ್ನ 14 ನೇ ವಯಸ್ಸಿನಲ್ಲಿ ಎಲೋನ್ ಮಸ್ಕ್‌ನ ವಿಶ್ವಪ್ರಸಿದ್ಧ ಸ್ಪೇಸ್‌ಎಕ್ಸ್ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಂಡು ಎಲ್ಲರ ಹುಬ್ಬೇರುವಂತೆ ಮಾಡಿದ್ದಾನೆ. ಅಂದ ಹಾಗೆ ಚಿಕ್ಕ ವಯಸ್ಸಿನಲ್ಲೇ ಕೆಲಸ ಗಿಟ್ಟಿಸಿಕೊಂಡ ಹುಡುಗನ ಹೆಸರು ಕೈರಾನ್ ಕ್ವಾಜಿ.

ಸ್ಯಾನ್ ಫ್ರಾನ್ಸಿಸ್ಕೋದ ಕೈರಾನ್ ಕ್ವಾಜಿ ಶೀಘ್ರದಲ್ಲೇ ಸಾಂಟಾ ಕ್ಲಾರಾ ವಿಶ್ವವಿದ್ಯಾಲಯದಲ್ಲಿ ಎಂಜಿನಿಯರಿಂಗ್ ವಿಶ್ವವಿದ್ಯಾಲಯದಿಂದ ಪದವಿ ಪಡೆಯಲಿದ್ದಾರೆ. ಕ್ವಾಜಿ ಇತ್ತೀಚೆಗೆ ತನ್ನ ಲಿಂಕ್ಡ್‌ಇನ್‌ನಲ್ಲಿ ಪೋಸ್ಟ್ ಮಾಡಿದ್ದು, ಅವರು ಶೀಘ್ರದಲ್ಲೇ ಎಲೋನ್ ಮಸ್ಕ್‌ನ ಸ್ಪೇಸ್‌ಎಕ್ಸ್‌ನಲ್ಲಿ ಸ್ಟಾರ್‌ಲಿಂಕ್ ತಂಡವನ್ನು ಸೇರಲಿದ್ದಾರೆ. ಅತ್ಯಂತ ಪಾರದರ್ಶಕ, ಸವಾಲಿನಿಂದ ಕೂಡಿದ ತಾಂತ್ರಿಕ ಹಾಗೂ ಮೋಜಿನ ಸಂದರ್ಶನ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಎದುರಿಸಿರುವ ಕ್ವಾಜಿ, ಕೆಲಸಕ್ಕೆ ಹೋಗಲು ಸನ್ನದ್ಧನಾಗಿದ್ದಾನೆ.

ಸ್ಟಾರ್ ಲಿಂಕ್ ಇಂಜಿನಿಯರಿಂಗ್ ತಂಡಕ್ಕೆ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಸೇರ್ಪಡೆಯಾಗುತ್ತಿದ್ದೇನೆ ಎಂದು 14 ರ ಬಾಲಕ ಕೈರಾನ್​ ಕ್ವಾಜಿ ಹರ್ಷ ವ್ಯಕ್ತಪಡಿಸಿದ್ದಾನೆ. ವಯಸ್ಸಿನ ಆಧಾರದ ಮೇಲೆ ಸಾಮರ್ಥ್ಯ ಮತ್ತು ಪ್ರಬುದ್ಧತೆಯನ್ನು ನಿರ್ಣಯಿಸುವ ಹಳೆಯ ಸಂಪ್ರದಾಯವನ್ನು ಮುರಿಯಲು ಸ್ಪೇಸ್‌ಎಕ್ಸ್ ತನಗೆ ಅವಕಾಶ ನೀಡಿದೆ ಎಂದು ಬಾಲಕ ಸಂತಸ ವ್ಯಕ್ತಪಡಿಸಿದ್ದಾನೆ. ಅವರ ಲಿಂಕ್ಡ್‌ಇನ್ ಪ್ರೊಫೈಲ್ ಪ್ರಕಾರ, ಕ್ವಾಜಿ ಅವರು ಕೃತಕ ಬುದ್ಧಿಮತ್ತೆ (AI) ಮತ್ತು ಮೆಷಿನ್ ಲರ್ನಿಂಗ್‌ನಲ್ಲಿ ತರಬೇತಿ ಪಡೆದ ಅನುಭವವನ್ನು ಹೊಂದಿದ್ದಾನೆ. ಅವರು ಕೆಲವು ಪ್ರತಿಷ್ಠಿತ ಕಂಪನಿಗಳಲ್ಲಿ ಇಂಟರ್ನ್‌ಶಿಪ್ ಕೂಡಾ ಮಾಡಿದ್ದಾನೆ ಮತ್ತು ಅತ್ಯಾಧುನಿಕ ತಂತ್ರಜ್ಞಾನಗಳ ಬಗ್ಗೆ ಜ್ಞಾನವನ್ನು ಗಳಿಸಿ, ಇಂತಹ ಸಣ್ಣ ವಯಸ್ಸಿನಲ್ಲೇ ವಿಶ್ವದ ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದಾನೆ ಬಾಲಕ.

ಕೈರಾನ್​ ತನ್ನ ಒಂಬತ್ತನೆಯ ವಯಸ್ಸಿನಲ್ಲಿ ಲಾಸ್ ಪೊಸಿಟಾಸ್ ಸಮುದಾಯ ಕಾಲೇಜಿಗೆ ಸೇರಿದ್ದರು. ಅತ್ಯುನ್ನತ ಶ್ರೇಣಿಯೊಂದಿಗೆ ಅಸೋಸಿಯೇಟ್ ಆಫ್ ಸೈನ್ಸ್ (ಗಣಿತ) ಉತ್ತೀರ್ಣರಾಗಿದ್ದಾರೆ. ಇಂಟೆಲ್ ಲ್ಯಾಬ್ಸ್‌ನಲ್ಲಿನ ಇಂಟೆಲಿಜೆಂಟ್ ಸಿಸ್ಟಮ್ಸ್ ರಿಸರ್ಚ್ ಲ್ಯಾಬ್‌ನ ನಿರ್ದೇಶಕರಾದ ಲಾಮಾ ನಾಚ್‌ಮನ್ ಅವರೊಂದಿಗೆ ಜನರೇಟಿವ್ ಎಐನಲ್ಲಿ ಕೆಲಸ ಮಾಡಿರುವುದು ಅವರ ವೃತ್ತಿ ಬದುಕಿಗೆ ಹೊಸ ಜೀವ ನೀಡಿತು ಎಂದು ಬಾಲಕ ಹೇಳಿಕೊಂಡಿದ್ದಾನೆ.

ಕೈರಾನ್ ಕ್ವಾಜಿ ತನ್ನ ಎರಡನೇ ವಯಸ್ಸಿನಲ್ಲಿ ಸ್ಪಷ್ಟವಾಗಿ ಮಾತನಾಡುತ್ತಿದ್ದ ಎಂದು ಪೋಷಕರು ಹೇಳುತ್ತಿದ್ದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಮೂರನೇ ತರಗತಿಗೆ ಬಂದಾಗ ಶಿಕ್ಷಕರು ಕ್ವಾಜಿಯ ಪ್ರತಿಭೆಯನ್ನು ಗುರುತಿಸಿದರು. ಈ ಸಂದರ್ಭದಲ್ಲಿ, ಈ ಪ್ರಯಾಣದಲ್ಲಿ ತನಗೆ ಸಹಾಯ ಮಾಡಿದ ಎಲ್ಲರಿಗೂ ಕ್ವಾಜಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ತನ್ನ ಪ್ರತಿಭೆಯನ್ನು ಗುರುತಿಸಿ ತನ್ನ ಸಾಮರ್ಥ್ಯವನ್ನು ನಂಬಿದ್ದಕ್ಕಾಗಿ ಸ್ಪೇಸ್‌ಎಕ್ಸ್‌ಗೆ ಧನ್ಯವಾದ ಎಂದು ಅವರು ಲಿಂಕ್ಡ್‌ಇನ್‌ನಲ್ಲಿ ಬರೆದುಕೊಂಡು, ಧನ್ಯವಾದಗಳನ್ನು ಸಮರ್ಪಿಸಿದ್ದಾರೆ.

ಇದನ್ನು ಓದಿ:ಹೊಸ ಇತಿಹಾಸ ಸೃಷ್ಟಿಸುತ್ತೇವೆ; ಟ್ವಿಟರ್​ ಸಿಇಒ ಲಿಂಡಾ ಯಾಕರಿನೊ

ABOUT THE AUTHOR

...view details