ಫುಕೊಕ (ಜಪಾನ್): ದಡಾರ ಸೋಂಕಿನ ಬಳಿಕ ಸಬಾಕ್ಯೂಟ್ ಸ್ಕ್ಲೆರೋಸಿಂಗ್ ಪ್ಯಾನೆನ್ಸ್‌ಫಾಲಿಟಿಸ್ ಅಥವಾ ಎಸ್‌ಎಸ್‌ಪಿಇ ಬೆಳೆಯಬಹುದಾಗಿದೆ ಎಂಬುದನ್ನು ಜಪಾನ್ ಸಂಶೋಧಕರು ತಿಳಿಸಿದ್ದಾರೆ. ಇದೊಂದು ವಿನಾಶಕಾರಿ ನರವೈಜ್ಞಾನಿಕ ಸ್ಥಿತಿಯಾಗಿದೆ ಎಂದಿದ್ದಾರೆ. ಇದು ಮೆದುಳಿಗೆ ಸೋಂಕು ತಗುಲಿಸುವ ಸಾಮರ್ಥ್ಯವನ್ನು ನೀಡುತ್ತದೆ. ಸೈನ್ಸ್ ಅಡ್ವಾನ್ಸಸ್ ಜರ್ನಲ್ ಅವರ ಸಂಶೋಧನೆಗಳ ಬಗ್ಗೆ ವರದಿ ತಿಳಿಸಿದೆ.
ಬಾಲ್ಯದಲ್ಲಿ ನಿರ್ದಿಷ್ಟ ವಯಸ್ಸಿನಲ್ಲಿ ನೀವು ದಡಾರಕ್ಕೆ ಒಳಗಾಗಿರಗಹುದು. 1970ಕ್ಕೂ ಮುಂಚೆ ಜನಿಸಿದವರೂ ಇಂದಿಗೂ ಈ ದಡಾರದ ಲಸಿಕೆ ಪಡೆದಿಲ್ಲ. ಇಂತಹ ಸ್ಥಿತಿಯಲ್ಲಿ ಈ ವೈರಸ್ ನಿಮಗೆ ಹಾನಿ ಮಾಡುವ ಸಾಧ್ಯತೆ ಇದೆ. ಇದು ಅತ್ಯಂತ ಸಾಂಕ್ರಾಮಿಕ ರೋಗಕಾರಕಗಳಲ್ಲಿ ಒಂದಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯು 2021 ರಲ್ಲಿ ಪ್ರಪಂಚದಾದ್ಯಂತ ಸುಮಾರು ಒಂಬತ್ತು ಮಿಲಿಯನ್ ಜನರು ದಡಾರದಿಂದ ಸೋಂಕಿಗೆ ಒಳಗಾಗಿದ್ದಾರೆ ಎಂದು ಅಂದಾಜಿಸಿದ್ದು, ಇದರಿಂದ 128,000 ಜನರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಇದರ ಲಭ್ಯತೆ ಹೊರತಾಗಿ ಇತ್ತೀಚೆಗೆ ಕೋವಿಡ್ ಸಾಂಕ್ರಾಮಿಕದಿಂದ ಲಸಿಕೆಯನ್ನು ಪಡೆಯಲಾಗಿದೆ ಎಂದಿದ್ದಾರೆ ಕ್ಯುಶು ವಿಶ್ವವಿದ್ಯಾಲಯದ ವೈದ್ಯಕೀಯ ವಿಜ್ಞಾನಗಳ ಸಹಾಯಕ ಪ್ರೊಫೇಸರ್ ಯುತಾ ಶಿರೋಗಾನೆ. ಎಸ್‌ಎಸ್‌ಪಿಇ ವಿರಳ ಮತ್ತು ದಡಾರದ ವೈರಸ್‌ನ ಗಂಭೀರತೆಗೆ ಕಾರಣವಾಗುತ್ತದೆ. ಆದಾಗ್ಯೂ ಸಾಮಾನ್ಯ ದಡಾರ ವೈರಸ್ ಮಿದುಳಿಗೆ ಹಾನಿ ಮಾಡುವ ಸಾಮರ್ಥ್ಯವನ್ನು ಹೊಂದಿಲ್ಲ. ಈ ಹಿನ್ನಲೆ ಎನ್ಸೆಫಾಲಿಟಿಸ್ ಅನ್ನು ಹೇಗೆ ಉಂಟುಮಾಡುತ್ತದೆ ಎಂಬುದು ಸ್ಪಷ್ಟವಾಗಿಲ್ಲ ಎಂದು ತಿಳಿಸಿದ್ದಾರೆ.
ದಡಾರ ವೈರಸ್ ರೋಗನಿರೋಧಕ ಮತ್ತು ಎಪಿಥೇಲಿಯಲ್ ಕೋಶಗಳಿಗೆ ಮಾತ್ರ ಸೋಂಕು ತಗುಲುತ್ತದೆ, ಜ್ವರ ಮತ್ತು ದದ್ದುಗಳನ್ನು ಉಂಟುಮಾಡುತ್ತದೆ ಎಂದು ಶಿರೋಗೇನ್ ತಿಳಿಸಿದ್ದಾರೆ. ಎಸ್‌ಎಸ್‌ಪಿಇ ರೋಗಿಗಳಲ್ಲಿ ದಡಾರ ವೈರಸ್ ದೇಹದಲ್ಲಿದ್ದು ಅದು ರೂಪಾಂತರಗೊಂಡಿರಬೇಕು. ನಂತರ ನರಕ್ಕೆ ಸೋಂಕನ್ನು ಉಂಟು ಮಾಡುವ ಸಾಮರ್ಥ್ಯವನ್ನು ಪಡೆಯುತ್ತದೆ. ದಡಾರದಂತಹ ಆರ್‌ಎನ್‌ಎ ವೈರಸ್‌ಗಳು ಹೆಚ್ಚಿನ ಪ್ರಮಾಣದಲ್ಲಿ ರೂಪಾಂತರಗೊಳ್ಳುತ್ತವೆ ಆದರೆ ಇದು ನ್ಯೂರಾನ್‌ಗಳಿಗೆ ಸೋಂಕು ತಗಲುವ ಕಾರ್ಯವಿಧಾನವು ನಿಗೂಢವಾಗಿದೆ.