ನವದೆಹಲಿ:ವಾಟ್ಸ್ಆ್ಯಪ್ ಡಿಜಿಟಲ್ ಅವತಾರ್ಗಳನ್ನು ತರುವುದಾಗಿ ಮೆಟಾ ಸಂಸ್ಥಾಪಕ ಮತ್ತು ಸಿಇಒ ಮಾರ್ಕ್ ಜುಕರ್ಬರ್ಗ್ ಘೋಷಿಸಿದ್ದಾರೆ. ವಾಟ್ಸ್ಆ್ಯಪ್ನಲ್ಲಿ ಬಳಕೆದಾರರು ತಮ್ಮ ವೈಯಕ್ತಿಕ ಅವತಾರ್ಗಳನ್ನು ಪ್ರೊಫೈಲ್ ಫೋಟೋವಾಗಿ ಬಳಕೆ ಮಾಡಬಹುದು. ಇಲ್ಲ, 36 ಕಸ್ಟಮ್ ಆಧಾರಿತ ಸ್ಟೀಕರ್ಗಳ ಮೂಲಕ ಹಲವು ಭಾವನೆ ಮತ್ತು ಕಾರ್ಯಗಳನ್ನು ಅಭಿವ್ಯಕ್ತ ಪಡಿಸಬಹುದಾಗಿದೆ.
ನಾವು ಅವತಾರ್ಗಳನ್ನು ವಾಟ್ಸ್ಆ್ಯಪ್ಗೆ ತರುತ್ತಿದ್ದೇವೆ. ನಿಮ್ಮ ಚಾಟ್ಗಳಲ್ಲಿ ಸ್ಟ್ರೀಕರ್ ಆಗಿ ಅವತಾರ್ಗಳನ್ನು ಬಳಕೆ ಮಾಡಬಹುದು. ಎಲ್ಲ ನಮ್ಮ ಆ್ಯಪ್ಗಳಲ್ಲಿ ಮತ್ತಷ್ಟು ಶೈಲಿಯೂ ಶೀಘ್ರದಲ್ಲೇ ಬರಲಿದೆ. ಹಲವಾರು ಸಂಯೋಜನೆ ಮೂಲಕ ಅಂದರೆ ಕೇಶ ಶೈಲಿ, ಮುಖ ಲಕ್ಷಣ ಮತ್ತು ಉಡುಪುಗಳ ಮೂಲಕ ನಿಮ್ಮ ಅವತಾರ್ಗಳನ್ನು ನೀವೇ ಸೃಷ್ಟಿಸಬಹುದು ಎಂದು ಅವರು ತಿಳಿಸಿದ್ದಾರೆ.