ನವದೆಹಲಿ:ತಂತ್ರಜ್ಞಾನ ಬೆಳೆದಂತೆಲ್ಲ ಬದಲಾವಣೆಗಳು ವೇಗ ಪಡೆದುಕೊಳ್ಳುತ್ತಿವೆ. ಈಗ ವಿಶ್ವ ಕೃತಕ ಬುದ್ಧಿಮತ್ತೆ ಮತ್ತು ಮಷಿನ್ ಲರ್ನಿಂಗ್ ಅಂದರೆ ಯಂತ್ರ ಕಲಿಕೆ ಎಂದು ಕರೆಯಲಾಗುವ ತಂತ್ರಜ್ಞಾನದ ಹಿಡಿತಕ್ಕೆ ಹೋಗುತ್ತಿದೆ. ಅದರಲ್ಲೂ ಭಾರತದಲ್ಲಿ ಈ ತಂತ್ರಜ್ಞಾನದ ಬಳಕೆ ತೀವ್ರ ವೇಗವನ್ನು ಪಡೆದುಕೊಳ್ಳುತ್ತಿದೆ.
ದೇಶದ ಶೇ.84 ವೃತ್ತಿಪರರಿಗೆ ಈ ಅವಕಾಶಗಳು ಹೇರಳವಾಗಿ ದೊರೆಯುತ್ತಿದೆ. ಯಂತ್ರ ಕಲಿಕೆ (ಮಷಿನ್ ಲರ್ನಿಂಗ್) ದತ್ತಾಂಶ ವಿಜ್ಞಾನ ವೃತ್ತಿಪರರಿಗಾಗಿ ನೇಮಕಾತಿದಾರರು ತಡಕಾಡುತ್ತಿದ್ದು, ಎಂಎಲ್ ಕೋರ್ಸ್ ಮಾಡಿದವರಿಗೆ ಈಗ ಭಾರೀ ಬೇಡಿಕೆ ಸೃಷ್ಟಿಯಾಗಿದೆ ಎಂದು ವರದಿಯೊಂದು ಹೇಳುತ್ತಿದೆ.
ಇದೀಗ ಎಂಸ್ ಎಕ್ಸೆಲ್ ಸೇರಿದಂತೆ ಇತರ ಪ್ರೊಗ್ರಾಮಿಂಗ್ ಅಪ್ಲಿಕೇಷನ್ಗಳ ಬಳಕೆಯೂ ಹೆಚ್ಚಾಗಿದೆ. ಅದರಲ್ಲೂ ಈಗೀಗ ಫೈಥಾನ್ ಅಪ್ಲಿಕೇಷನ್ ಭಾರಿ ಬೇಡಿಕೆ ಸೃಷ್ಟಿಸಿಕೊಂಡಿದೆ. ಇದು ಎಲ್ಲಾ ಕ್ಷೇತ್ರಗಳಲ್ಲಿ ಹೆಚ್ಚು ಬಳಸಿದ ಪ್ರೋಗ್ರಾಮಿಂಗ್ ಭಾಷೆಯಾಗಿ ಉಳಿದಿದೆ. MS Excel, Tableau ಮತ್ತು Power BI ಗಳು ಡೇಟಾ ಸೈನ್ಸ್ ವೃತ್ತಿಪರರು ಬಳಸುವ ಪ್ರಮುಖ ಮೂರು ದೃಶ್ಯೀಕರಣ ಸಾಧನಗಳಾಗಿವೆ ಎಂದು BYJU ನ ಸಮೂಹ ಕಂಪನಿಯಾದ ಗ್ರೇಟ್ ಲರ್ನಿಂಗ್‌ನ ವರದಿ ಹೇಳುತ್ತಿದೆ.