ನವದೆಹಲಿ: ಭಾರತ ಸದ್ಯ ಎಲೆಕ್ಟ್ರಾನಿಕ್ ವಾಹನಗಳು (ಇವಿ) ಸಂಖ್ಯೆ ಹೆಚ್ಚಾಗ ತೊಡಗಿದೆ. ಈ ವಾಹನಗಳ ಎಲೆಕ್ಟ್ರಾನಿಕ್ ಬ್ಯಾಟರಿಗಳಲ್ಲಿ ಲಿಥಿಯಂ ಪ್ರಮುಖ ಪಾತ್ರವಹಿಸುತ್ತದೆ. ಈ ನಡುವೆ ದೇಶದಲ್ಲಿ ಲಿಧೀಯಂ ನಿಕ್ಷೇಪ ಸಿಕ್ಕಿರುವುದು ಭಾರತದ ಭವಿಷ್ಯ ಉಜ್ವಲಗೊಳಿಸಲಿದೆ ಎನ್ನಲಾಗಿದೆ. 50 ಗಿಗಾ ವ್ಯಾಟ್ ದೇಶಿಯ ಲಿಥಿಯಂ - ಆಯಾನ್ ಬ್ಯಾಟರಿ ಉತ್ಪಾದನೆಯ ಗುರಿ ತಲುಪಲು ದೇಶ 33, 750 ಕೋಟಿ ಅವಶ್ಯಕತೆ ಇದೆ ಎಂದು ಸಿಇಇಡಬ್ಲ್ಯೂ ತಿಳಿಸಿದೆ. 2030ರ ಹೊತ್ತಿಗೆ ಭಾರತದ ಲಿಥಿಯಂ ಘಟಕಗಳ ಉತ್ಪಾದನೆ ಯೋಜನೆ 70-100 ಗಿಗಾ ವ್ಯಾಟ್ ಆಗಿರಲಿದೆ.
ಸದ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಪತ್ತೆಯಾಗಿರುವ ನಿಕ್ಷೇಪದಲ್ಲಿ 5.9 ಮಿಲಿಯನ್ ಟನ್ ಲಿಥೀಯಂ ಇದೆ. ಈ ನಿಕ್ಷೇಪದಲ್ಲಿ ಹೊರತೆಗೆದು ಬ್ಯಾಟರಿ - ಗ್ರೇಡ್ ಆಗಿ ಪರಿವರ್ತಿಸಿದರೆ ಲಿಥಿಯಂ 6 ಟಿಡಬ್ಲ್ಯೂಎಚ್ ಸೆಲ್ ಉತ್ಪಾದನೆ ಆಗಲಿದೆ ಎಂದು ಲೊಗ್9 ಮೆಟಿರಿಯಲ್ಸ್ ಸಂಸ್ಥಾಪಕ ಮತ್ತು ಸಿಇಒ ಡಾ ಅಕ್ಷಯ್ ಸಿಂಗಲ್ ತಿಳಿಸಿದ್ದಾರೆ.
ಲಿಥಿಯಂ ಹಗುರ ಮತ್ತು ಪ್ರತಿಕ್ರಿಯಾತ್ಮಕ ಲೋಹವಾಗಿದೆ. ಇದರಲ್ಲಿ ಆಕ್ಸೈಡ್ ಮತ್ತು ಕಾರ್ಬೋನೆಟ್ ಸಾಂದ್ರತೆ ಕಾಣಬಹುದಾಗಿದೆ. ಕಚ್ಛಾ ಲಿಥಿಯಂ ಅನ್ನು ಬ್ಯಾಟರಿ- ಗ್ರೇಡ್ ಆಗಿ ಪರಿವರ್ತಿಸುವ ಸಂಸ್ಕರಣಾ ಪ್ರಕ್ರಿಯೆ ಭಾರತದಲ್ಲಿ ಇಲ್ಲ. ಇದಕ್ಕಾಗಿ ನಾವು ಬೇರೆ ದೇಶಗಳನ್ನು ಅವಲಂಬಿಸಬೇಕಿದೆ. ಇದನ್ನು ಅಡೆತಡೆಗಳನ್ನು ಪರಿಹರಿಸಲು, ದೇಶದಲ್ಲಿ ಪೂರೈಕೆ ಸರಪಳಿಯು ಖಚಿತಪಡಿಸಿಕೊಳ್ಳಲು ವಸ್ತು ವಿಜ್ಞಾನ ಕ್ಷೇತ್ರದಲ್ಲಿನ ಪ್ರಗತಿಯು ಕಡ್ಡಾಯವಾಗಿದೆ.
ಪ್ರಾರಂಭಿಕ ಅಡೆತಡೆಗಳ ಹೊರತಾಗಿ, ಇವಿಯು ಭಾರತದಲ್ಲಿ ನಿಧಾನವಾಗಿ ಪ್ರವೇಶಿಸಿದ್ದು, ವೇಗವಾಗಿ ಮುನ್ನುಗ್ಗಿದೆ. ವಿಶೇಷವಾಗಿ ಇ ಸ್ಕೂಟರ್ನಲ್ಲಿ. ಇದೀಗ ಬ್ಯಾಂಡ್ವ್ಯಾಗನ್ ಕಾರಿನ ಉತ್ಪಾದನೆಗೆ ಕೂಡ ಮುಂದಾಗಿದೆ. ಈ ಮೂಲಕ 2030 ರ ವೇಳೆಗೆ ಸಾಂಪ್ರದಾಯಿಕ ಇಂಧನಗಳು ಮತ್ತು ಆಂತರಿಕ ದಹನಕಾರಿ ಎಂಜಿನ್ ವಾಹನಗಳ ಮೇಲಿನ ಅವಲಂಬನೆಯನ್ನು ಗಣನೀಯವಾಗಿ ಕಡಿತಗೊಳಿಸುವ ಗುರಿಯನ್ನು ತಲುಪಲಿದೆ.
2030ರ ಹೊತ್ತಿಗೆ ಖಾಸಗಿ ವಾಹನಗಳಲ್ಲಿ ಶೇ 30ರಷ್ಟು, ವಾಣಿಜ್ಯ ವಾಹನದಲ್ಲಿ ಶೇ 70ರಷ್ಟು ಇವಿ ವಾಹನದ ಮಾರಾಟವನ್ನು ಸರ್ಕಾರ ನಿರೀಕ್ಷಿಸುತ್ತಿದೆ. ಇದು ದೇಶದ ತೈಲ ಹೊರೆಯನ್ನು ಕಡಿಮೆ ಮಾಡುವುದಿಲ್ಲ. ಬದಲಾಗಿ ಶುದ್ದ ಪರಿಸರವನ್ನು ಖಚಿತಪಡಿಸುತ್ತದೆ. ಕಳೆದ ಎರಡು ವರ್ಷಗಳಲ್ಲಿ ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿ ಗಮನಾರ್ಹ ಏರಿಕೆ ಕಂಡಿದೆ. 2020-21ರಲ್ಲಿ 48,179 ಇವಿಗಳು ಮಾರಾಟವಾಗಿದ್ದರೆ, 2021-22ರಲ್ಲಿ 2,37,811 ವಾಹನ ಮಾರಾಟವಾಗಿದ್ದು, 2022-23ರಲ್ಲಿ 4,42,901ಕ್ಕೆ ಮಾರಾಟವಾಗಿದೆ.
ಮೂರು ಚಕ್ರದ ವಾಹನಗಳಲ್ಲಿ ಇವಿ ಅಳವಡಿಕೆ ಶೇ 4 ರಷ್ಟು ಪಾಲನ್ನು ಹೊಂದಿದೆ. 2025ರೊಳಗೆ ಭಾರತದ ಎಲೆಕ್ಟ್ರಾನಿಕ್ ಪ್ರಯಾಣಿಕರ ವಾಹನ ಶೇ 6ರಷ್ಟು ಹೆಚ್ಚಳವಾಗುವ ನಿರೀಕ್ಷೆ ಇದೆ. ದ್ವಿ ಚಕ್ರ, ತ್ರಿ ಚಕ್ರ ಮತ್ತು ನಾಲ್ಕು ಚಕ್ರ ವಹಾನಗಳಲ್ಲಿ ಈಗಾಗಲೇ 13 ಲಕ್ಷ ಇವಿಗಳು ಮಾರುಕಟ್ಟೆಯಲ್ಲಿದೆ. ಇದು ಬೆಳವಣಿಗೆ ಕಾಣಲಿದ್ದು, ಮುಂಬರುವ ವರ್ಷದಲ್ಲಿ ಅದ್ಭುತ ಭರವಸೆ ಕಾಣಲಿದೆ. ಕಣಿವೆ ರಾಜ್ಯದಲ್ಲಿ ಪತ್ತೆಯಾಗಿರುವ ಲಿಧಿಯಂ ನಿಕ್ಷೇತ ಭಾರತದ ಪರಿವರ್ತನೆಯಲ್ಲಿ, ಗ್ರಾಹಕ ಮಾರುಕಟ್ಟೆಯಲ್ಲಿ ದೊಡ್ಡ ಪರಿಣಾಮ ಕಾಣಲಿದೆ.
ಇದನ್ನೂ ಓದಿ: ಕಾಶ್ಮೀರದಲ್ಲಿ ದೇಶದ ಮೊದಲ ಲಿಥಿಯಂ ನಿಕ್ಷೇಪ ಪತ್ತೆ: ಕಣಿವೆ ನಾಡಿನ ಜನರಲ್ಲಿ ಮೂಡಿದ ಉದ್ಯೋಗಾವಕಾಶದ ಆಶಾಭಾವ