ಕರ್ನಾಟಕ

karnataka

ETV Bharat / science-and-technology

ಏಪ್ರಿಲ್ 1ರಿಂದ ಲೆಗಸಿ ಟ್ವಿಟರ್ ಬ್ಲೂ ಬ್ಯಾಡ್ಜ್‌ ಇರಲ್ಲ: ಎಲಾನ್ ಮಸ್ಕ್

ವೈಯಕ್ತಿಕ ಬಳಕೆದಾರರು ಮತ್ತು ಸಂಸ್ಥೆಗಳಿಗೆ ಟ್ವಿಟರ್‌ನಲ್ಲಿ ಎಲ್ಲಾ ಲೆಗಸಿ ಟ್ವಿಟರ್ ಬ್ಲೂ ಬ್ಯಾಡ್ಜ್​ಗಳ ಪರಿಶೀಲಿಸಿದ ಚೆಕ್‌ಮಾರ್ಕ್‌ಗಳನ್ನು ಏಪ್ರಿಲ್1 ರಿಂದ ತೆಗೆದುಹಾಕಲಾಗುವುದು ಎಂದು ಟ್ವಿಟ್ಟರ್ ಸಿಇಓ ಎಲಾನ್ ಮಸ್ಕ್ ಘೋಷಣೆ ಮಾಡಿದರು. ಟ್ವಿಟರ್ ಬ್ಲೂ ವೆರಿಫೈಡ್​ಗಾಗಿ ಭಾರತದಲ್ಲಿ ವೈಯಕ್ತಿಕ ಬಳಕೆದಾರರಿಗೆ ವರ್ಷಕ್ಕೆ 9,400 ರೂ. ನಿಗದಿಪಡಿಸಲಾಗಿದೆ.

Elon Musk
ಟ್ವಿಟ್ಟರ್ ಸಿಇಓ ಎಲಾನ್ ಮಸ್ಕ್

By

Published : Mar 24, 2023, 6:49 PM IST

ನವದೆಹೆಲಿ:ವೈಯಕ್ತಿಕ ಬಳಕೆದಾರರು ಮತ್ತು ಸಂಸ್ಥೆಗಳಿಗೆ ಏಪ್ರಿಲ್ 1ರಿಂದ ಲೆಗಸಿ ಟ್ವಿಟರ್ ಬ್ಲೂ ಬ್ಯಾಡ್ಜ್‌ಗಳ ಪರಿಶೀಲಿಸುವ ಚೆಕ್‌ಮಾರ್ಕ್‌ಗಳನ್ನು ತೆಗೆದುಹಾಕಲಿದೆ ಎಂದು ಟ್ವಿಟ್ಟರ್ ಸಿಇಓ ಎಲಾನ್ ಮಸ್ಕ್ ಶುಕ್ರವಾರ ಹೇಳಿದ್ದಾರೆ.

ಟ್ವಿಟರ್ ಬ್ಲೂ ವೆರಿಫೈಡ್​ಗಾಗಿ ಭಾರತದಲ್ಲಿನ ವೈಯಕ್ತಿಕ ಬಳಕೆದಾರರು ವರ್ಷಕ್ಕೆ 9,400 ರೂ. ಪಾವತಿಸಬೇಕಾಗುತ್ತದೆ. ಟ್ವಿಟರ್ ಬ್ಲೂ ವೆರಿಫೈಡ್​ ಈಗ ಜಾಗತಿಕವಾಗಿ ಲಭ್ಯವಿದೆ. ಬಳಕೆದಾರರು ವೆಬ್ ಬ್ರೌಸರ್ ಮೂಲಕ ಸೈನ್ ಅಪ್ ಮಾಡಿದರೆ, ತಿಂಗಳಿಗೆ 7 ಡಾಲರ್​ಗೆ ಬ್ಲೂ ವೆರಿಫೈಡ್ ಪಡೆಯಬಹುದು ಎಂದು ಎಲಾನ್ ಮಸ್ಕ್ ಘೋಷಿಸಿದರು.

ಲೆಗಸಿ ವೆರಿಫೈಡ್ ಪ್ರೋಗ್ರಾಂ:ಏಪ್ರಿಲ್1ರಿಂದ, ನಾವು ನಮ್ಮ ಲೆಗಸಿ ವೆರಿಫೈಡ್ ಪ್ರೋಗ್ರಾಂ ಮತ್ತು ಲೆಗಸಿ ವೆರಿಫೈಡ್ ಚೆಕ್ ಮಾರ್ಕ್ ಅನ್ನು ಹಂತಹಂತವಾಗಿ ತೆಗೆದುಹಾಕಲು ಪ್ರಾರಂಭಿಸುತ್ತೇವೆ ಎಂದು ಕಂಪನಿ ಹೇಳಿದೆ. ಟ್ವಿಟ್ಟರ್​ನಲ್ಲಿ ತಮ್ಮ ಬ್ಲೂ ಚೆಕ್‌ಮಾರ್ಕ್ ಅನ್ನು ಇರಿಸಿಕೊಳ್ಳಲು ಜನರು ಟ್ವಿಟರ್ ಬ್ಲೂ ಗೆ ಸೈನ್ ಅಪ್ ಮಾಡಬಹುದು. ಸಂಭಾಷಣೆಗಳು, ಅರ್ಧ ಜಾಹೀರಾತುಗಳು, ದೀರ್ಘ ಟ್ವೀಟ್‌ಗಳು, ಬುಕ್‌ಮಾರ್ಕ್ ಫೋಲ್ಡರ್‌ಗಳು, ಕಸ್ಟಮ್ ನ್ಯಾವಿಗೇಷನ್, ಟ್ವೀಟ್‌ಗಳನ್ನು ಸಂಪಾದಿಸುವುದು, ಟ್ವೀಟ್‌ಗಳನ್ನು ರದ್ದುಗೊಳಿಸುವುದು ಮತ್ತು ಹೆಚ್ಚಿನವುಗಳಲ್ಲಿ ಆದ್ಯತೆಯನ್ನು ಪಡೆಯಲು ಬ್ಲೂ ಚೆಕ್‌ಮಾರ್ಕ್ ಸೈನ್ ಅಪ್ ಮಾಡಬಹುದು.

ಇದನ್ನೂ ಓದಿ:ವಾಟ್ಸ್‌ ಆ್ಯಪ್​ ಅಪ್ಡೇಟ್‌ ಮಾಡಿದ್ರಾ? ಹೊಸ ಫೀಚರ್ಸ್‌ ಪರಿಚಯಿಸಿದೆ ಮೆಟಾ

ಏನಿದು ಚೆಕ್‌ಮಾರ್ಕ್?:ಪ್ರಸ್ತುತ, ಬ್ಲೂ ಚೆಕ್ ಮಾರ್ಕ್​ಗಳನ್ನು ಪರಿಶೀಲಿಸಿದ ಟ್ವಿಟ್ಟರ್​ ಬಳಕೆದಾರರು ಟ್ವಿಟ್ಟರ್​ ಬ್ಲೂಗೆ ಪಾವತಿಸಬೇಕಾಗುತ್ತದೆ. ಇದು ಯುಎಸ್​ನಲ್ಲಿ ವೆಬ್ ಮೂಲಕ ತಿಂಗಳಿಗೆ 8 ಡಾಲರ್​ ಮತ್ತು iOS ಮತ್ತು Android ನಲ್ಲಿನ ಅಪ್ಲಿಕೇಶನ್ ಪಾವತಿಗಳ ಮೂಲಕ ತಿಂಗಳಿಗೆ 11 ಡಾಲರ್​ ವೆಚ್ಚವಾಗುತ್ತದೆ. ಟ್ವಿಟ್ಟರ್​ ಕಂಪನಿಯು ಎಲ್ಲಾ ಬ್ಲೂ ಚೆಕ್​ಮಾರ್ಕ್​ ತೆಗೆದುಹಾಕುತ್ತದೆ ಎಂದು ಪದೇ ಪದೇ ಹೇಳಿದ್ದಾರೆ. ಏಕೆಂದರೆ ಅದು ಬಳಕೆದಾರರಿಗೆ ಶುಲ್ಕ ವಿಧಿಸುವ ಮೂಲಕ ಹಣ ಗಳಿಸಲು ಬಯಸುತ್ತಿದೆ.

ಇದನ್ನೂ ಓದಿ:ತಾನಾಗಿಯೇ ಇಂಟರ್ನೆಟ್​ ಬ್ರೌಸ್​ ಮಾಡುತ್ತೆ ಚಾಟ್​ಜಿಪಿಟಿ: ಹೊಸ ಪ್ಲಗಿನ್ ಕೈಚಳಕ!

50ರಷ್ಟು ಕಡಿಮೆ ಜಾಹೀರಾತು:"ಲೆಗಸಿ ಟ್ವಿಟ್ಟರ್‌ ಬ್ಲೂ ವೆರಿಫೈಡ್ ದುರದೃಷ್ಟವಶಾತ್ ಕರಫ್ಟೆಡ್ ಆಗಿದೆ. ಆದ್ದರಿಂದ ಕೆಲವೇ ತಿಂಗಳುಗಳಲ್ಲಿ ಇದನ್ನು ಕೈಬಿಡಲಾಗುವುದು ಎಂದು ಅವರು ಹೇಳಿದರು. ಟ್ವಿಟ್ಟರ್​ ಬ್ಲೂ ಚಂದಾದಾರರಿಗೆ 4,000 ಅಕ್ಷರಗಳ ದೀರ್ಘ ಟ್ವೀಟ್‌ಗಳನ್ನು ರಚಿಸಲು ಅವಕಾಶ ನೀಡಿದೆ. ಟ್ವಿಟ್ಟರ್​ ಬ್ಲೂ ಚಂದಾದಾರರು ತಮ್ಮ ಹೋಮ್ ಟೈಮ್‌ಲೈನ್‌ನಲ್ಲಿ ಶೇಕಡಾ 50 ರಷ್ಟು ಕಡಿಮೆ ಜಾಹೀರಾತುಗಳು ಗೋಚರಿಸುತ್ತವೆ.

ಕಂಪನಿಗಳು ಮತ್ತು ಬ್ರ್ಯಾಂಡ್‌ಗಳಿಗಾಗಿ ಟ್ವಿಟ್ಟರ್​ ಇತ್ತೀಚೆಗೆ ಗೋಲ್ಡ್​ ಚೆಕ್ ಮಾರ್ಕ್ ಅನ್ನು ಪರಿಚಯಿಸಿತು. ಸರ್ಕಾರಿ ಖಾತೆಗಳನ್ನು ಗ್ರೇ ಚೆಕ್-ಮಾರ್ಕ್‌ಗೆ ವರ್ಗಾಯಿಸಿತು. ಚಿನ್ನದ ಬ್ಯಾಡ್ಜ್ ಅನ್ನು ಕಾಪಾಡಿಕೊಳ್ಳಲು ತಿಂಗಳಿಗೆ 1,000 ಡಾಲರ್​ ಪಾವತಿಸಲು ಟ್ವಿಟರ್ ಕಂಪನಿಗಳಿಗೆ ಹೇಳಿದೆ. ಪಾವತಿಸದ ಬ್ರ್ಯಾಂಡ್‌ಗಳು ಮತ್ತು ಸಂಸ್ಥೆಗಳು ತಮ್ಮ ಚೆಕ್‌ಮಾರ್ಕ್‌ಗಳನ್ನು ಕಳೆದುಕೊಳ್ಳುತ್ತವೆ.

ಇದನ್ನೂ ಓದಿ:ನಿಮ್ಮ ಯೋಚನೆಗಳ ಮೂಲಕ ರೋಬೋಟ್, ಯಂತ್ರಗಳ ನಿಯಂತ್ರಣ ಸಾಧ್ಯ: ಹೊಸ ಸಂಶೋಧನೆ

ABOUT THE AUTHOR

...view details