ಕ್ಯಾಲಿಫೋರ್ನಿಯಾ( ಅಮೆರಿಕ):ಬಾಹ್ಯಾಕಾಶ ನೌಕೆಯಲ್ಲಿನ ಕೂಲಂಟ್ ಸೋರಿಕೆ ಹಿನ್ನೆಲೆಯಲ್ಲಿ ನಾಸಾ ಮತ್ತು ರಷ್ಯಾದ ಬಾಹ್ಯಕಾಶ ಸಂಸ್ಥೆ ರಷ್ಯಾದ ಇಬ್ಬರು ಗಗನಯಾತ್ರಿಗಳ ಬಾಹ್ಯಕಾಶಯಾನವನ್ನು ರದ್ದುಗೊಳಿಸಿದ್ದಾರೆ. ಬಾಹ್ಯಾಕಾಶ ಯಾನಕ್ಕೆ ಸಜ್ಜಾಗಿದ್ದ ಸೆರ್ಗೆ ಪ್ರೊಕೊಪಿಯೆವ್ ಮತ್ತು ಡಿಮಿಟ್ರಿ ಪೆಟೆಲಿನ್ಗೆ ಯಾವುದೇ ಅಪಾಯವಾಗಿಲ್ಲ.
ಬಾಹ್ಯಕಾಶ ಕೇಂದ್ರದಲ್ಲಿ ಈ ವೇಳೆ ಗಗನಯಾತ್ರಿಗಳು ಇರಲಿಲ್ಲ. ಲೈವ್ ವೀಡಿಯೊ ಫೀಡ್‌ನಲ್ಲಿ ಸೋರಿಕೆ ಕಾಣಿಸಿಕೊಂಡಾಗ ಗಗನಯಾತ್ರಿಗಳು ಸ್ಪೇಸ್‌ಸೂಟ್‌ಗಳನ್ನು ಧರಿಸಿದ್ದರು. ಏರ್‌ಲಾಕ್ ಅನ್ನು ಒತ್ತಡಕ್ಕೆ ಒಳಪಡಿಸಲಾಗಿತ್ತು. ಹೀಗಾಗಿ ಯಾತ್ರಿಗಳು ತಮ್ಮ ಯಾನವನ್ನು ನಿಲ್ಲಿಸಿದ್ದಾರೆ.
ಹೀಗಾಗುತ್ತಿರುವುದು ಎರಡನೇ ಬಾರಿಯಾಗಿದೆ. ಈ ಹಿಂದೆಯೂ ಕೂಲೆಂಟ್ನಲ್ಲಿ ಸೋರಿಕೆ ಕಂಡು ಬಂದಿದ್ದರಿಂದ ರಷ್ಯಾ ಗಗನಯಾತ್ರಿಗಳ ಬಾಹ್ಯಕಾಶ ಯಾನ ರದ್ದು ಮಾಡಲಾಗಿತ್ತು. ಮೊದಲ ಬಾರಿ ನ. 25ರಂದು ಕೂಡ ಗಗನಯಾತ್ರಿಗಳ ಕೂಲಂಟ್ ಪಂಪ್ಗಳಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು.