ನವದೆಹಲಿ : ಪಿಸಿ ಮತ್ತು ಪ್ರಿಂಟರ್ ತಯಾರಿಸುವ ಪ್ರಖ್ಯಾತ ಕಂಪನಿ ಎಚ್ಪಿ ಗುರುವಾರ ಭಾರತದಲ್ಲಿ 1 ಕೆಜಿಗಿಂತ ಕಡಿಮೆ ತೂಕದ HP ಡ್ರಾಗನ್‌ಫ್ಲೈ G4 ಲ್ಯಾಪ್‌ಟಾಪ್‌ಗಳನ್ನು ಬಿಡುಗಡೆ ಮಾಡಿದೆ. ಹೈಬ್ರಿಡ್ ಕೆಲಸದ ವಾತಾವರಣದಲ್ಲಿ ಅತ್ಯಂತ ಪ್ರೀಮಿಯಂ ಅನುಭವ ನೀಡುವಂತೆ ಇವನ್ನು ವಿನ್ಯಾಸಗೊಳಿಸಲಾಗಿದೆ. ಹೊಸ ಲ್ಯಾಪ್‌ಟಾಪ್‌ಗಳು HP ಆನ್‌ಲೈನ್ ಸ್ಟೋರ್‌ಗಳಲ್ಲಿ ರೂ 2,20,000 ಆರಂಭಿಕ ಬೆಲೆಯಲ್ಲಿ ಲಭ್ಯವಿವೆ. ನ್ಯಾಚುರಲ್ ಸಿಲ್ವರ್ ಮತ್ತು ಸ್ಲೇಟ್ ಬ್ಲೂ ಬಣ್ಣದ ಮಾದರಿಗಳಲ್ಲಿ ಇವು ಲಭ್ಯವಿವೆ.
ಹೊಸ ಡ್ರಾಗನ್‌ಫ್ಲೈ ಲ್ಯಾಪ್‌ಟಾಪ್‌ಗಳು ಮೊಬೈಲ್ ಟೆಕ್-ಫಾರ್ವರ್ಡ್ ಜನತೆಯ ಅಗತ್ಯತೆಗಳನ್ನು ಪೂರೈಸಲು 13 ನೇ ಜನ್ ಇಂಟೆಲ್ ಕೋರ್ ಪ್ರೊಸೆಸರ್‌ಗಳಿಂದ ಚಾಲಿತವಾಗಿವೆ. ಲ್ಯಾಪ್‌ಟಾಪ್‌ಗಳು ಹೈಬ್ರಿಡ್-ರೆಡಿ ವಿನ್ಯಾಸ ಹೊಂದಿವೆ. ಇವು ಅತ್ಯಂತ ಹಗುರವಾಗಿದ್ದು ಮತ್ತು ಪೋರ್ಟಬಲ್ ಕೂಡ ಆಗಿವೆ. ಸದಾ ಪ್ರಯಾಣಿದಲ್ಲಿರುವ ಹಾಗೂ ಅದೇ ಕಾಲಕ್ಕೆ ಲ್ಯಾಪ್ಟಾಪ್ನಲ್ಲಿ ಕೆಲಸ ಮಾಡಬೇಕೆನ್ನುವವರಿಗೆ ಇವು ಸೂಕ್ತವಾಗಿವೆ. ಇದಲ್ಲದೆ, HP ಡ್ರ್ಯಾಗನ್ಫ್ಲೈ G4 ಉತ್ಪಾದಕತೆ, ಸಹಯೋಗ, ಭದ್ರತೆ ಮತ್ತು ಸುಸ್ಥಿರತೆಗೆ ಆದ್ಯತೆ ನೀಡುತ್ತದೆ. ವಿಶ್ವಾಸಾರ್ಹ ಮತ್ತು ಉನ್ನತ-ಕಾರ್ಯಕ್ಷಮತೆಯ ಬಿಸಿನೆಸ್ ಲ್ಯಾಪ್‌ಟಾಪ್‌ಗಳಿಗೆ ಹೊಸ ಮಾನದಂಡವನ್ನು ಸೃಷ್ಟಿಸಲಿದೆ ಎಂದು ಕಂಪನಿ ಹೇಳಿದೆ.
HP ಡ್ರಾಗನ್‌ಫ್ಲೈ G4 ವಿಶೇಷಣಗಳು, ವೈಶಿಷ್ಟ್ಯಗಳು:HP ಹೈಬ್ರಿಡ್ ಮಾದರಿಯ ಕೆಲಸದ ಮೇಲೆ ಗಮನ ಕೇಂದ್ರೀಕರಿಸುತ್ತಿದೆ. ಹೀಗಾಗಿ HP ಡ್ರಾಗನ್‌ಫ್ಲೈ G4 ಪೋರ್ಟಬಿಲಿಟಿಗಾಗಿ ಹಗುರವಾದ ವಿನ್ಯಾಸವನ್ನು ಹೊಂದಿದೆ. ಪ್ಯಾಕೇಜಿಂಗ್ ಮತ್ತು ಚಾಸಿಸ್ ಅನ್ನು ದೃಢವಾದ ವಸ್ತುಗಳಿಂದ ಮಾಡಲಾಗಿದೆ ಎಂದು HP ಹೇಳಿದೆ. ವಾಸ್ತವವಾಗಿ, ಕೀಬೋರ್ಡ್ ಕೀ ಕ್ಯಾಪ್ಗಳನ್ನು ಸಹ ಮರುಬಳಕೆಯ ವಸ್ತುಗಳಿಂದ ತಯಾರಿಸಲಾಗಿದೆ.