ನವದೆಹಲಿ : ದೇಶೀಯ ಸ್ಮಾರ್ಟ್‌ಫೋನ್ ಬ್ರಾಂಡ್ ಲಾವಾ ಬುಧವಾರ ಹೊಸ ಕೈಗೆಟುಕುವ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಹೊಸ ಲಾವಾ ಸ್ಮಾರ್ಟ್‌ಫೋನ್ ಗ್ಲಾಸ್ ಬ್ಯಾಕ್ ಫಿನಿಶ್, 5,000mAh ಬ್ಯಾಟರಿ ಮತ್ತು ಇನ್ನೂ ಹಲವಾರು ವೈಶಿಷ್ಟ್ಯತೆಗಳನ್ನು ಒಳಗೊಂಡಿದೆ. ಹೊಸ ಲಾವಾ 'ಯುವ 2' ಸ್ಮಾರ್ಟ್‌ಫೋನ್ ಬೆಲೆ 6,999 ರೂ. ಆಗಿದ್ದು, ಬುಧವಾರದಿಂದ ಲಾವಾದ ರಿಟೇಲ್ ನೆಟ್‌ವರ್ಕ್‌ನಲ್ಲಿ ಲಭ್ಯವಿರುತ್ತದೆ ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ. ಗ್ಲಾಸ್ ಬ್ಲೂ, ಗ್ಲಾಸ್ ಲ್ಯಾವೆಂಡರ್ ಮತ್ತು ಗ್ಲಾಸ್ ಗ್ರೀನ್ ಹೀಗೆ ಮೂರು ಬಣ್ಣಗಳಲ್ಲಿ ಇದು ಸಿಗಲಿದೆ.
ಹೊಸ ಫೋನ್‌ನ ವಿಶೇಷತೆ ಏನು?:"ಯುವ 2 ಯುನಿಸೊಕ್ T606 ಆಕ್ಟಾಕೋರ್ ಪ್ರೊಸೆಸರ್, 3GB RAM ಜೊತೆಗೆ UFS 2.2 ಕಂಪ್ಲೈಂಟ್ 64GB ROM ಅನ್ನು ಹೊಂದಿದೆ. ಇದನ್ನು ಹೆಚ್ಚುವರಿ 3GB ವರ್ಚುವಲ್ RAM ಮೂಲಕ ವಿಸ್ತರಿಸಬಹುದಾಗಿದೆ. ಹೊಸ ಸ್ಮಾರ್ಟ್‌ಫೋನ್ ಲಾವಾದ ಹೊಸ 'ಸಿಂಕ್' ಡಿಸ್‌ಪ್ಲೇ ಫಿಲಾಸಫಿ ಜೊತೆಗೆ 90Hz ರಿಫ್ರೆಶ್ ರೇಟ್ ಹೊಂದಿದೆ. ಸಿಂಕ್ ಡಿಸ್ ಪ್ಲೇ ಫಿಲಾಸಫಿಯು ಹೆಚ್ಚಿನ ಸ್ಕ್ರೀನ್-ಟು-ಬಾಡಿ ಅನುಪಾತ ಮತ್ತು ಕಡಿಮೆ ಬೆಜೆಲ್‌ಗಳನ್ನು ವಿನ್ಯಾಸಗೊಳಿಸುವುದರ ಮೇಲೆ ಕೇಂದ್ರೀಕೃತವಾಗಿದೆ.
ಕ್ಯಾಮರಾ ಹೇಗಿದೆ?:ಯುವ 2 13 MP ಡ್ಯುಯಲ್ AI ಹಿಂಬದಿಯ ಕ್ಯಾಮೆರಾ ಮತ್ತು ಸ್ಕ್ರೀನ್ ಫ್ಲ್ಯಾಷ್‌ನೊಂದಿಗೆ 5 MP ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ. ಇದು ಸೈಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್, ಅನಾಮಧೇಯ ಸ್ವಯಂ ಕರೆ ರೆಕಾರ್ಡಿಂಗ್ ಮತ್ತು ನಾಯ್ಸ್ ಕ್ಯಾನ್ಸಲಿಂಗ್ಗಾಗಿ ಡ್ಯುಯಲ್ ಮೈಕ್ರೊಫೋನ್‌ಗಳನ್ನು ಹೊಂದಿದೆ. 5,000 mAh ಬ್ಯಾಟರಿಯನ್ನು ಹೊಂದಿದ್ದು, ಟೈಪ್-C 10W ಚಾರ್ಜರ್‌ನಿಂದ ಚಾರ್ಜ್ ಆಗುತ್ತದೆ.