ನವದೆಹಲಿ: 2021ರ ಮೇ ತಿಂಗಳಲ್ಲಿ ದೇಶದಲ್ಲಿ 20 ದಶಲಕ್ಷಕ್ಕೂ ಹೆಚ್ಚು ಜನರು ಯೂಟ್ಯೂಬ್ ಅನ್ನು ಟಿವಿ ಸ್ಕ್ರೀನ್ ಮೇಲೆ ವೀಕ್ಷಿಸಿದ್ದಾರೆ. ವರ್ಷದಿಂದ ವರ್ಷಕ್ಕೆ ಶೇಕಡಾ 45 ರಷ್ಟು ಹೆಚ್ಚು ಯೂಟ್ಯೂಬ್ ವೀಕ್ಷಕರು ಹೆಚ್ಚಾಗುತ್ತಿದ್ದಾರೆ ಎಂದು ವಿಡಿಯೋ ಸ್ಟ್ರೀಮಿಂಗ್ ಕಂಪನಿ ತಿಳಿಸಿದೆ.
ಗೂಗಲ್ ಕೂಡ ಹಿಂದಿ, ತಮಿಳು, ತೆಲುಗು ಸೇರಿ ಭಾರತದ ಇತರ ಭಾಷೆಗಳಲ್ಲಿ ವಿಷಯ ವೀಕ್ಷಿಸಲು ಆದ್ಯತೆ ನೀಡುತ್ತಿದೆ. ಇದರಿಂದಾಗಿ ವೀಕ್ಷಕರ ಸಂಖ್ಯೆ ಹೆಚ್ಚಾಗಿದೆ. 20 ಮಿಲಿಯನ್ಗಿಂತಲೂ ಹೆಚ್ಚು ಜನರು ಟಿವಿಗಳಿಗೆ ಯೂಟ್ಯೂಬ್ ಕನೆಕ್ಷನ್ ಹೊಂದಿದ್ದಾರೆ.
ಈ ಹಿಂದೆ ಕೇವಲ ಮೊಬೈಲ್, ಲ್ಯಾಪ್ಗಳಲ್ಲಿ ಮಾತ್ರ ಲಭ್ಯವಿದ್ದ ಯೂಟ್ಯೂಬ್, ಇದೀಗ ಇಂಟರ್ನೆಟ್ ಸಂಪರ್ಕಿತ ಟಿವಿಗಳಲ್ಲೂ ಲಭ್ಯವಾಗಿದೆ ಎಂದು ಗೂಗಲ್ ಇಂಡಿಯಾ ಮ್ಯಾನೇಜರ್ ಮತ್ತು ಉಪಾಧ್ಯಕ್ಷ ಸಂಜಯ್ ಗುಪ್ತಾ ಹೇಳಿದರು.
ಭಾರತದಲ್ಲಿ ಡಿಜಿಟಲ್ ವ್ಯವಸ್ಥೆ ಮೂಲಕ ಆರ್ಥಿಕತೆ ಸದೃಢ ಪಡಿಸಲು ಗೂಗಲ್ ಬದ್ಧವಾಗಿದೆ. ಅಲ್ಲದೇ, ಇದರಲ್ಲಿ ಯೂಟ್ಯೂಬ್ ಮತ್ತು ಡಿಜಿಟಲ್ ವಿಡಿಯೋಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಹೇಳಿದರು.
ಹೆಚ್ಚಿನ ಗ್ರಾಹಕರು ನಿಖರ ಮಾಹಿತಿಗಾಗಿ, ಕೌಶಲ್ಯಾಭಿವೃದ್ಧಿಗಾಗಿ ಯೂಟ್ಯೂಬ್ ಬಳಸುತ್ತಾರೆ ಎಂದು ಯೂಟ್ಯೂಬ್ ಪಾಲುದಾರಿಕೆಯ ನಿರ್ದೇಶಕ ಸತ್ಯ ರಾಘವನ್ ಹೇಳಿದ್ದಾರೆ. ಭಾರತದಲ್ಲಿ ಕೋವಿಡ್ ಆರಂಭವಾದ ಅಂದಿನಿಂದ ಯೂಟ್ಯೂಬ್ ವೀಕ್ಷಕರ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆಯಾಗಿದೆ. ಮೇ 2021ರಲ್ಲಿ ವೃತ್ತಿ ಸಂಬಂಧಿತ ವಿಡಿಯೋಗಳ ವೀಕ್ಷಣೆ ಶೇಕಡಾ 60 ರಷ್ಟು ಹೆಚ್ಚಾಗಿದೆ.
ಇದನ್ನೂ ಓದಿ: SpaceX: ಮೊದಲ ಸಂಪೂರ್ಣ ನಾಗರಿಕ ಮಿಷನ್ ಉಡಾವಣೆಗೆ ಸಜ್ಜು
ಯೂಟ್ಯೂಬ್ ಪ್ಲಾಟ್ಫಾರ್ಮ್ನಲ್ಲಿರುವ 140 ಕ್ಕೂ ಹೆಚ್ಚು ಚಾನೆಲ್ಗಳು 10 ಮಿಲಿಯನ್ ಚಂದಾದಾರನ್ನು ಹೊಂದಿವೆ. 4 ಸಾವಿರ ಚಾನೆಲ್ಗಳು 1 ಮಿಲಿಯನ್ಗಿಂತಲೂ ಹೆಚ್ಚಿನ ಸಬ್ಸ್ಕ್ರೈಬರ್ಸ್ ಹೊಂದಿವೆ.