ನವದೆಹಲಿ:ಆ್ಯಪಲ್ ಕಂಪನಿ ತನ್ನ ಮೂರನೇ ಇವೆಂಟ್ 2020 ಅನ್ನು ಆಯೋಜಿಸುವುದಾಗಿ ಘೋಷಿಸಿದ್ದು, ಈ ಹಿಂದೆ ಹೇಳಿದ್ದ ‘ಒನ್ ಮೋರ್ ಥಿಂಗ್’ ಅನ್ನು ನವೆಂಬರ್ 10 ರಂದು ತಿಳಿಸುವುದಾಗಿ ಹೇಳಿದೆ. ಆ್ಯಪಲ್ ಇನ್ಸೈಡರ್ "ಒನ್ ಮೋರ್ ಥಿಂಗ್ ಈ ಕುರಿತು ಟ್ವೀಟ್ ಮಾಡಿದೆ.
ETV Bharat / science-and-technology
2020ರ 3ನೇ ಈವೆಂಟ್ ಆಯೋಜಿಸುವುದಾಗಿ ಘೋಷಿಸಿದ ಆ್ಯಪಲ್ ಕಂಪನಿ - ಆ್ಯಪಲ್ ಮ್ಯಾಕ್ ಡೆಸ್ಕ್‌ಟಾಪ್ ಶ್ರೇಣಿ ಸಿಲಿಕಾನ್‌ಗೆ ಪರಿವರ್ತನೆ ವಿಚಾರ
ಆ್ಯಪಲ್ ಕಂಪನಿ ತನ್ನ ಮೂರನೇ ಈವೆಂಟ್ 2020 ಅನ್ನು ಆಯೋಜಿಸುವುದಾಗಿ ಘೋಷಿಸಿದ್ದು, ಈ ಹಿಂದೆ ಹೇಳಿದ್ದ ‘ಒನ್ ಮೋರ್ ಥಿಂಗ್’ ಅನ್ನು ನವೆಂಬರ್ 10 ರಂದು ತಿಳಿಸುವುದಾಗಿ ಹೇಳಿದೆ.
ಈ ಘಟನೆಯು ಆ್ಯಪಲ್ ಮ್ಯಾಕ್ ಡೆಸ್ಕ್‌ಟಾಪ್ ಶ್ರೇಣಿ ಸಿಲಿಕಾನ್‌ಗೆ ಪರಿವರ್ತನೆಗೊಳ್ಳುವ ಸಾಧ್ಯತೆಯಿದೆ. ಜೂನ್‌ನಲ್ಲಿ ನಡೆದ ಡಬ್ಲ್ಯುಡಬ್ಲ್ಯೂಡಿಸಿ 20 ಡೆವಲಪರ್ ಸಮ್ಮೇಳನದಲ್ಲಿ, ಆಪಲ್ ತನ್ನ ಮ್ಯಾಕ್ ಡೆಸ್ಕ್‌ಟಾಪ್‌ಗಳಲ್ಲಿನ ಅಡ್ವಾನ್ಸ್ಡ್ RSC ಯಂತ್ರಗಳ(ARM) ಚಿಪ್‌ಗಳನ್ನು ಇಂಟೆಲ್ ಎಕ್ಸ್ 86 ಆರ್ಕಿಟೆಕ್ಚರ್‌ನೊಂದಿಗೆ ನೀಡುವುದಾಗಿ ಹೇಳಿತ್ತು. ಉದ್ಯಮದ ಕಾರ್ಯಕ್ಷಮತೆ ಹೆಚ್ಚಿಸಲು ಮತ್ತು ಶಕ್ತಿಯುತವಾಗಿಸಲು ಮತ್ತು ಹೊಸ ತಂತ್ರಜ್ಞಾನಗಳನ್ನು ಬಳಸಿಕೊಳ್ಳಲು ಮ್ಯಾಕ್ ಅನ್ನು ತನ್ನ ವಿಶ್ವದರ್ಜೆಯ ಕಸ್ಟಮ್ ಸಿಲಿಕಾನ್‌ಗೆ ಪರಿವರ್ತಿಸುತ್ತಿದೆ. ಮೊದಲ ಸಿಲಿಕಾನ್ ಮ್ಯಾಕ್ ಅನ್ನು ಈ ವರ್ಷದ ಕೊನೆಯಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಆ್ಯಪಲ್ ಹೇಳಿದೆ. ಇದು ನವೆಂಬರ್ 10 ರಂದು ಅನಾವರಣಗೊಳ್ಳುವ ನಿರೀಕ್ಷೆಯಿದೆ. ನವೆಂಬರ್ 10 ರ ಈವೆಂಟ್ ಆಪಲ್‌ನ ವೆಬ್‌ಸೈಟ್‌ನಲ್ಲಿ, ಆಪಲ್ ಟಿವಿ ಅಪ್ಲಿಕೇಶನ್‌ನಲ್ಲಿ ಮತ್ತು ಯೂಟ್ಯೂಬ್‌ನಲ್ಲಿ ನೇರ ಪ್ರಸಾರವಾಗಲಿದೆ.
ಕಳೆದ ಸೆಪ್ಟೆಂಬರ್‌ನಲ್ಲಿ ಆ್ಯಪಲ್ ಹೊಸ ಐಪ್ಯಾಡ್ ಏರ್ ಜೊತೆಗೆ ವಾಚ್ ಸರಣಿ 6 ಅನ್ನು ಬಿಡುಗಡೆ ಮಾಡಿತ್ತು. ಕಳೆದ ತಿಂಗಳು, ಕಂಪನಿಯು ನಾಲ್ಕು 5 ಜಿ ಸಾಧನಗಳು ಮತ್ತು ಹೋಮ್ ಪ್ಯಾಡ್ ಮಿನಿಗಳೊಂದಿಗೆ ಐಫೋನ್ 12ರ ಸರಣಿಯನ್ನು ಅನಾವರಣಗೊಳಿಸಿತ್ತು.