ಕರ್ನಾಟಕ

karnataka

ETV Bharat / science-and-technology

ಜಿಯೋ ₹2,999 ಪ್ಲಾನ್ ವ್ಯಾಲಿಡಿಟಿ ಹೆಚ್ಚಳ: 389 ದಿನಗಳವರೆಗೆ ಪ್ರತಿದಿನ 2.5 ಜಿಬಿ ಡೇಟಾ ಆಫರ್

389 ದಿನ ವ್ಯಾಲಿಡಿಟಿಯ "ಹ್ಯಾಪಿ ನ್ಯೂ ಇಯರ್ ಆಫರ್ 2024" ಆಫರ್​ ಅನ್ನು ಜಿಯೊ ಘೋಷಿಸಿದೆ.

Jio Offers Happy New Year 2024 Prepaid Plan With Extra Validity
Jio Offers Happy New Year 2024 Prepaid Plan With Extra Validity

By ETV Bharat Karnataka Team

Published : Dec 25, 2023, 6:07 PM IST

ನವದೆಹಲಿ: ಜಿಯೋ ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ತನ್ನ ಪ್ರಿಪೇಯ್ಡ್ ಗ್ರಾಹಕರಿಗಾಗಿ "ಹ್ಯಾಪಿ ನ್ಯೂ ಇಯರ್ ಆಫರ್ 2024" ರಿಚಾರ್ಜ್ ಪ್ಯಾಕ್ ಘೋಷಿಸಿದೆ. ಈ ಹಿಂದೆ ಇದ್ದ 2,999 ರೂ.ಗಳ ಪ್ಲಾನ್ ಅನ್ನು ಮಾರ್ಪಡಿಸಲಾಗಿದ್ದು, ಇದರ ವ್ಯಾಲಿಡಿಟಿಯನ್ನು ಹೆಚ್ಚಿಸಲಾಗಿದೆ. ಈಗ ಹ್ಯಾಪಿ ನ್ಯೂ ಇಯರ್ ಆಫರ್ 2024ರ ಪ್ರಕಾರ ನೀವು 2,999 ರೂ. ಪ್ಲಾನ್ ರಿಚಾರ್ಜ್ ಮಾಡಿಸಿದರೆ 365 ದಿನಗಳ ಮೂಲ ವ್ಯಾಲಿಡಿಟಿಯೊಂದಿಗೆ 24 ದಿನಗಳ ಹೆಚ್ಚುವರಿ ವ್ಯಾಲಿಡಿಟಿ ಸಿಗಲಿದೆ.

ಪ್ಲಾನ್‌ನ ಉಳಿದ ಎಲ್ಲ ಆಫರ್​ಗಳು ಮೊದಲಿನಂತೆಯೇ ಇರಲಿವೆ. ಅಂದರೆ ಈ ಪ್ಲಾನ್​ನಲ್ಲಿ ನೀವು 365 ದಿನ + 24 ದಿನಗಳವರೆಗೆ ಅನಿಯಮಿತ ಕರೆ ಸೌಲಭ್ಯ ಪಡೆಯುವಿರಿ. ಈ ಪ್ಲಾನ್ ದಿನಕ್ಕೆ 2.5 ಜಿಬಿ 4ಜಿ ಡೇಟಾ ಮತ್ತು ಅನಿಯಮಿತ 5ಜಿ ಡೇಟಾ ನೀಡುತ್ತದೆ ಹಾಗೂ ಪ್ರತಿದಿನ 100 ಎಸ್​ಎಂಎಸ್​ ಕಳುಹಿಸಬಹುದು.

ಈಗ ಹೊಸ ವಿಸ್ತರಿತ ಅವಧಿಯ ಪ್ಲಾನ್ ಬಳಕೆದಾರರ ದೈನಂದಿನ ವೆಚ್ಚವನ್ನು ಕಡಿಮೆ ಮಾಡುತ್ತದೆ. ಈ ಮುನ್ನ 365 ದಿನಕ್ಕೆ 2,999 ರೂ.ಗಳ ಪ್ಲಾನ್ ರಿಚಾರ್ಜ್ ಮಾಡಿದಾಗ ದಿನಕ್ಕೆ ಸರಾಸರಿ 8.21 ರೂ. ವೆಚ್ಚವಾಗುತ್ತಿತ್ತು. ಆದರೆ ಅದು ಈಗ 7.70 ರೂ.ಗೆ ಇಳಿಯುತ್ತದೆ. ಜೊತೆಗೆ ಒಟ್ಟಾರೆ 389 ದಿನಗಳವರೆಗೆ ಪ್ರತಿದಿನ 2.5 ಜಿಬಿ 4ಜಿ ಡೇಟಾ ನಿಮಗೆ ಸಿಗಲಿದೆ.

ಈ ಪ್ರಿಪೇಯ್ಡ್ ಯೋಜನೆಯಲ್ಲಿ ಜಿಯೋ ಟಿವಿ, ಜಿಯೋ ಸಿನೆಮಾ ಮತ್ತು ಜಿಯೋಕ್ಲೌಡ್​ ಸೇವೆಗಳು ಸೇರಿರುತ್ತವೆ. ಈ ಪ್ಯಾಕೇಜ್​ನಲ್ಲಿ ಸಿಗುವ ಜಿಯೋ ಸಿನೆಮಾ ಚಂದಾದಾರಿಕೆ ಜಿಯೋ ಸಿನೆಮಾ ಪ್ರೀಮಿಯಂ ಚಂದಾದಾರಿಕೆ ಅಲ್ಲ ಎಂಬುದು ಗೊತ್ತಿರಲಿ. ಜಿಯೋ ಸಿನೆಮಾ ಬೇಕಾದರೆ ಇದನ್ನು ನೀವು ಪ್ರತ್ಯೇಕವಾಗಿ 1,499 ರೂ.ಗೆ ಖರೀದಿಸಬೇಕಾಗುತ್ತದೆ. ಜಿಯೋ ಟಿವಿ ಪ್ರೀಮಿಯಂ ಚಂದಾದಾರಿಕೆಯಲ್ಲಿ ಒಂದೇ ಯೋಜನೆಯಡಿ 14 ವಿವಿಧ ಒಟಿಟಿ ಅಪ್ಲಿಕೇಶನ್​ಗಳ ಕಂಟೆಂಟ್​ ಅನ್ನು ನೀವು ನೋಡಬಹುದು.

ಅಮೆಜಾನ್ ಪ್ರೈಮ್ ಜೊತೆಗೆ ರಿಚಾರ್ಜ್ ಪ್ಯಾಕ್ ಘೋಷಿಸಿದ ವಿಐ: ಈ ಹಿಂದೆ ವೊಡಾಫೋನ್ ಐಡಿಯಾ ಎಂದು ಕರೆಯಲ್ಪಡುತ್ತಿದ್ದ ಟೆಲಿಕಾಂ ನೆಟ್ವರ್ಕ್ ವಿಐ 3,199 ರೂ.ಗಳ ವಾರ್ಷಿಕ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯನ್ನು ಘೋಷಿಸಿದೆ. ಈ ರಿಚಾರ್ಜ್ ಒಂದು ವರ್ಷದ ಅವಧಿಯ ಅಮೆಜಾನ್ ಪ್ರೈಮ್ ವಿಡಿಯೋ ಚಂದಾದಾರಿಕೆಯನ್ನು ಕೂಡ ಒಳಗೊಂಡಿದೆ. 365 ದಿನಗಳ ವ್ಯಾಲಿಡಿಟಿ ಹೊಂದಿರುವ ಇದರಲ್ಲಿ ಅನಿಯಮಿತ ಕರೆ ಮಾಡಬಹುದು ಹಾಗೂ ದಿನಕ್ಕೆ 2 ಜಿಬಿ ಡೇಟಾ ಬಳಸಬಹುದು. ಜೊತೆಗೆ ದಿನಕ್ಕೆ 100 ಎಸ್​ಎಂಎಸ್​ಗಳನ್ನು ಕಳುಹಿಸಬಹುದು.

ಇದನ್ನೂ ಓದಿ: ವಿಂಡೋಸ್​ 10ಗೆ ಮೈಕ್ರೊಸಾಫ್ಟ್​ ಸಪೋರ್ಟ್ ಅಂತ್ಯ: ನಿರುಪಯುಕ್ತವಾಗಲಿವೆ 240 ಮಿಲಿಯನ್ ಪಿಸಿಗಳು

ABOUT THE AUTHOR

...view details