ವಾಷಿಂಗ್ಟನ್: ಸಹೋದರ ಮಾರ್ಕ್ ಜೊತೆ ಜುಲೈ 20 ರಂದು ತನ್ನ ಕಂಪನಿ ಬ್ಲೂ ಒರಿಜಿನನ್ನ ಪ್ರವಾಸೋದ್ಯಮ ರಾಕೆಟ್ ನ್ಯೂ ಶೆಪರ್ಡ್ ಮೂಲಕ ಬಾಹ್ಯಾಕಾಶದ ಅಂಚಿಗೆ ಹಾರಲಿದ್ದೇನೆ ಎಂದು ಅಮೆಜಾನ್ ಮತ್ತು ಬ್ಲೂ ಒರಿಜಿನ್‌ನ ಬಿಲಿಯನೇರ್ ಸಂಸ್ಥಾಪಕ ಜೆಫ್ ಬೆಜೋಸ್ ಸೋಮವಾರ ಹೇಳಿದ್ದಾರೆ.
ತನ್ನ ಕಂಪನಿಯ ಮೊದಲ ಸಬ್ ಆರ್ಬಿಟಲ್ ಸೈಟ್ ಸೀಯಿಂಗ್ ಪ್ರಯಾಣದಲ್ಲಿ ನಾನು ಮತ್ತು ಸಹೋದರ ಬಾಹ್ಯಾಕಾಶ ನೌಕೆ ನ್ಯೂ ಶೆಪರ್ಡ್‌ನ ಇಬ್ಬರು ಪ್ರಯಾಣಿಕರಾಗಿರುತ್ತೇವೆ ಎಂದು ಹೇಳಿದ್ದಾರೆ.
ಈ ಬಗ್ಗೆ ಇನ್‌ಸ್ಟಾಗ್ರಾಮ್ ಪೋಸ್ಟ್ ಮಾಡಿರುವ ಅವರು, ನಾನು, ನನ್ನ ಸಹೋದರ ಮತ್ತು ಸದ್ಯ ನಡೆಯುತ್ತಿರುವ ಹರಾಜಿನ ವಿಜೇತರ ಜೊತೆ ಜುಲೈ 20 ರಂದು ಪ್ರಾರಂಭವಾಗಲಿರುವ ಬ್ಲೂ ಒರಿಜಿನ್ ನ ಹೊಸ ಶೆಪರ್ಡ್ ಬಾಹ್ಯಾಕಾಶ ನೌಕೆಯ ಮೊದಲ ಪ್ರಯಾಣದಲ್ಲಿ ಬಾಹ್ಯಾಕಾಶಕ್ಕೆ ಪ್ರಯಾಣ ಬೆಳೆಸುವುದಾಗಿ ಹೇಳಿದ್ದಾರೆ.