ಕರ್ನಾಟಕ

karnataka

ETV Bharat / science-and-technology

ಜ.20ರಂದು ಚಂದ್ರನ ಮೇಲೆ ಇಳಿಯಲಿದೆ ಜಪಾನ್​ನ SLIM ಗಗನನೌಕೆ

Japan aims to make 1st-ever moon landing: ಮುಂದಿನ ವರ್ಷದ ಜನವರಿ 20ರಂದು ಜಪಾನ್​ನ ಬಾಹ್ಯಾಕಾಶ ನೌಕೆ ಚಂದ್ರನ ಮೇಲೆ ಸಾಫ್ಟ್​ ಲ್ಯಾಂಡಿಂಗ್‌ಗೆ ಪ್ರಯತ್ನಿಸಲಿದೆ.

Japan aims to make 1st-ever moon landing on January 20
Japan aims to make 1st-ever moon landing on January 20

By ETV Bharat Karnataka Team

Published : Dec 7, 2023, 3:02 PM IST

ಟೋಕಿಯೊ: ಜಪಾನ್ ಏರೋಸ್ಪೇಸ್ ಎಕ್ಸ್​ಪ್ಲೊರೇಶನ್ ಏಜೆನ್ಸಿಯ (ಜಾಕ್ಸಾ) ಸ್ಮಾರ್ಟ್ ಲ್ಯಾಂಡರ್ ಫಾರ್ ಇನ್ವೆಸ್ಟಿಗೇಟಿಂಗ್ ಮೂನ್ (ಸ್ಲಿಮ್ ಅಥವಾ ಎಸ್ಎಲ್ಐಎಂ) ನೌಕೆಯು ಜನವರಿ 20ರಂದು ಚಂದ್ರನ ಮೇಲ್ಮೈಯಲ್ಲಿ ಇಳಿಯುವ ನಿರೀಕ್ಷೆಯಿದೆ. ಯಶಸ್ವಿಯಾಗಿ ಲ್ಯಾಂಡ್​ ಆದಲ್ಲಿ ಇದು ಜಪಾನ್​ನ ಮೊದಲ ಯಶಸ್ವಿ ಚಂದ್ರಯಾತ್ರೆಯಾಗಲಿದೆ.

ಹಾಗೆಯೇ ಇದು ಯಶಸ್ವಿಯಾದರೆ ರಷ್ಯಾ, ಯುಎಸ್, ಚೀನಾ ಮತ್ತು ಭಾರತದ ನಂತರ ಚಂದ್ರನ ಮೇಲೆ ಯಶಸ್ವಿಯಾಗಿ ಸಾಫ್ಟ್​ ಲ್ಯಾಂಡಿಂಗ್ ಮಾಡಿದ ಐದನೇ ದೇಶ ಜಪಾನ್ ಆಗಲಿದೆ. ಎಸ್ಎಲ್ಐಎಂ ಮತ್ತು ಎಕ್ಸ್-ರೇ ಇಮೇಜಿಂಗ್ ಮತ್ತು ಸ್ಪೆಕ್ಟ್ರೋಸ್ಕೋಪಿ ಮಿಷನ್ (ಎಕ್ಸ್ಆರ್​ಐಎಸ್​ಎಂ) ಸೆಪ್ಟೆಂಬರ್​ನಲ್ಲಿ ಜಪಾನ್​ನ ಸ್ವದೇಶಿ ಎಚ್-2ಎ ರಾಕೆಟ್ ಮೂಲಕ ಉಡಾವಣೆಗೊಂಡಿತ್ತು.

2.7 ಮೀಟರ್ ಉದ್ದದ ಎಸ್ಎಲ್ಐಎಂ ಪ್ರಸ್ತುತ ಸುಗಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಜಾಕ್ಸಾ ಹೇಳಿಕೆಯಲ್ಲಿ ತಿಳಿಸಿದೆ. "ಚಂದ್ರನ ಮೇಲ್ಮೈ ಮೇಲೆ ಲ್ಯಾಂಡಿಂಗ್ ಅನ್ನು ಆರಂಭದಲ್ಲಿ ಜನವರಿ ಅಥವಾ ಫೆಬ್ರವರಿ 2024ಕ್ಕೆ ನಿಗದಿಪಡಿಸಲಾತ್ತಾದರೂ ಕಾರ್ಯಾಚರಣೆಗಳ ಸುಗಮ ಪ್ರಗತಿಯ ಆಧಾರದ ಮೇಲೆ, ಈಗ ಅದನ್ನು ಜನವರಿ 20, 2024ರ ಶನಿವಾರ ನಡೆಸಲಾಗುವುದು ಎಂದು ಅದು ಹೇಳಿದೆ.

ಇದು ಯಶಸ್ವಿಯಾದರೆ, ಸ್ಲಿಮ್ ಶಿಯೋಲಿ ಕುಳಿಯ ಇಳಿಜಾರಿನಲ್ಲಿ ಇಳಿಯಲಿದೆ. ಇದು ಚಂದ್ರನ ಹತ್ತಿರದ ಬದಿಯಲ್ಲಿ 13 ಡಿಗ್ರಿ ದಕ್ಷಿಣ ಅಕ್ಷಾಂಶ ಮತ್ತು 25 ಡಿಗ್ರಿ ಪೂರ್ವ ರೇಖಾಂಶದಲ್ಲಿದೆ. ನಿಗದಿತ ಸಮಯದಲ್ಲಿ ಲ್ಯಾಂಡಿಂಗ್ ಸಾಧ್ಯವಾಗದಿದ್ದರೆ ಮುಂದಿನ ಪ್ರಯತ್ನವನ್ನು ಫೆಬ್ರವರಿ 16, 2024 ರ ಸುಮಾರಿಗೆ ನಿಗದಿಪಡಿಸಲಾಗಿದೆ ಎಂದು ಸಂಸ್ಥೆ ಹೇಳಿದೆ.

3ನೇ ಪ್ರಯತ್ನ: ಜಪಾನಿ ಭಾಷೆಯಲ್ಲಿ "ಮೂನ್ ಸ್ನೈಪರ್" ಎಂದೂ ಕರೆಯಲ್ಪಡುವ ಸ್ಲಿಮ್, 100 ಮೀಟರ್‌ಗಿಂತ ಕಡಿಮೆ ನಿಖರತೆಯೊಂದಿಗೆ ಪಿನ್ ಪಾಯಿಂಟ್ ಲ್ಯಾಂಡಿಂಗ್ ಸಾಧಿಸುವ ಗುರಿಯನ್ನು ಹೊಂದಿದೆ" ಎಂದು ಜಾಕ್ಸಾ ಹೇಳಿದೆ. ಜಪಾನ್ ಈ ಹಿಂದೆ ಎರಡು ಚಂದ್ರನ ಲ್ಯಾಂಡಿಂಗ್ ಪ್ರಯತ್ನಗಳಲ್ಲಿ ವಿಫಲವಾಗಿದೆ.

"ಇದು ಚಂದ್ರನಂತಹ ಗುರುತ್ವಾಕರ್ಷಣೆಯ ಗ್ರಹದ ಮೇಲೆ ನಿಖರವಾಗಿ ಲ್ಯಾಂಡ್ ಆಗಲಿದೆ ಮತ್ತು ಫಲಿತಾಂಶಗಳು ಪ್ರಸ್ತುತ ಅಧ್ಯಯನದಲ್ಲಿರುವ ಅಂತರರಾಷ್ಟ್ರೀಯ ಬಾಹ್ಯಾಕಾಶ ಪರಿಶೋಧನೆಯಂತಹ ಕಾರ್ಯಕ್ರಮಗಳಿಗೆ ಕೊಡುಗೆ ನೀಡುವ ನಿರೀಕ್ಷೆಯಿದೆ" ಎಂದು ಜಾಕ್ಸಾ ಹೇಳಿಕೆಯಲ್ಲಿ ತಿಳಿಸಿದೆ.

ಈ ಮುನ್ನ ಜಪಾನ್​​ನ ಐಸ್ಪೇಸ್ ಕಂಪನಿಯು ತನ್ನ ಹಕುಟೊ-ಆರ್ ಮಿಷನ್ 1 ನೌಕೆಯನ್ನು ಮೇಲ್ಮೈಯಲ್ಲಿ ಇಳಿಸಲು ಪ್ರಯತ್ನಿಸಿತ್ತು. ಆದರೆ ಇದು ಸಾಫ್ಟ್​ವೇರ್ ದೋಷದಿಂದಾಗಿ ಚಂದ್ರನ ಮೇಲ್ಮೈಗೆ ಅಪ್ಪಳಿಸಿತ್ತು. ಇಳಿಯಬೇಕಾದ ಎತ್ತರವನ್ನು ತಪ್ಪಾಗಿ ಲೆಕ್ಕ ಹಾಕಿದ್ದರಿಂದ ಇದು ಕ್ರ್ಯಾಶ್ ಲ್ಯಾಂಡ್ ಆಗಿತ್ತು.

ಇದನ್ನೂ ಓದಿ: Redmi 13C ಬಜೆಟ್ ಸ್ಮಾರ್ಟ್​ಫೋನ್ ಬಿಡುಗಡೆ; ಬೆಲೆ ರೂ. 7,999 ರಿಂದ ಆರಂಭ

ABOUT THE AUTHOR

...view details