ನವದೆಹಲಿ: ಜಾಕ್ ಡಾರ್ಸೆ ಬೆಂಬಲಿತ ಮೈಕ್ರೊ ಬ್ಲಾಗಿಂಗ್ ಪ್ಲಾಟ್ಫಾರ್ಮ್ ಬ್ಲೂಸ್ಕೈ ಒಟ್ಟು 3.19 ಮಿಲಿಯನ್ ಪೋಸ್ಟ್‌ಗಳೊಂದಿಗೆ 1,00,000 ಕ್ಕೂ ಹೆಚ್ಚು ಬಳಕೆದಾರರನ್ನು ದಾಟಿದೆ ಮತ್ತು ಸ್ಥಿರವಾಗಿ ಬೆಳೆಯುತ್ತಿದೆ. ಬ್ಲೂಸ್ಕೈ ಇದು ಟ್ವಿಟರ್ ಮಾದರಿಯ ಪ್ಲಾಟ್ಫಾರ್ಮ್ ಆಗಿದ್ದು, ಇದನ್ನು ಟ್ವಿಟರ್ಗೆ ಪ್ರತಿಸ್ಪರ್ಧಿ ಎಂದು ಪರಿಗಣಿಸಲಾಗಿದೆ. ಆಹ್ವಾನದ ಮೂಲಕ ಮಾತ್ರ ಸೇರಬಹುದಾದ ಬ್ಲೂಸ್ಕೈ ಆಂಡ್ರಾಯ್ಡ್‌ನಲ್ಲಿ ಲಭ್ಯವಿದ್ದು, ಹಲವಾರು ಹೊಸ ವೈಶಿಷ್ಟ್ಯಗಳನ್ನು ಇದು ಹೊಂದಿದೆ. ಆರಂಭದಲ್ಲಿ ಇದನ್ನು iOS ಬಳಕೆದಾರರಿಗೆ ಫೆಬ್ರವರಿಯಲ್ಲಿ ಕ್ಲೋಸ್ಡ್ ಬೀಟಾ ಆವೃತ್ತಿಯ ಮೂಲಕ ಪರಿಚಯಿಸಲಾಗಿತ್ತು.
ಬ್ಲೂಸ್ಕೈ ಬಳಕೆದಾರರಿಗೆ ಅಲ್ಗಾರಿದಮಿಕ್ ಆಯ್ಕೆಯನ್ನು ನೀಡುವ ಗುರಿಯನ್ನು ಹೊಂದಿದೆ ಮತ್ತು ಲೈಕ್‌ಗಳು ಅಥವಾ ಬುಕ್‌ಮಾರ್ಕ್‌ಗಳನ್ನು ಟ್ರ್ಯಾಕ್ ಮಾಡಲು, ಟ್ವೀಟ್‌ಗಳನ್ನು ಎಡಿಟ್ ಮಾಡಲು, ಕೋಟ್-ಟ್ವೀಟಿಂಗ್, DM ಗಳು, ಹ್ಯಾಶ್‌ಟ್ಯಾಗ್‌ಗಳನ್ನು ಬಳಸುವುದು ಮತ್ತು ಹೆಚ್ಚಿನವುಗಳಿಗೆ ಮೂಲ ಸಾಧನಗಳನ್ನು ಒಳಗೊಂಡಿದೆ. ಅಪ್ಲಿಕೇಶನ್ ಸರಳೀಕೃತವಾದ ಬಳಕೆದಾರ ಇಂಟರ್ಫೇಸ್ ಅನ್ನು ಹೊಂದಿದೆ. ಇದರಲ್ಲಿ ನೀವು ಫೋಟೋಗಳನ್ನು ಒಳಗೊಂಡಿರುವ 256 ಅಕ್ಷರಗಳ ಪೋಸ್ಟ್ ಅನ್ನು ರಚಿಸಲು ಪ್ಲಸ್ ಬಟನ್ ಅನ್ನು ಕ್ಲಿಕ್ ಮಾಡಬಹುದು. ಟ್ವಿಟರ್ ""What's happening?" ಎಂದು ಕೇಳಿದರೆ, ಬ್ಲೂಸ್ಕೈ "What's up?" ಎಂದು ಕೇಳುತ್ತದೆ.
ಬ್ಲೂಸ್ಕೈ ಬಳಕೆದಾರರು ಖಾತೆಗಳನ್ನು ಹಂಚಿಕೊಳ್ಳಬಹುದು, ಮ್ಯೂಟ್ ಮಾಡಬಹುದು ಮತ್ತು ನಿರ್ಬಂಧಿಸಬಹುದು. ಆದರೆ ಅವುಗಳನ್ನು ಲಿಸ್ಟ್ಗಳಿಗೆ ಸೇರಿಸುವಂತಹ ಸುಧಾರಿತ ಪರಿಕರಗಳು ಇನ್ನೂ ಲಭ್ಯವಿಲ್ಲ. ಅಪ್ಲಿಕೇಶನ್‌ನ ನ್ಯಾವಿಗೇಶನ್‌ನ ಕೆಳಗಿನ ಮಧ್ಯಭಾಗದಲ್ಲಿರುವ ಡಿಸ್ಕವರ್ ಟ್ಯಾಬ್ ಉಪಯುಕ್ತವಾಗಿದೆ. ಇದು "who to follow" ಸಲಹೆಗಳನ್ನು ಮತ್ತು ಇತ್ತೀಚೆಗೆ ಪೋಸ್ಟ್ ಮಾಡಿದ ಬ್ಲೂಸ್ಕೈ ಅಪ್ಡೇಟ್ಗಳ ಫೀಡ್ ಅನ್ನು ನೀಡುತ್ತದೆ. ಇನ್ನೊಂದು ಟ್ಯಾಬ್ ನಿಮಗೆ ಟ್ವಿಟರ್‌ನಂತೆಯೇ ಲೈಕ್ಸ್, ಮರುಪೋಸ್ಟ್‌ಗಳು, ಫಾಲೋಗಳು ಮತ್ತು ಪ್ರತ್ಯುತ್ತರಗಳು ಸೇರಿದಂತೆ ನಿಮ್ಮ ನೋಟಿಫಿಕೇಶನ್ಗಳನ್ನು ಪರಿಶೀಲಿಸಲು ಅವಕಾಶ ನೀಡುತ್ತದೆ. ಆದರೆ ಇದರಲ್ಲಿ ಯಾವುದೇ DM ಗಳಿಲ್ಲ ಎಂದು ವರದಿಗಳು ಹೇಳಿವೆ.