ರೋಮ್ (ಇಟಲಿ):ಇಟಾಲಿಯನ್ ರೀಜನ್ ಲ್ಯಾಜಿಯೊದ ಕೋವಿಡ್ -19 ಲಸಿಕೆ ನೆಟ್‌ವರ್ಕ್ ಮತ್ತು ಹೆಲ್ತ್ ಲ್ಯಾಜಿಯೊ ಪೋರ್ಟಲ್ ಸೇರಿದಂತೆ, ಆನ್‌ಲೈನ್ ಆರೋಗ್ಯ ವ್ಯವಸ್ಥೆಯ ನೆಟ್‌ವರ್ಕ್ ಹ್ಯಾಕರ್ ದಾಳಿಗೆ ಒಳಗಾಗಿದ್ದು, ನೆಟ್‌ವರ್ಕ್ ಅನ್ನು ನಿಷ್ಕ್ರಿಯಗೊಳಿಸಲಾಗಿದೆ. ಜನಸಂಖ್ಯೆ ದೃಷ್ಟಿಯಿಂದ ಲ್ಯಾಜಿಯೊ ಇಟಲಿಯ ಎರಡನೇ ಅತಿದೊಡ್ಡ ಪ್ರದೇಶವಾಗಿದೆ ಎಂದು ನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಹ್ಯಾಕರ್ ದಾಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಮಿತಿಗೊಳಿಸಲು ಲ್ಯಾಜಿಯೊ ಪ್ರಾದೇಶಿಕ ಸರ್ಕಾರವು ಎಲ್ಲ ರಕ್ಷಣಾ ಮತ್ತು ಪರಿಶೀಲನೆ ಕಾರ್ಯಾಚರಣೆಗಳನ್ನು ಆರಂಭಿಸಲಾಗಿದೆ ಎಂದು ಸಾಮಾಜಿಕ ಮಾಧ್ಯಮದ ಮೂಲಕ ಹೇಳಿದೆ.