ಕರ್ನಾಟಕ

karnataka

ETV Bharat / science-and-technology

ಐಟಿ ವಲಯದ ನೇಮಕಾತಿ ಶೇ 8 ರಿಂದ 10ರಷ್ಟು ಹೆಚ್ಚಳ ಸಾಧ್ಯತೆ: ವರದಿ - ಐಟಿ ಕ್ಷೇತ್ರ

ಮುಂದಿನ ವರ್ಷ ಭಾರತದ ಐಟಿ ವಲಯದಲ್ಲಿ ನೇಮಕಾತಿಗಳು ಹೆಚ್ಚಾಗುವ ನಿರೀಕ್ಷೆಯಿದೆ ಎಂದು ವರದಿ ಹೇಳಿದೆ.

Hiring in Indian IT sector likely to see turnaround with 8-10% growth in 2024
Hiring in Indian IT sector likely to see turnaround with 8-10% growth in 2024

By ETV Bharat Karnataka Team

Published : Dec 27, 2023, 2:30 PM IST

ನವದೆಹಲಿ: ಜಾಗತಿಕ ಆರ್ಥಿಕ ಕುಸಿತ ಮತ್ತು ಹೂಡಿಕೆ ಕೊರತೆಗಳ ಮಧ್ಯೆ ಉದ್ಯೋಗ ನೇಮಕಾತಿಗಳನ್ನು ಕಡಿತಗೊಳಿಸಿದ್ದ ಭಾರತದ ಐಟಿ ವಲಯದಲ್ಲಿ ಈ ವರ್ಷ ನೇಮಕಾತಿಗಳು ಹೆಚ್ಚಾಗಲಿವೆ ಎಂದು ಹೊಸ ವರದಿಯೊಂದು ಬುಧವಾರ ತೋರಿಸಿದೆ. 2024 ರಲ್ಲಿ ಐಟಿ ನೇಮಕಾತಿಗಳು ಶೇಕಡಾ 8 ರಿಂದ 10 ರಷ್ಟು ಹೆಚ್ಚಾಗಲಿವೆ ಎಂದು ಅದು ಹೇಳಿದೆ.

ಒಟ್ಟಾರೆಯಾಗಿ ಐಟಿ ಕ್ಷೇತ್ರದಲ್ಲಿ ನೇಮಕಾತಿಯು 2024 ರ ಹಣಕಾಸು ವರ್ಷದಲ್ಲಿ ಶೇಕಡಾ 12 ರಿಂದ 15 ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ವಿಶೇಷವಾಗಿ ಜಾಗತಿಕ ಸಾಮರ್ಥ್ಯ ಕೇಂದ್ರಗಳ (ಜಿಸಿಸಿ) (global capabilities centres -GCCs) ಏರಿಕೆ ಮತ್ತು ಜಾಗತಿಕ ಆರ್ಥಿಕತೆಯು ತುಲನಾತ್ಮಕವಾಗಿ ಸ್ಥಿರಗೊಳ್ಳುತ್ತಿರುವುದರಿಂದ ನೇಮಕಾತಿಗಳು ಮತ್ತೆ ಪುಟಿದೇಳಲಿವೆ ಎಂದು ಎಂದು ಟ್ಯಾಲೆಂಟ್ ಸಲ್ಯೂಷನ್ ಕಂಪನಿ ಎನ್ಎಲ್​ಬಿ ಸರ್ವೀಸಸ್ ತಿಳಿಸಿದೆ.

"ತ್ರೈಮಾಸಿಕ ದೃಷ್ಟಿಕೋನದಿಂದ ನೋಡುವುದಾದರೆ - ಆರಂಭಿಕ ತ್ರೈಮಾಸಿಕದಲ್ಲಿ ನೇಮಕಾತಿಗಳಲ್ಲಿ ಸರಾಸರಿ 8 ರಿಂದ 10 ಪ್ರತಿಶತದಷ್ಟು ಬೆಳವಣಿಗೆಯಾಗಬಹುದು. ನಂತರ ಎರಡು ಮತ್ತು ನಾಲ್ಕನೇ ತ್ರೈಮಾಸಿಕದಲ್ಲಿ ಬೇಡಿಕೆಯ ಶೇಕಡಾವಾರು 12 ರಿಂದ 14 ರವರೆಗೆ ಏರಿಕೆಯಾಗಲಿದೆ" ಎಂದು ಎನ್ಎಲ್​ಬಿ ಸರ್ವೀಸಸ್ ಸಿಇಒ ಸಚಿನ್ ಅಲುಗ್ ಹೇಳಿದ್ದಾರೆ.

2022 ಕ್ಕೆ ಹೋಲಿಸಿದರೆ 2023 ರಲ್ಲಿ ಐಟಿ ವಲಯವು ಶೇಕಡಾ 40-45 ರಷ್ಟು ಉದ್ಯೋಗಗಳ ಬೆಳವಣಿಗೆಯನ್ನು ಕಂಡಿದೆ ಎಂದು ಅಂದಾಜಿಸಲಾಗಿದೆ. 2024 ರಲ್ಲಿ, ನೇಮಕಾತಿಯು ಶೇಕಡಾ 15-20 ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಜಾಗತಿಕ ಆರ್ಥಿಕ ಹಿಂಜರಿತ ಮತ್ತು ವ್ಯವಹಾರ ಸ್ವರೂಪಗಳಲ್ಲಿನ ಬದಲಾವಣೆಯಿಂದಾಗಿ ಭಾರತದ ಐಟಿ ವಲಯವು ಈ ವರ್ಷದ ಆರಂಭಿಕ ತ್ರೈಮಾಸಿಕಗಳಲ್ಲಿ ಕುಸಿತ ಕಂಡಿದೆ. ವಾಸ್ತವವಾಗಿ, 2024 ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಐಟಿ ಉದ್ಯೋಗ ನೇಮಕಾತಿಗಳು ಕಳೆದ ಮೂರು ವರ್ಷಗಳಲ್ಲಿಯೇ ಕನಿಷ್ಠ ಮಟ್ಟಕ್ಕಿಳಿದಿವೆ ಎಂದು ವರದಿ ತಿಳಿಸಿದೆ.

ಆದಾಗ್ಯೂ ಈ ಹಣಕಾಸು ವರ್ಷದ ಮೂರನೇ ತ್ರೈಮಾಸಿಕವು ಆಶಾದಾಯಕವಾಗಿದ್ದು, ಹಸಿರು ತಂತ್ರಜ್ಞಾನ, ಎಲೆಕ್ಟ್ರಿಕ್ ವಾಹನಗಳು ಮತ್ತು ಎಐ ಮತ್ತು ಸೈಬರ್ ಭದ್ರತೆಯ ಕ್ಷೇತ್ರಗಳಲ್ಲಿ ಹೆಚ್ಚಿನ ನೇಮಕಾತಿಗಳು ನಡೆಯುವ ನಿರೀಕ್ಷೆಯಿದೆ ಎಂದು ಅಲುಗ್ ಮಾಹಿತಿ ನೀಡಿದರು.

2024ರ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಪ್ರಮುಖ ಐಟಿ ಸಂಸ್ಥೆಗಳ ನಿವ್ವಳ ಲಾಭ ಸರಾಸರಿ 3 ರಿಂದ 10 ಪ್ರತಿಶತದಷ್ಟು ಏರಿಕೆಯಾಗಿದೆ. ಆರಂಭಿಕ ಮಂದಗತಿಯ ಹೊರತಾಗಿಯೂ ಸಾಫ್ಟ್​ವೇರ್ ಡೆವಲಪ್​ಮೆಂಟ್​ (ಶೇಕಡಾ 28 ರಷ್ಟು ಬೇಡಿಕೆ), ಎಸ್ಎಪಿ ಪರಿಣತಿ (ಶೇಕಡಾ 12 ರಷ್ಟು ಬೇಡಿಕೆ), ವಾಹನ ವಿನ್ಯಾಸ (ಶೇಕಡಾ 14 ರಷ್ಟು ಬೇಡಿಕೆ) ಮತ್ತು ಪರೀಕ್ಷಾ ಕೌಶಲ್ಯಗಳು (ಶೇಕಡಾ 12 ರಷ್ಟು ಬೇಡಿಕೆ) ಈ ವಿಭಾಗಗಳಲ್ಲಿ ನೇಮಕಾತಿಗಳು ಹೆಚ್ಚಾಗಿವೆ.

ಇದನ್ನೂ ಓದಿ : ಸ್ಯಾಮ್​ಸಂಗ್ ಗ್ಯಾಲಕ್ಸಿ A15 5G, ಗ್ಯಾಲಕ್ಸಿ A25 5G ಭಾರತದಲ್ಲಿ ಬಿಡುಗಡೆ; ಬೆಲೆ ಎಷ್ಟು ಗೊತ್ತಾ?

ABOUT THE AUTHOR

...view details